
ಬೆಂಗಳೂರು(ಜು. 24) ಅತೃಪ್ತರಿಗೆ ಸ್ಪೀಕರ್ ಬರಲಿಕ್ಕೆ ಸೂಚನೆ ನೀಡಿದ್ದಾರೆ. ಅತೃಪ್ತರು ಬರಲಿ ಆಗ ಎಲ್ಲವೂ ಗೊತ್ತಾಗುತ್ತದೆ. ವಿಫ್ ಉಲ್ಲಂಘನೆ ಮಾಡಿದ್ದಕ್ಕೆ ಅವರು ಉತ್ತರ ಕೊಡಲೇಬೇಕಾಗುತ್ತೆ. ಏನು ಉತ್ತರ ನೀಡುತ್ತಾರೆ ಕಾದು ನೋಡಬೇಕು ಎಂದು ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಆಪರೇಷನ್ ಕಮಲ ಏನು ಹೊಸದಲ್ಲ, ಈ ಹಿಂದೆಯೂ ಬಿಜೆಪಿ ಮಾಡಿದೆ. ಇದಾಗ್ಲೆ ಎರಡನೆ ಬಾರಿ ಪ್ರಯತ್ನ ಮಾಡಿರೋದು. ಈ ಸಂಸ್ಕೃತಿ ಇಲ್ಲಿಗೆ ಅಂತ್ಯ ಆಗಲಿದೆ ಅನ್ನೋ ನಂಬಿಕೆ ಇದೆ ಎಂದು ಹೇಳಿದರು.
ಮೈತ್ರಿ ಮುಂದುವರಿದ್ರೆ ಯಾರಿಗೆ ಲಾಭ? ಮುರಿದರೆ ಯಾರಿಗೆ ನಷ್ಟ?
ಮಂಗಳವಾರ ನಡೆದ ವಿಶ್ವಾಸನಮತ ಪ್ರಕ್ರಿಯೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ವಿಶ್ವಾಸ ಮತ ಕಳೆದುಕೊಂಡಿತ್ತು. ಕಳೆದ ಒಂದು ತಿಂಗಳಿನಿಂದಲೂ ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ ನಡೆಯುತ್ತಲೇ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.