ಕಳೆದ 5 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಏಣಗಿ ಬಾಳಪ್ಪಗೆ 103 ವರ್ಷ ವಯಸ್ಸಾಗಿತ್ತು.
ಸವದತ್ತಿ(ಆ.18): ಶತಾಯುಷಿ, ಹಿರಿಯ ರಂಗಕಲಾವಿದ ಏಣಗಿ ಬಾಳಪ್ಪ ಇಂದು ಇಹಲೋಕ ತ್ಯಜಿಸಿದ್ದಾರೆ.
ಕಳೆದ 5 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಏಣಗಿ ಬಾಳಪ್ಪಗೆ 103 ವರ್ಷ ವಯಸ್ಸಾಗಿತ್ತು. ಬಾಳಪ್ಪ ಅವರ ಮಗ ಸ್ವತಃ ವೈದ್ಯರಾಗಿದ್ದರಿಂದ ಅವರ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸವದತ್ತಿಯ ತಮ್ಮ ಸ್ವಗೃಹದಲ್ಲೇ ಏಣಗಿ ಬಾಳಪ್ಪ ಕೊನೆಯುಸಿರೆಳೆದಿದ್ದಾರೆ.
ಬಾಳಪ್ಪ ಕಿರು ಪರಿಚಯ:
ಆಡಿದ ಪ್ರಮುಖ ನಾಟಕಗಳು
ಜಗಜ್ಯೋತಿ ಬಸವೇಶ್ವರ, ಕಿತ್ತೂರ ಚನ್ನಮ್ಮ, ಮಾವಬಂದ್ನಪೋ ಮಾವ, ಅಕ್ಕಮಹಾದೇವಿ, ಕುಂಕುಮ, ದೇವರಮಗು, ಶಾಲಾ ಮಾಸ್ತರ, ಹೇಮರೆಡ್ಡಿ ಮಲ್ಲಮ್ಮ, ರಾಜಾ ಹರಿಶ್ಚಂದ್ರ, ರಾಮಾಯಣ.
ಚಲನ ಚಿತ್ರದ ನಂಟು
ಮಾಡಿ ಮಡಿದವರು, ಜನುಮದ ಜೋಡಿ, ಗಡಿಬಿಡಿ ಕೃಷ್ಣ, ಗಾನಯೋಗಿ ಪಂಚಾಕ್ಷರಿ ಗವಾಯಿ, ಪರೀಕ್ಷೆ.
ಏಣಗಿ ಬಾಳಪ್ಪ ಅಭಿನಯದ ಒಂದು ದೃಶ್ಯ:
ವೈಯಕ್ತಿಕ ಪರಿಚಯ
ಹೆಸರು - ಬಾಳಪ್ಪ ಕರಬಸಪ್ಪ ಏಣಗಿ
ತಂದೆ-ತಾಯಿ - ಕರಬಸಪ್ಪ ಮತ್ತು ಬಾಳಮ್ಮ
ಹುಟ್ಟೂರು - ಸವದತ್ತಿ ತಾಲೂಕಿನ ಏಣಗಿ
ಜನ್ಮದಿನ - 1914 ಜನೇವರಿ ತಿಂಗಳು
ಶಿಕ್ಷಣ - ಕನ್ನಡ 3ನೇ ಇಯತ್ತೆ
ಪತ್ನಿ - ಸಾವಿತ್ರಮ್ಮ ಮತ್ತು ಲಕ್ಷ್ಮೀದೇವಿ
ಮಕ್ಕಳು - ಮೊದಲ ಪತ್ನಿಯಿಂದ ಡಾ. ಬಸವರಾಜ ಏಣಗಿ, ಎಂಜಿನಿಯರ್ ಸುಭಾಷ್ ಏಣಗಿ, ನ್ಯಾಯವಾದಿ ಮೋಹನ ಏಣಗಿ, ಬಿಎಸ್‌ಸಿ ಅಗ್ರಿ ಮಾಡಿರುವ ಅರವಿಂದ ಏಣಗಿ, ರುದ್ರಮ್ಮ, ಶಕುಂತಲಾ, ಪುಷ್ಪಾ, ಎರಡನೇ ಪತ್ನಿಯಿಂದ ನಟ ದಿ. ಏಣಗಿ ನಟರಾಜ ಮತ್ತು ಭಾಗ್ಯಶ್ರೀ.
ಪ್ರಮುಖ ಪ್ರಶಸ್ತಿಗಳು
* ನಾಟ್ಯ ಗಂಧರ್ವ -1968,
* 'ಬಸವತತ್ವ ಭೂಷಣ'-1969
* ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-1970, 71, 72, 76
* ಕರ್ನಾಟಕ ರಾಜ್ಯ ಪ್ರಶಸ್ತಿ (ನಾಟಕ ಕಲೆ)-1973
* ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ 'ನಾಟಕ ಕಲಾ ನಿಪುಣ'-1978
* ಕೇಂದ್ರ ಸಂಗೀತ ನಾಟಕ ಅಕಾಡೆಮಿ-1994
* ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ-1994
* ಚಾಳುಕ್ಯ ಪ್ರಶಸ್ತಿ-2002
* ಹಂಪಿ ವಿವಿಯಿಂದ ನಾಡೋಜ ಪ್ರಶಸ್ತಿ-2005
* ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ-2006
* ಧಾರವಾಡ ಕವಿವಿಯಿಂದ ಗೌರವ ಡಾಕ್ಟರೇಟ್-2006