ಗುಮ್ನಾಮಿ ಬಾಬಾ ಅಥವಾ ನೇತಾಜಿ?: ಬಯಲಾಗಲಿದೆ ರಹಸ್ಯ!

By Web Desk  |  First Published Jul 24, 2019, 5:58 PM IST

ಶೀಘ್ರದಲ್ಲೇ ಬಯಲಾಗಲಿದೆ ಗುಮ್ನಾಮಿ ಬಾಬಾ ರಹಸ್ಯ| ನೇತಾಜಿ ಎಂದು ನಂಬಲಾದ ರಹಸ್ಯಮಯ ಗುಮ್ನಾಮಿ ಬಾಬಾ|  1985 ರವರೆಗೆ ಫೈಜಾಬಾದ್‌ನಲ್ಲಿ ವಾಸಿಸುತ್ತಿದ್ದ ಗುಮ್ನಾಮಿ ಬಾಬಾ| ನ್ಯಾ. ವಿಷ್ಣು ಸಹಾಯ್ ನೇತೃತ್ವದ ಆಯೋಗದ ವರದಿ| ಉತ್ತರಪ್ರದೇಶ ವಿಧಾನಸಭೆಯಲ್ಲಿ ಶೀಘ್ರದಲ್ಲೇ ಮಂಡನೆ|  ವಿಧಾನಸಭೆಯಲ್ಲಿ ವರದಿ ಮಂಡನೆಗೆ ಯೋಗಿ ಸಂಪುಟ ಒಪ್ಪಿಗೆ|


ಲಕ್ನೋ(ಜು.23): ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ನಂಬಲಾದ ಗುಮ್ನಾನಿ ಬಾಬಾ ರಹಸ್ಯ ಅರಿಯಲು ರಚನೆಯಾಗಿದ್ದ ನ್ಯಾ. ವಿಷ್ಣು ಸಹಾಯ್ ನೇತೃತ್ವದ ಆಯೋಗದ ವರದಿಯನ್ನು ಉತ್ತರ ಪ್ರದೇಶ ಸಚಿವ ಸಂಪುಟದಲ್ಲಿ ಇಂದು ಮಂಡಿಸಲಾಗಿದೆ .

1985 ರವರೆಗೆ ಫೈಜಾಬಾದ್‌ನಲ್ಲಿ ವಾಸಿಸುತ್ತಿದ್ದ ಗುಮ್ನಾಮಿ ಬಾಬಾ ಅಲಿಯಾಸ್ ಭಗವಾಂಜಿ, ನಿಜವಾಗಿ ನೇತಾಜಿ ಸುಭಾಸ್ ಚಂದ್ರ ಬೋಸ್ ಆಗಿದ್ದರೆ? ಎನ್ನುವ ಕುರಿತಂತೆ ಈ ವರದಿ ಸ್ಪಷ್ಟನೆ ನಿಡಲಿದೆ. 

Latest Videos

undefined

ಇನ್ನು ಈ ವರದಿಯನ್ನು ಉತ್ತರ ಪ್ರದೇಶ ಸರ್ಕಾರ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಿದ್ದು, ಗುಮ್ನಾನಿ ಬಾಬಾ ಕುರಿತಾದ ಎಲ್ಲಾ ಊಹಾಪೋಹಗಳಿಗೆ ಶೀಘ್ರವೇ ತೆರೆ ಬೀಳಲಿದೆ.

ನ್ಯಾಯಮೂರ್ತಿ ವಿಷ್ಣು ಸಹಾಯ್ ನೇತೃತ್ವದ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸುವ ಪ್ರಸ್ತಾಪಕ್ಕೆ ಯೋಗಿ ಆದಿತ್ಯನಾಥ್ ನೇತೃತ್ವದ ಸಂಪುಟ ಒಪ್ಪಿಗೆ ನೀಡಿದೆ.

click me!