ಇದೆಂಥಾ ಪ್ರಗತಿ..? ದೇಶದ ಜಿಡಿಪಿ ಬೆಳವಣಿಗೆ 63.8%, ಆದರೆ ಸಂಬಳ ಹೆಚ್ಚಳ ಕೇವಲ 0.2%; ಸಂಬಳದಲ್ಲಿ ಚೀನಾ 50 ಪಟ್ಟು ಉತ್ತಮ

Published : Sep 15, 2016, 01:00 PM ISTUpdated : Apr 11, 2018, 01:08 PM IST
ಇದೆಂಥಾ ಪ್ರಗತಿ..? ದೇಶದ ಜಿಡಿಪಿ ಬೆಳವಣಿಗೆ 63.8%, ಆದರೆ ಸಂಬಳ ಹೆಚ್ಚಳ ಕೇವಲ 0.2%; ಸಂಬಳದಲ್ಲಿ ಚೀನಾ 50 ಪಟ್ಟು ಉತ್ತಮ

ಸಾರಾಂಶ

ಭಾರತದಲ್ಲಿ ಸಂಬಳ ಪ್ರಗತಿಯಲ್ಲಿ ಸಾಕಷ್ಟು ತಾರತಮ್ಯ ಮತ್ತು ಅಸಮತೋಲನಗಳಿರುವುದು ತಿಳಿದುಬಂದಿದೆ. ಹುದ್ದೆಯ ಕೆಳಹಂತದಲ್ಲಿರುವವರ ಸಂಬಳದಲ್ಲಿ ಶೇ.30ರಷ್ಟು ನೆಗಟಿವ್ ಗ್ರೋತ್ ಹೊಂದಿದ್ದಾರೆ. ಆದರೆ, ಮೇಲಿನ ಸ್ತರದಲ್ಲಿರುವವರ ಸಂಬಳ ಶೇ.30ರಷ್ಟು ಪ್ರಗತಿ ಹೊಂದಿದೆ.

ನವದೆಹಲಿ(ಸೆ. 15): ಕಳೆದ ಎಂಟು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಗಮನಾರ್ಹ ಚೇತರಿಕೆ ಹೊಂದಿದ್ದರೂ ಸಂಬಳದ ವಿಚಾರದಲ್ಲಿ ಜನರಿಗೆ ಬಹುತೇಕ ಶೂನ್ಯ ಸಂಪಾದನೆಯಾಗಿದೆ. 2008ರ ಜಾಗತಿಕ ಆರ್ಥಿಕ ಕುಸಿತದ ವರ್ಷದಿಂದೀಚೆ ದೇಶದಲ್ಲಿ ಸಂಬಳ ಹೆಚ್ಚಳವಾಗಿರುವುದು ಕೇವಲ ಶೇ.0.2 ಮಾತ್ರ. ಈ ಅವಧಿಯಲ್ಲಿ ಜಿಡಿಪಿ ಶೇ.63.8ರಷ್ಟು ಹೆಚ್ಚಳಗೊಂಡಿದ್ದರೂ ಸಂಬಳದಾರರಿಗೆ ಯಾವ ಲಾಭವೂ ದಕ್ಕಿಲ್ಲ.

ಸಂಬಳ ವಿಚಾರದಲ್ಲಿ ಭಾರತಕ್ಕಿಂತ ಚೀನಾ ದೇಶ ಎಷ್ಟೋ ಪಾಲು ಉತ್ತಮವೆನಿಸಿದೆ. ಚೀನಾದ ಸಂಬಳ ಹೆಚ್ಚಳ ಶೇ. 10.6ರಷ್ಟಾಗಿದೆ. ಅಂದರೆ ಸಂಬಳ ವಿಚಾರದಲ್ಲಿ ಭಾರತಕ್ಕಿಂತ ಚೀನಾ 50 ಪಟ್ಟು ಹೆಚ್ಚು ಉತ್ತಮವೆನಿಸಿದೆ. ಕಾರ್ನ್ ಫೆರ್ರಿ ಹೇ ಗ್ರೂಪ್ ಸಂಸ್ಥೆ ಈ ಅಂಕಿ-ಅಂಶವನ್ನು ಪತ್ತೆಹಚ್ಚಿ ಬಹಿರಂಗಪಡಿಸಿದೆ. ಈ ಅಂಕಿ-ಅಂಶದ ಪ್ರಕಾರ ಚೀನಾ, ಇಂಡೋನೇಷ್ಯಾ ಮತ್ತು ಮೆಕ್ಸಿಕೋ ದೇಶಗಳು ಅತ್ಯುತ್ತಮ ಸಂಬಳ ಪ್ರಗತಿ ಸಾಧಿಸಿವೆ.

ಇದೇ ಸಂಬಳದ ವಿಚಾರದಲ್ಲಿ ಭಾರತಕ್ಕಿಂತ ಹೀನಾಯ ಸಾಧನೆ ಹೊಂದಿರುವ ದೇಶಗಳು ಬಹಳಷ್ಟಿವೆ. ಟರ್ಕಿ(ಮೈನಸ್ 34.4%), ಅರ್ಜೆಂಟೀನಾ(ಮೈನಸ್ 18.6%), ರಷ್ಯಾ(ಮೈನಸ್ 17.1%) ಮತ್ತು ಬ್ರೆಜಿಲ್(ಮೈನಸ್ 15.3%) ದೇಶಗಳಲ್ಲಿ ಸಂಬಳ ಪಾತಾಳಕ್ಕೆ ಕುಸಿದಿವೆ. ಜಾಗತಿಕ ಆರ್ಥಿಕ ಹಿನ್ನಡೆಗೆ ಸಿಕ್ಕು ಈ ದೇಶಗಳ ಅರ್ಥವ್ಯವಸ್ಥೆ ಜರ್ಝರಿತವಾಗಿರುವುದು ಈ ಅಂಕಿ-ಅಂಶಗಳೇ ಸಾಕ್ಷಿಯಾಗಿವೆ.

ಬಡವರು ಇನ್ನಷ್ಟು ಬಡವರಾದರು:
ಭಾರತದಲ್ಲಿ ಸಂಬಳ ಪ್ರಗತಿಯಲ್ಲೂ ಸಾಕಷ್ಟು ತಾರತಮ್ಯ ಮತ್ತು ಅಸಮತೋಲನಗಳಿರುವುದು ತಿಳಿದುಬಂದಿದೆ. ಹುದ್ದೆಯ ಕೆಳಹಂತದಲ್ಲಿರುವವರ ಸಂಬಳದಲ್ಲಿ ಶೇ.30ರಷ್ಟು ನೆಗಟಿವ್ ಗ್ರೋತ್ ಹೊಂದಿದ್ದಾರೆ. ಆದರೆ, ಮೇಲಿನ ಸ್ತರದಲ್ಲಿರುವವರ ಸಂಬಳ ಶೇ.30ರಷ್ಟು ಪ್ರಗತಿ ಹೊಂದಿದೆ.

ಸಂಬಳ ವ್ಯತ್ಯಾಸಕ್ಕೆ ಕಾರಣ?
ಹಿರಿಯ ಹುದ್ದೆಗಳಿಗೆ ಹೆಚ್ಚು ಸಂಬಳ ಸಿಗಲು ಕಾರಣ ಆ ಮಟ್ಟದಲ್ಲಿ ಕೆಲಸ ಮಾಡುವ ಪರಿಣಿತಿ ಹೊಂದಿರುವವರ ಪ್ರಮಾಣ ಕಡಿಮೆ ಇರುವುದಂತೆ. ಭಾರತದಲ್ಲಿ ಕೌಶಲ್ಯವಿಲ್ಲದ ಮತ್ತು ಅರೆತರಬೇತಿ ಪಡೆದ ನೌಕರರ ಪ್ರಮಾಣದಲ್ಲಿ ತೀರಾ ಹೆಚ್ಚಾಗಿದ್ದು, ಇವರು ಕೆಳಹಂತದ ಹುದ್ದೆಗಳಿಗೆ ಮುಗಿಬೀಳುತ್ತಿದ್ದಾರೆ. ಇದರಿಂದಾಗಿ ಈ ಕೆಳಸ್ತರದ ಹುದ್ದೆಗಳಲ್ಲಿನ ಸಂಬಳದಲ್ಲಿ ಕುಸಿತವಾಗುತ್ತಿದೆ ಎಂದು ಕಾರ್ನ್ ಫೆರ್ರಿ ಹೇ ಗ್ರೂಪ್'ನವರು ವಿಶ್ಲೇಷಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ