ಯೋಗಿ ಹೊಸ ದಾಖಲೆ: 150 ಗಂಟೆಯಲ್ಲಿ 50 ಆದೇಶಗಳು

By Suvarna Web DeskFirst Published Mar 26, 2017, 3:44 PM IST
Highlights

150 ಗಂಟೆಗಳಲ್ಲಿ ಒಬ್ಬ ಸಿಎಂ ಎಷ್ಟು ಆದೇಶ ಕೊಡಬಹುದು? ಎಷ್ಟು ಆದೇಶ ಜಾರಿ ಮಾಡಬಹುದು? ಏನ್ ಒಂದ್ ಹತ್ತು ಆದೇಶ ಜಾರಿ ಮಾಡಬಹುದು ಅಂದ್ಕೊಂಡ್ರಾ..? ಹುಬ್ಬೇರಿಸಬೇಡಿ. ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಈ ವಿಚಾರದಲ್ಲಿ ದಾಖಲೆಯನ್ನೇ ಬರೆದುಬಿಟ್ಟಿದ್ದಾರೆ.

ಲಕ್ನೋ(ಮಾ. 26): ಯೋಗಿ ಆದಿತ್ಯನಾಥ್ ಸಿಎಂ ಆಗಿದ್ದೇ ಆಗಿದ್ದು, ಉತ್ತರ ಪ್ರದೇಶ ಸರ್ಕಾರ ಕಂಪ್ಲೀಟ್ ಆ್ಯಕ್ಟಿವ್ ಆಗಿದೆ. ನೂತನ ಸಿಎಂ ಯೋಗಿ ಆದಿತ್ಯನಾಥ್, ಅಧಿಕಾರಕ್ಕೆ ಬಂದ ಕೇವಲ 150 ಗಂಟೆಗಳಲ್ಲಿ 50 ಆದೇಶ ಜಾರಿ ಮಾಡಿದ್ದಾರೆ. ಆ 50 ಆದೇಶಗಳಲ್ಲಿ ಆಯ್ದ ಕೆಲವು ಆದೇಶಗಳ ಸ್ಯಾಂಪಲ್ ಇಲ್ಲಿದೆ.

150 ಗಂಟೆ 50 ಆದೇಶ
* ಪುಂಡರನ್ನು ಮಟ್ಟ ಹಾಕಲು ಆ್ಯಂಟಿ-ರೋಮಿಯೋ ಸ್ಕ್ವಾಡ್
* ಮಾನಸ ಸರೋವರ ಯಾತ್ರಿಗಳಿಗೆ 1 ಲಕ್ಷ ರೂ. ಅನುದಾನ,
* ಸರ್ಕಾರಿ ಕಚೇರಿಗಳಲ್ಲಿ ಪಾನ್, ಗುಟ್ಕಾ ನಿಷೇಧ
* ಗೋವುಗಳ ಕಳ್ಳಸಾಗಾಣಿಕೆ ನಿಷೇಧ
* ಅಕ್ರಮ ಕಸಾಯಿಖಾನೆಗಳು ತಕ್ಷಣ ಬಂದ್
* ಸಚಿವರು ಕಚೇರಿ ಫೈಲ್'​ಗಳನ್ನು ಮನೆಗೆ ತೆಗೆದುಕೊಂಡು ಹೋಗಕೂಡದು
* ಅಧಿಕಾರಿಗಳು 15 ದಿನಗಳಲ್ಲಿ ಆಸ್ತಿ ವಿವರ ಸಲ್ಲಿಸಬೇಕು
* ನವರಾತ್ರಿ, ರಾಮನವಮಿಯಂದು 24 ಗಂಟೆ ವಿದ್ಯುತ್ ಸರಬರಾಜು
* ರೋಗಿಗಳ ದೂರು ದಾಖಲಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಌಪ್
* ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು 14 ದಿನಗಳ ಒಳಗೆ ಹಣ ನೀಡಬೇಕು
* ರೈತರ ಬೆಳೆ ಖರೀದಿಗೆ ಚತ್ತೀಸ್​ಘಡ ಮಾದರಿ ಯೋಜನೆ ರೂಪಿಸಲು ಆದೇಶ
* ಗ್ರಾಮಾಂತರ ಪ್ರದೇಶಗಳಲ್ಲಿ 3 ಸಾವಿರ ಮೆಡಿಕಲ್ ಶಾಪ್​ಗಳ ಆರಂಭಕ್ಕೆ ಆದೇಶ
* ರಾಜ್ಯಾದ್ಯಂತ ಸ್ಥಗಿತಗೊಂಡಿದ್ದ ಎಲ್ಲ ಸಹಕಾರಿ ಸಂಘಗಳ ಪುನಾರಂಭ
* ಪ್ರಧಾನ್​'ಮಂತ್ರಿ ಆವಾಸ್ ಯೋಜನಾ ಜಾರಿಗೆ ಹೊಸ ಇಲಾಖೆ ರಚನೆಗೆ ಆದೇಶ
* ಶಿಕ್ಷಕರು ಶಾಲೆಗಳಲ್ಲಿ ಟೀಶರ್ಟ್ ಧರಿಸಬಾರದು. ಮೊಬೈಲ್ ಫೋನ್ ತರಬಾರದು
* ಪ್ರತಿ ಹಳ್ಳಿಗಳಿಗೂ ರಸ್ತೆ ಸಂಪರ್ಕ ಕಲ್ಪಿಸಲು ಸೂಚನೆ

ಇವು ಕೇವಲ ಸ್ಯಾಂಪಲ್ ಮಾತ್ರ. ಇಷ್ಟೂ ಆದೇಶಗಳಲ್ಲಿ ಯೋಗಿ ಆದಿತ್ಯನಾಥ್ ಗಮನ ಹರಿಸಿರುವ ಕ್ಷೇತ್ರಗಳಾದರೂ ಯಾವುವು ಗೊತ್ತೇ..?

ಸಿಎಂ ಯೋಗಿ ಆದಿತ್ಯನಾಥ್ ಆದ್ಯತೆ
* ಅಕ್ರಮ ಕಸಾಯಿ ಖಾನೆ ಬಂದ್, ಗೋರಕ್ಷಣೆಗೆ ಆದ್ಯತೆ
* ರೈತರು, ಕಬ್ಬು ಬೆಳೆಗಾರರ ಮೇಲೆ ವಿಶೇಷ ಗಮನ
* ಪುಂಡರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಗಮನ
* ಭ್ರಷ್ಟಾಚಾರ ತಡೆಗೆ ದಿಟ್ಟ ಸಂಕಲ್ಪ
* ಆರೋಗ್ಯ ಸೇವೆಯನ್ನು ಹಳ್ಳಿಗಳಿಗೆ ತಲುಪಿಸುವತ್ತ ಗಮನ
* ಕಚೇರಿಗಳಲ್ಲಿ ಶುಚಿತ್ವ ಪಾಲನೆ. ಸ್ವಚ್ಚ ಭಾರತ್​ ಆಂದೋಲನ
* ‘ಪ್ರಧಾನ್ ಮಂತ್ರಿ’ ಆವಾಸ್ ಯೋಜನೆ ಜಾರಿಗೆ ವಿಶೇಷ ಆದ್ಯತೆ

ಅಕ್ರಮ ಕಸಾಯಿ ಖಾನೆ ಬಂದ್'​ನ ಸಂದೇಶ ಗೋರಕ್ಷಣೆ. ಇನ್ನು ರೈತರು, ಕಬ್ಬು ಬೆಳೆಗಾರರ ಮೇಲೆ ವಿಶೇಷ ಗಮನ ಕೊಡಲಾಗಿದೆ. ಪುಂಡರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಗಮನಹರಿಸಲಾಗಿದೆ. ಭ್ರಷ್ಟಾಚಾರ ತಡೆಗೆ ದಿಟ್ಟ ಸಂಕಲ್ಪ ಪ್ರತಿ ಹೆಜ್ಜೆಯಲ್ಲೂ ಕಾಣುತ್ತಿದೆ. ಆರೋಗ್ಯ ಸೇವೆಯನ್ನು ಹಳ್ಳಿಗಳಿಗೆ ತಲುಪಿಸುವುದರ ಜೊತೆಯಲ್ಲೇ ಕಚೇರಿಗಳಲ್ಲಿ ಶುಚಿತ್ವ ಪಾಲನೆ. ಸ್ವಚ್ಚ ಭಾರತ್​ ಆಂದೋಲನಕ್ಕೆ ಆದ್ಯತೆ ಕೊಟ್ಟಿದ್ದಾರೆ ಯೋಗಿ. ಇನ್ನು ಉ.ಪ್ರದೇಶದಲ್ಲಿ ಸರಿಯಾಗಿ ಜಾರಿಯಾಗದೇ ಉಳಿದಿದ್ದ ‘ಪ್ರಧಾನ್ ಮಂತ್ರಿ’ ಆವಾಸ್ ಯೋಜನೆ ಜಾರಿಗೆ ವಿಶೇಷ ಆದ್ಯತೆ ಕೊಡಲಾಗಿದೆ

ರೋಮಿಯೋಗಳಿಗೆ ಸಂಕಷ್ಟ:
ಸದ್ಯಕ್ಕೆ ಉತ್ತರಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಆ್ಯಂಟಿ-ರೋಮಿಯೋ ಸ್ಕ್ವಾಡ್. ಇದರ ನೇತೃತ್ವದಲ್ಲಿರುವುದು ಐಪಿಎಸ್ ಅಧಿಕಾರಿ ರವೀನಾ ತ್ಯಾಗಿ. ಡ್ಯೂಟಿ ಮೇಲಿದ್ದಾಗ ರವೀನಾ ಅವರಿಗೂ ಪುಂಡಪೋಕರಿಗಳ ಕಾಟ ಎದುರಾಗಿತ್ತು. ಮಫ್ತಿಯಲ್ಲಿದ್ದ ರವೀನಾ ಅವರನ್ನು ಪುಂಡರು ಚುಡಾಯಿಸಿದ್ದರು.

ಇದು ಉತ್ತರ ಪ್ರದೇಶದಲ್ಲಿ ಜಾರಿಯಾಗುತ್ತಿರುವ ಆದೇಶಗಳ ಸ್ಯಾಂಪಲ್ ಮಾತ್ರ. ನೂರೈವತ್ತು ಗಂಟೆಯಲ್ಲಿ 50 ಆದೇಶ ಜಾರಿ ಮಾಡಿರುವ ಯೋಗಿ ಆದಿತ್ಯನಾಥ್, ಈಗ ದೇಶಾದ್ಯಂತ ಅತಿ ಹೆಚ್ಚು ಚರ್ಚೆಯಾಗುತ್ತಿರುವುದಂತೂ ಸುಳ್ಳಲ್ಲ.

- ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್

click me!