ನಾನು ಸುನೀಲ್ ಆಗಿದ್ರೆ ಹೀಗೆ ಮಾಡ್ತಿರಲಿಲ್ಲ: ಯಶೋಮತಿ

Published : Dec 13, 2017, 10:33 AM ISTUpdated : Apr 11, 2018, 12:36 PM IST
ನಾನು ಸುನೀಲ್ ಆಗಿದ್ರೆ ಹೀಗೆ ಮಾಡ್ತಿರಲಿಲ್ಲ: ಯಶೋಮತಿ

ಸಾರಾಂಶ

‘ಒಂದು ವೇಳೆ ಅನುಮಾನಗೊಂಡು ಸುಪಾರಿ ಕೊಟ್ಟಿದ್ದರೆಂದೇ ಊಹಿಸಿ ಕೊಂಡರೂ ನಾನೇನಾದರೂ ಸುನೀಲ್ ಹೆಗ್ಗರವಳ್ಳಿಯ ಸ್ಥಾನದಲ್ಲಿದ್ದಿದ್ದರೆ ಅವರ ಪರಮ ಗುರು ರವಿಯ ಬಗ್ಗೆ ಹೀಗೆಲ್ಲ ಮಾಧ್ಯಮದಲ್ಲಿ ಅವಮಾನಕರ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ’ ಎಂದು ಪತ್ರಕರ್ತ ರವಿ ಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು (ಡಿ.13): ‘ಒಂದು ವೇಳೆ ಅನುಮಾನಗೊಂಡು ಸುಪಾರಿ ಕೊಟ್ಟಿದ್ದರೆಂದೇ ಊಹಿಸಿ ಕೊಂಡರೂ ನಾನೇನಾದರೂ ಸುನೀಲ್ ಹೆಗ್ಗರವಳ್ಳಿಯ ಸ್ಥಾನದಲ್ಲಿದ್ದಿದ್ದರೆ ಅವರ ಪರಮ ಗುರು ರವಿಯ ಬಗ್ಗೆ ಹೀಗೆಲ್ಲ ಮಾಧ್ಯಮದಲ್ಲಿ ಅವಮಾನಕರ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ’ ಎಂದು ಪತ್ರಕರ್ತ ರವಿ ಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ತೀಕ್ಷ್ಣವಾಗಿ ಹೇಳಿದ್ದಾರೆ.

ರವಿ ಬೆಳಗೆರೆ ಬಂಧನದ ಬಳಿಕ ಮೊದಲ ಬಾರಿಗೆ ಸಹದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ‘ಮಾಧ್ಯಮಗಳ ಎದುರು ಮಾತನಾಡುತ್ತಾ ರವಿ ಬೆಳಗೆರೆ ಅವರ ವಿರುದ್ಧ ಇನ್ನೊಂದೆರಡು ಕೇಸುಗಳನ್ನು ಜಡಿಯುವಂತೆ ಪ್ರೇರೇಪಿಸುತ್ತಿರಲಿಲ್ಲ. ಜೊತೆಗೆ ಹೆದರಿ ಪೊಲೀಸ್ ರಕ್ಷಣೆ ಕೇಳುತ್ತಿರಲಿಲ್ಲ. ನಿಮ್ಮ ಕೈಯಲ್ಲೇ ಪ್ರಾಣ ಹೋಗುವುದಾದರೆ ಅದಕ್ಕಿಂತ ಹೆಚ್ಚಿನ ಸಂತೋಷ ಬೇರೆ ಏನಿದೆ? ನೀವು ನನ್ನನ್ನು ತಂದೆಯಾಗಿ, ಗುರುವಾಗಿ ಸಲುಹಿದ್ದೀರಿ ಎಂದು ಅವರ ಕೈಗೆ ಬಂದೂಕನ್ನು ನಾನೇ ಕೊಡುತ್ತಿದ್ದೆ’ ಎಂದೂ ಹೇಳಿದ್ದಾರೆ. ಮಂಗಳವಾರ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಯಶೋಮತಿ, ‘ಸುನೀಲ್ ಹೆಗ್ಗರವಳ್ಳಿಯವರು ಹಾಯ್ ಬೆಂಗಳೂರು ಕಚೇರಿಯಲ್ಲಿ ಬಹಳ ಕಾಲದಿಂದ ಸಹೋದ್ಯೋಗಿಯಾಗಿ ದುಡಿದಿದ್ದರಿಂದ ಅದಕ್ಕಿಂತ ಹೆಚ್ಚಾಗಿ ಅವರು ಸದಾ ರವಿಯ ಒಳಿತನ್ನೇ ಬಯಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ ಅಷ್ಟೆ. ಅದರ ಹೊರತಾಗಿ ಮತ್ತೆ ಯಾವ ಕಾರಣವೂ ಇಲ್ಲ’ ಎಂದು ಹೇಳಿದ್ದಾರೆ. ಊಟದ ಮುಂದೆ ಕುಳಿತರೆ ಕಣ್ತುಂಬಿ ಬರುತ್ತೆ. ಧುತ್ತನೆ ಒಂದು ಅನೂಹ್ಯ ಘಟನೆ ಎದುರಾದಾಗ ಆಘಾತ, ಆತಂಕ, ಕುತೂಹಲ, ದಿಗ್ಭ್ರಮೆಗಳು ಎಲ್ಲರ ಮನದಲ್ಲಿ ಮೂಡುವುದು ಸಹಜವೇ ಎಂದಿದ್ದಾರೆ.

ಎದೆ ಕೊಡುವಷ್ಟು ಹೃದಯ ವೈಶಾಲ್ಯ ನನಗಿಲ್ಲ:

ನನ್ನನ್ನು ಕೊಂದುಬಿಡಿ ಎಂದು ಎದೆ ಕೊಡುವಷ್ಟು ಹೃದಯ ವೈಶಾಲ್ಯತೆ ನನಗಿಲ್ಲ ಎಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಪ್ರತಿಕ್ರಿಯಿಸಿದ್ದಾರೆ. ರವಿ ಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹೆಗ್ಗರವಳ್ಳಿ, ರವಿ ಬೆಳಗೆರೆ ಪತ್ನಿಯಾಗಿ ಯಶೋಮತಿ ಅವರ ಕಾಳಜಿ ಸಾಮಾನ್ಯ. ಯಶೋಮತಿ ಅವರ ವೈಯಕ್ತಿಕ ಅಭಿಪ್ರಾಯಗಳಿಗೆ ನನ್ನ ತಕಾರರು ಇಲ್ಲ. ನನ್ನನ್ನು ಕೊಂದು ಬಿಡಿ ಎಂದು ಎದೆ ಕೊಡುವಷ್ಟು ಹೃದಯ ವೈಶಾಲ್ಯತೆ ನನಗಿಲ್ಲ. ನನಗೆ ಪತ್ನಿ, ಮಗ ಹಾಗೂ ವಯಸ್ಸಾದ ಪೋಷಕರಿದ್ದಾರೆ. ಯಶೋಮತಿಗೆ ಗಂಡ, ಮಕ್ಕಳು ಎಷ್ಟು ಮುಖ್ಯವೋ ನನಗೂ ಹಾಗೆಯೇ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ