ಧಾರವಾಡ ದೋಸ್ತಿ ಅಭ್ಯರ್ಥಿ ಕುಲಕರ್ಣಿ ವಿಚಾರಣೆ ಸಾಧ್ಯತೆ, ಯಾವ ಪ್ರಕರಣ?

By Web DeskFirst Published Apr 8, 2019, 8:16 PM IST
Highlights

ಧಾರವಾಡ ದೋಸ್ತಿ ಅಭ್ಯರ್ಥಿ ವಿನಯ್ ಕುಲಕರ್ಣಿ ವಿಚಾರಭೆ ಎದುರಿಸಬೇಕಾಗಿದೆ. ಜಿಲ್ಲಾ ಪಂಚಾಯತ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಧಾರವಾಡ ನ್ಯಾಯಾಲಯ ನೀಡಿರುವ ಆದೇಶ ಮುಂದೆ  ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ.

ಧಾರವಾಡ[ಏ. 08] ಚುನಾವಣೆ ಸಂದರ್ಭ ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರಿಗೆ ಆತಂಕವೊಂದು ಎದುರಾಗಿದೆ.ಜಿಲ್ಲಾ ಪಂಚಾಯತ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಧಾರವಾಡ ನ್ಯಾಯಾಲಯ ವಿನಯ್ ಕುಲಕರ್ಣಿ, ಇಬ್ಬರು ಡಿವೈಎಸ್ಪಿಗಳನ್ನು ವಿಚಾರಣೆ ನಡೆಸುವಂತೆ ಆದೇಶ ನೀಡಿದೆ.

ಧಾರವಾಡ ಪ್ರಧಾನ ದಿವಾಣಿ ನ್ಯಾಯಾಲಯದ ಅದೇಶ ನೀಡಿದ್ದು, ಕೊಲೆ ಪ್ರಕರಣದಲ್ಲಿ ಸಾಕ್ಷ್ಯನಾಶ, ಜೀವ ಬೆದರಿಕೆ ಹಾಕಿದ ಆರೋಪ ಕುಲಕರ್ಣಿ ಮೇಲೆ ಇತ್ತು. ವಿನಯ್ ಕುಲಕರ್ಣಿ ವಿರುದ್ಧ ಹತ್ಯೆಯಾದ ಯೋಗೇಶ್ ಗೌಡ ಸಹೋದರ ಗುರುನಾಥಗೌಡ ಎಂಬುವರು ದೂರು ದಾಖಲಿಸಿದ್ದರು. ಕಲಂ 195 A ಅಡಿ ವಿನಯ್ ಕುಲಕರ್ಣಿ, ಡಿವೈಎಸ್ಪಿ ಗಳಾದ ತುಳಜಪ್ಪ ಸುಲ್ಪಿ, ಚಂದ್ರಶೇಖರ್ ವಿರುದ್ಧ ದೂರು ದಾಖಲಾಗಿತ್ತು.

ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್;  ಒತ್ತಡಕ್ಕೆ ಮಣಿದು ಯೂ ಟರ್ನ್ ಹೊಡೆದ್ರಾ ಮಲ್ಲಮ್ಮ?

ಧಾರವಾಡ ಹೈಕೋರ್ಟ್ ಸೂಚನೆ ಮೇರೆಗೆ ಇಂದು ಧಾರವಾಡ ಜೆಎಂಎಫ್ ಸಿ ನ್ಯಾಯಾಲಯ ಅದೇಶ. ಮಾಜಿ ಸಚಿವ ವಿನಯ್ ಕುಲಕರ್ಣಿ, ಡಿವೈಎಸ್ಪಿ ತುಳಜಪ್ಪ ಸುಲ್ಪಿ, ಚಂದ್ರಶೇಖರ ಅವರನ್ನು ವಿಚಾರಣೆಗೊಳಪಡಿಸುವಂತೆ ಸೂಚನೆ ನೀಡಿದೆ. ಹಾಗಾಗಿ  ಮಾಜಿ ಸಚಿವ್ ವಿನಯ್ ಕುಲಕರ್ಣಿ ವಿರುದ್ಧ ಎಫ್ ಐ.ಆರ್ ದಾಖಲಾಗುವ ಸಾಧ್ಯತೆ ಎದುರಾಗಿದೆ.

click me!