ಜಗತ್ತಿನಲ್ಲಿ ಚಿಕೂನ್ ಗುನ್ಯಾದಿಂದ ಮೃತಪಟ್ಟಿರುವುದು ವರದಿಯಾಗಿಲ್ಲ. ದೆಹಲಿಯಲ್ಲಿ ಮಾತ್ರ ಆಗುತ್ತಾ?

By Internet DeskFirst Published Sep 15, 2016, 1:08 PM IST
Highlights

ನವದೆಹಲಿ (ಸೆ.14): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿಕೂನ್‌ ಗುನ್ಯಾದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್  ಜೈನ್ ಪ್ರತಿಕ್ರಿಯಿಸಿದ್ದಾರೆ. ಚಿಕೂನ್ ಗುನ್ಯಾದಿಂದ ಯಾರೂ ಸಾಯುವುದಿಲ್ಲ. ಇದು ನನ್ನ ಅಭಿಪ್ರಾಯವಲ್ಲ. ಗೂಗಲ್ ನಲ್ಲೇ   ಇದೆ ಎಂದಿದ್ದಾರೆ.

ದೆಹಲಿ ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಿ. ಚಿಕೂನ್ ಲಕ್ಷಣಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ ರಾಜ್ಯ ಸರ್ಕಾರವು ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ. ಆದರೆ ವೈದ್ಯರು ದೃಢೀಕರಣ ಮಾಡಿದರೆ ಮಾತ್ರ ಸರ್ಕಾರ ವೆಚ್ಚ ಭರಿಸುತ್ತದೆ ಜನರು ಭಯಪಟ್ಟರಲ್ಲ ಎಂದಿದ್ದಾರೆ.

ಒಂದೇ ಆಸ್ಪತ್ರೆಯಲ್ಲಿ ನಾಲ್ವರು ಮೃತಪಟ್ಟಿರುವುದರ ಬಗ್ಗೆ ಸಂಶಯಿಸುತ್ತಾ ಜಗತ್ತಿನೆಲ್ಲೆಡೆಯೂ ಚಿಕೂನ್ ಗುನ್ಯಾದಿಂದ ಮೃತಪಟ್ಟಿರುವುದು ವರದಿಯಾಗಿಲ್ಲ. ದೆಹಲಿಯಲ್ಲಿ ಮಾತ್ರ ಆಗುತ್ತಾ? ಎಂದು ಸತ್ಯೇಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.  

click me!