
ಬೆಂಗಳೂರು, [ಡಿ.20]: ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಹಾಗೂ ಪ್ರಪಂಚದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ KGF ಚಿತ್ರ. ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ವಿಶ್ವದಾದ್ಯಂತ ಸುಮಾರು 2000 ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಅಭಿಮಾನಿಗಳು ಸಹ ಯಶ್ ಅವರ ವೆರೈಟಿ ಚಿತ್ರವಾದ KGF ಚಿತ್ರವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಟಿಕೆಟ್ ಗಳನ್ನು ಅಡ್ವಾನ್ಸ್ ಆಗಿ ಬುಕ್ ಮಾಡಿದ್ದಾರೆ.
ಬೆಂಗಳೂರು ಹಾರರ್! KGF ಹವಾಕ್ಕೆ ಚೆಲ್ಲಿತು ಯುವಕನ ರಕ್ತ!
ಆದ್ರೆ ಬಿಡುಗಡೆಗೆ ಮುನ್ನವೇ ಕೆಜಿಎಫ್ಗೆ ಸಂಕಷ್ಟ ಎದುರಾಗಿದೆ.ಕೆ.ಜಿ.ಎಫ್ ರಿಲೀಸ್ ಮಾಡದಂತೆ ತಡೆಯಾಜ್ಞೆ ನೀಡುವಂತೆ ರತನ್ ಹಾಗೂ ಲೋಹಿತ್ ಎಂಬುವರು ಸೆಷನ್ ಕೋರ್ಟ್ ಮೆಟ್ಟಿಲೇರಿದ್ದು, ಟೈಟಲ್ ಬದಲಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಕೆಜಿಎಪ್ ಚಿನ್ನದ ಗಣಿಯಾಗಿದ್ದು, ಅದನ್ನು ರಕ್ತಪಾತದ ಮೂಲಕ ತೋರಿಸಲು ಹೊರಟ್ಟಿದ್ದಾರೆ. ಹೀಗಾಗಿ ಕೆ.ಜಿಎಫ್ ಗೆ ಅಪಖ್ಯಾತಿ ಬರುತ್ತೆ. ಇದ್ರಿಂದ ಮುಂದಿನ ಪೀಳಿಗೆಗೆ ಕೆ.ಜಿಎಫ್ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತೆ.
2000 ಥೇಟರ್‌ಗಳಲ್ಲಿ ಕೆಜಿಎಫ್ ರಿಲೀಸ್
ಹೀಗಾಗಿ ಕೆಜಿಎಫ್ ಟೈಟಲ್ ಬದಲಿಸಬೇಕು. ಅಲ್ಲಿಯವರೆಗೂ ವರೆಗೂ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.