ಏಕರೂಪ ನಾಗರಿಕ ಸಂಹಿತೆ ಜಾರಿಗೆ ಯೋಗಿ ಆದಿತ್ಯನಾಥ್ ಆಗ್ರಹ

By Suvrna Web DeskFirst Published Apr 17, 2017, 9:17 AM IST
Highlights

'ಕೆಲವರು ತಲಾಖ್'ನಿಂದ ಮುಸ್ಲಿಂ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ದನಿಯತ್ತುತ್ತಿಲ್ಲ. ಶೋಷಣೆಯ ವಿರುದ್ಧ ಮಾತನಾಡದವರು ಕೂಡ ಸಮಾನ ಅಪರಾಧಿಗಳು. ತ್ರಿವಳಿ ತಲಾಖ್'ಅನ್ನು ರದ್ದುಗೊಳಿಸಿ ದೇಶದಲ್ಲಿಒಂದೇ ರೀತಿಯ ಕಾನೂನನ್ನು ಜಾರಿಗೊಳಿಸಬೇಕೆಂದು ಪುನರುಚ್ಚರಿಸಿದರು.

ಲಖನೌ(ಏ.17): ಮುಸ್ಲಿಂ ಮಹಿಳೆಯರನ್ನು ಶೋಷಣೆಗೊಳಪಡಿಸುತ್ತಿರುವ ತಲಾಖ್ ಕಾನೂನುನ್ನುಅಂತ್ಯಗೊಳಿಸಿ ದೇಶದಲ್ಲಿ ಸಮಾನ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗ್ರಹಿಸಿದ್ದಾರೆ.

'ಕೆಲವರು ತಲಾಖ್'ನಿಂದ ಮುಸ್ಲಿಂ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ದನಿಯತ್ತುತ್ತಿಲ್ಲ. ಶೋಷಣೆಯ ವಿರುದ್ಧ ಮಾತನಾಡದವರು ಕೂಡ ಸಮಾನ ಅಪರಾಧಿಗಳು. ತ್ರಿವಳಿ ತಲಾಖ್'ಅನ್ನು ರದ್ದುಗೊಳಿಸಿ ದೇಶದಲ್ಲಿ  ಒಂದೇ ರೀತಿಯ ಕಾನೂನನ್ನು ಜಾರಿಗೊಳಿಸಬೇಕೆಂದು ಪುನರುಚ್ಚರಿಸಿದರು.

ನಿನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿ ಕೂಡ ತಲಾಖ್'ನಿಂದ ಆಗುತ್ತಿರುವ  ಅನ್ಯಾಯಗಳ ಬಗ್ಗೆ  ಮಾತನಾಡಿ, ನಮ್ಮ ಮುಸ್ಲಿಂ ಸಹೋದರಿಯರು ಇದರಿಂದ ತೊಂದರೆಗೊಳಗಾಗುತ್ತಿದ್ದಾರೆ. ಈ ರೀತಿಯ ಕೆಟ್ಟ ಸಾಮಾಜಿಕ ನಡವಳಿಕೆಯನ್ನು ಕೊನೆಗೊಳಿಸಬೇಕಾಗಿದೆ'ಎಂದು ತಿಳಿಸಿದ್ದರು.

ಆದರೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರ, ತ್ರಿವಳಿ ತಲಾಖ್'ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ'. ಷರಿಯಾ ಕಾನೂನಿನ ವಿರುದ್ಧವಾಗಿ ತಲಾಖ್ ದುರ್ಬಳಕೆಯಾದರೆ ಮಾತ್ರ ಬಹಿಷ್ಕರಿಸಲು ಅವಕಾಶವಿದೆ'ಎಂದು ತಿಳಿಸಿದೆ.

click me!