3 ಕೋಟಿ ಕಾರು ಕೊಂಡ ಜೆಡಿಎಸ್ ನಾಯಕ! ದೇಶದಲ್ಲಿ ಮೊದಲ ಬಾರಿಗೆ ಖರೀದಿಸಿದವರು ಇವರು

By Suvarna Web DeskFirst Published Apr 17, 2017, 7:29 AM IST
Highlights

ಜಪಾನ್ಮೂಲದಟೊಯೊಟಾಕಂಪನಿಲೆಕ್ಸಸ್ನಲ್ಲಿಇಎಸ್‌ 300, ಆರ್ಎಕ್ಸ್‌ 450 ಹೈಬ್ರಿಡ್ಮತ್ತುಎಲ್ಎಕ್ಸ್‌ 450 ಡಿಮಾಡೆಲ್ಕಾರುಗಳನ್ನುಮಾರುಕಟ್ಟೆಗೆಬಿಡುಗಡೆಗೊಳಿಸಿದೆ.

ಮಂಗಳೂರಿನ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಮೊಯಿದ್ದೀನ್‌ ಬಾವಾ ಅವರಂತೆ ಅವರ ಸಹೋದರ, ಜೆಡಿಎಸ್‌ ಮುಖಂಡ ಬಿ.ಎಂ. ಫಾರೂಕ್‌ ಕೂಡ . 3 ಕೋಟಿ ವ್ಯಯಿಸಿ ಅತ್ಯಾಧುನಿಕ ಲಕ್ಶುರಿ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ.
ಮಂಗಳೂರಿನ ಫಿಜಾ ಡೆವಲಪರ್ಸ್‌ ಮಾಲೀಕರಾದ ಬಿ.ಎಂ. ಫಾರೂಕ್‌ ಜಪಾನಿನ ಲೆಕ್ಸಸ್‌ ಕಂಪನಿಯ ಅತ್ಯಾಧುನಿಕ ಎಲ್‌ಎಕ್ಸ್‌ 450 ಡಿ ಕಾರನ್ನು . 3 ಕೋಟಿ ವ್ಯಯಿಸಿ ಖರೀದಿಸಿದ್ದಾರೆ. ಈ ಕಾರನ್ನು ಖರೀದಿಸಿದ ದೇಶದ ಮೊದಲ ಗ್ರಾಹಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಸಹೋದರ, ಶಾಸಕ ಮೊಯಿದ್ದೀನ್‌ ಬಾವಾ ತಿಂಗಳ ಹಿಂದೆಯಷ್ಟೆ. 1.50 ಕೋಟಿ ಮೌಲ್ಯದ ವೋಲ್ವೋ ಎಕ್ಸ್‌ಸಿ 90 ಕಾರನ್ನು ಖರೀದಿಸಿದ್ದರು. ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿದ ಕಾರಣಕ್ಕೆ ಆ ಕಾರು ಸುದ್ದಿ ಕೂಡ ಆಗಿತ್ತು.
ಜಪಾನ್‌ ಮೂಲದ ಟೊಯೊಟಾ ಕಂಪನಿ ಲೆಕ್ಸಸ್‌ನಲ್ಲಿ ಇಎಸ್‌ 300, ಆರ್‌ಎಕ್ಸ್‌ 450 ಹೈಬ್ರಿಡ್‌ ಮತ್ತು ಎಲ್‌ಎಕ್ಸ್‌ 450 ಡಿ ಮಾಡೆಲ್‌ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಕೊಚ್ಚಿನ್‌ನ ಕುಟ್ಟಕುರನ್‌ ಗ್ರೂಪ್‌ ಎಂಡಿ ಸಾಜು ಥಾಮುಸ್‌ ಹಾಗೂ ಸಿಇಒ ಕೆ.ಐ.ಜೋಜೋ ಎಲ್‌ಎಕ್ಸ್‌ 450 ಡಿ ಕಾರನ್ನು ಮಂಗಳೂರಿನಲ್ಲಿ ಫಾರೂಕ್‌ ಅವರಿಗೆ ಹಸ್ತಾಂತರಿಸಿದರು. ಕಂಪನಿಯ ಪ್ರಧಾನ ವ್ಯವಸ್ಥಾಪಕ ಬಾಬಾ ಸಟ ಗೋಪನ್‌, ಸಂಪರ್ಕಾಧಿಕಾರಿ ಆ್ಯಂಟನಿ ರೊನಾಲ್ಡ್‌ ಜೊತೆಗಿದ್ದರು. ಕಾರು ಬೆಂಗ ಳೂರು ಇಂದಿರಾನಗರದ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ.
ಲೀಟರ್‌ಗೆ 7 ಕಿ.ಮೀ. ಮೈಲೇಜ್‌: ಎಲ್‌ಎಕ್ಸ್‌ 450 ಡಿ ಡೀಸೆಲ್‌ ಚಾಲಿತ ಕಾರಾಗಿದ್ದು, ಲೀಟರ್‌ಗೆ 7 ಕಿ.ಮೀ.ವರೆಗೆ ಮೈಲೇಜ್‌ ಕೊಡುತ್ತದೆ. ಲೆಕ್ಸಸ್‌ ಕಂಪನಿ ಭಾರತಕ್ಕೆ ಈಗಷ್ಟೆಕಾಲಿಡುತ್ತಿದೆ. ಇದರ ಡೀಲರ್‌ ಮಳಿಗೆಯನ್ನು ದೆಹಲಿ ಮತ್ತು ಬೆಂಗಳೂರಿನಲ್ಲಿ ಈಗಷ್ಟೆತೆರೆಯಲಾಗಿದೆ. ಟ್ವಿನ್‌ ಟರ್ಬೊ ಎಂಜಿನ್‌, ವಿ8 ಬರ್ನರ್‌ ಚಾರ್ಜಿಂಗ್‌ನ್ನು ಹೊಂದಿದೆ. ಏರುತಗ್ಗು ಪ್ರದೇಶಗಳಲ್ಲಿ ಸರಾಗವಾಗಿ ಚಲಿಸಬಲ್ಲ ಈ ಕಾರು, ಮರಳು ದಿಣ್ಣೆಯನ್ನು ಸುಲಭದಲ್ಲಿ ಹಾದುಹೋಗುತ್ತದೆ ಎನ್ನುತ್ತಾರೆ ಕಾರಿನ ಮಾಲೀಕರಾದ ಬಿ.ಎಂ.ಫಾರೂಕ್‌.

ಅತ್ಯಾಧುನಿಕ ಸೌಲಭ್ಯದ ಈ ಕಾರನ್ನು ದೇಶದಲ್ಲೇ ಮೊದಲ ಬಾರಿಗೆ ಖರೀದಿಸಿರುವುದು ನಾನು ಎಂಬುದಕ್ಕೆ ಹೆಮ್ಮೆಯಾಗುತ್ತಿದೆ. ಈಗಿನ ರಸ್ತೆಯ ಸನ್ನಿವೇಶದಲ್ಲಿ ಈ ಕಾರಿನ ಚಾಲನೆ ಕಷ್ಟವೇನಲ್ಲ. ಬಹಳ ಆರಾಮದಾಯಕವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಬಹುದು. ಮಂಗಳೂರಿನಂತಹ ರಸ್ತೆಗಳಲ್ಲೂ ಐಷಾರಾಮಿ ಕಾರು ಸರಾಗವಾಗಿ ಸಂಚರಿಸುತ್ತದೆ. ಇದನ್ನು ಆಟೋರಿಕ್ಷಾದಂತೆ ಸುಲಭದಲ್ಲಿ ಪಾರ್ಕಿಂಗ್‌ ಮಾಡಲು ಸಾಧ್ಯವಿದೆ.
-ಬಿ.ಎಂ.ಫಾರೂಕ್‌ ಲೆಕ್ಸಸ್‌ ಕಾರು ಮಾಲೀಕ

click me!