ಯುಪಿ ಬಡ ಮುಸ್ಲಿಂ ಯುವತಿಯರಿಗೆಮದುವೆ ಸ್ಕೀಂ: ಯೋಗಿ

By Suvarna Web DeskFirst Published Apr 14, 2017, 1:49 AM IST
Highlights

ಸಾಮೂಹಿಕ ವಿವಾಹದ ವೇಳೆ ಪ್ರತಿ ನವ ವಧು-ವರರಿಗೆ .20 ಸಾವಿರ ಮತ್ತು ಇತರೆ ವೆಚ್ಚಗಳನ್ನು ಸರ್ಕಾರವೇ ವಹಿಸಿಕೊಳ್ಳುವ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ.

ಲಖನೌ: ಬಡ ಅಲ್ಪಸಂಖ್ಯಾತ ಯುವತಿಯರ ಸಾಮೂಹಿಕ ವಿವಾಹ ಏರ್ಪಡಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧರಿಸಿದೆ.

ಸಾಮೂಹಿಕ ವಿವಾಹದ ವೇಳೆ ಪ್ರತಿ ನವ ವಧು-ವರರಿಗೆ ರೂ.20 ಸಾವಿರ ಮತ್ತು ಇತರೆ ವೆಚ್ಚಗಳನ್ನು ಸರ್ಕಾರವೇ ವಹಿಸಿಕೊಳ್ಳುವ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ.

Latest Videos

ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಬರುವ ಸಿಖ್‌, ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಸಮುದಾಯಗಳ ಬಡ ಯುವತಿಯರ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಪ್ರಸ್ತಾಪವನ್ನು ಯೋಗಿ ಅವರೇ ಮುಂದಿಟ್ಟಿದ್ದಾರೆ ಎಂದು ರಾಜ್ಯದ ಸಚಿವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹ್ಸಿನ್‌ ರಾಜಾ ತಿಳಿಸಿದ್ದಾರೆ.

click me!