
ಬೆಂಗಳೂರು(ಏ. 09): ಯುವಕರ ನೆಚ್ಚಿನ ಬೈಕ್‌ಗಳಾದ ಜಾವಾ ಮತ್ತು ಯೆಜ್ಡಿ ಬೈಕ್‌ಗಳು ಲಿಮ್ಕಾ ದಾಖಲೆಯಲ್ಲಿ ಸ್ಥಾನ ಪಡೆದಿವೆ. ಬೆಂಗಳೂರು ಜಾವಾ ಯೆಜ್ಡಿ ಮೋಟಾರ್‌ಸೈಕಲ್ ಕ್ಲಬ್ ಮತ್ತು ‘ಜಾವಾ ನನ್ನ ಜೀವ' ಸಂಸ್ಥೆಯ ಸಹಯೋಗದಲ್ಲಿ ಶನಿವಾರ ನಗರದ ಪ್ರೆಸ್'ಕ್ಲಬ್'ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯ ಲೋಕೇಶ್ ಮಾತನಾಡಿ, ಯೆಜ್ಡಿ ಮತ್ತು ಜಾವಾ ಬೈಕ್'ಗಳ ಉತ್ಪಾದನೆ ಸ್ಥಗಿತಗೊಂಡು 21 ವರ್ಷ ಕಳೆದಿದೆ. ಅಂದರೆ 1996ರಲ್ಲಿ ಉತ್ಪಾದನೆ ಮತ್ತು ಮಾರಾಟ ಸ್ಥಗಿತಗೊಂಡಿದೆ. ಈ ನಡುವೆ ನಗರದಲ್ಲಿ ಇಂದಿಗೂ 537 ಬೈಕ್'ಗಳು ಸಂಚಾರ ಮುಂದುವರಿಸಿವೆ. ಅವುಗಳ ಕಾರ್ಯಕ್ಷಮತೆ ಮತ್ತು ಇನ್ನು ಕೆಲ ಮಾನದಂಡ ಆಧರಿಸಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್' ಸಂಸ್ಥೆ ಲಿಮ್ಕಾ ದಾಖಲೆಗೆ ಸೇರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಗರದಲ್ಲಿ ಜಾವಾ ಮತ್ತು ಯೆಜ್ಡಿ ಬೈಕ್ ಹೊಂದಿರುವವರು 2015ರಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡು ದಾಖಲೆ ನಿರ್ಮಿಸಿದ್ದೆವು. ಈ ವೇಳೆ ಲಿಮ್ಕಾ ಸದಸ್ಯರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದರು. ಇದೀಗ 2017ರ ಜನವರಿಯಲ್ಲಿ ಈ ಬೈಕ್'ಗಳನ್ನು ಲಿಮ್ಕಾ ದಾಖಲೆಗೆ ಸೇರ್ಪಡೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಬಿಗ್'ಬಾಸ್ ಖ್ಯಾತಿಯ ಎನ್.ಸಿ. ಅಯ್ಯಪ್ಪ, ಸಂಘದ ಸದಸ್ಯ ಚಕ್ರವರ್ತಿ ಸೇರಿದಂತೆ ಇನ್ನಿತರ ಸದಸ್ಯರು ಇದ್ದರು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.