
ಯಾದಗಿರಿ(ಫೆ.28): ಚಿತ್ರದಲ್ಲಿ ಹಿರೋತನ ತೊರುವ ನಟ ಯಶ್ ರೈತರ ಸಮಸ್ಯೆ ಆಲಿಸಿ ತಮ್ಮ ಅಸಲಿ ಸ್ಟಾರ್'ಗಿರಿಯನ್ನು ತೊರಬೇಕಾಗಿತ್ತು. ಆದರೆ ರಾಕಿಂಗ್ ಸ್ಟಾರ್ ಯಶ್ ರೈತರ ಕನಸನ್ನು ಭಗ್ನಗೊಳಿಸಿದ ಕಾರಣ ಅವರ ಅಭಿಮಾನಿಗಳೆ ತಮ್ಮ ನಟನ ಕಾರಿಗೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ಯಶ್ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ರೈತರ ಸಮಸ್ಯೆ ಆಲಿಸಲು ಪ್ರವಾಸ ಮಾಡುತ್ತಿದ್ದಾರೆ. ಆದರೆ ಅವರ ಪ್ರವಾಸ ರೈತರ ಕಾಳಜಿಯಾಗದೆ ತಮ್ಮ ಪ್ರಚಾರಕ್ಕೆ ಪ್ರವಾಸ ಮಾಡುತ್ತಿರುವಂತೆ ಕಾಣುತ್ತಿದೆ. ನಿನ್ನೆ ಯಶ್ ಯಾದಗಿರಿ ತಾಲೂಕಿನ ಅಬ್ಬೆ ತುಮಕುರ ಮಠಕ್ಕೆ ತೆರಳಿ ಅಲ್ಲಿ ಶ್ರೀಗಳ ಆಶೀರ್ವಾದ ಪಡೆದು ನಂತರ ಶಹಾಪುರ ಮಾರ್ಗವಾಗಿ ಸುರಪುರಕ್ಕೆ ಬರುತ್ತಿದ್ದರು.
ಮಾರ್ಗ ಮಧ್ಯೆ ದೋರನಹಳ್ಳಿ ಹತ್ತಿರ ಅಭಿಮಾನಿಗಳು ಹಾಗೂ ರೈತರು ನೆಚ್ಚಿನ ನಟನಿಗಾಗಿ ಕಾದು ಕಾದು ಸುಸ್ತಾಗಿದ್ದರು. ರೈತರ ಸಮಸ್ಯೆಯನ್ನು ಆಲಿಸದೆ ಕಾರು ನಿಲ್ಲಿಸದೆ ಹೋಗುತ್ತಿರುವುದಕ್ಕೆ ಆಕ್ರೋಶಗೊಂಡ ಅಭಿಮಾನಿಗಳು ಯಶ್ ಅವರ ಕಾರಿಗೆ ಕಲ್ಲು ತೂರಾಟ ಮಾಡಿ ಕಾರಿನ ಹಿಂಬದಿಯ ಗಾಜನ್ನು ಪುಡಿ ಮಾಡಿದ್ದಾರೆ. ಜೊತೆಗೆ ಸುಮಾರು 200 ಕ್ಕೂ ಹೆಚ್ಚು ಕುರ್ಚಿಗಳನ್ನು ಜಖಂಗೊಳಿಸಿದ್ದಾರೆ. ಈ ವೇಳೆ ಪೊಲೀಸರು ಅಭಿಮಾನಿಗಳತ್ತ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.
ಪ್ರವಾಸ ಮಾಡುತ್ತೇನೆಂದು ಹೇಳುವ ಯಶ್ ರೈತರ ಜೊತೆ ಸಂವಾದ ಮಾಡದೆ ಕಾಟಚಾರಕ್ಕೆ ಬಂದು ಹೋಗುವುದು ರೈತರ ಕೋಪಕ್ಕೆ ಕಾರಣವಾಗಿದೆ. ಇನ್ನು ಮುಂದಾದರೂ ಯಶ್ ತಮ್ಮ ತಪ್ಪನ್ನು ತಿದ್ದುಕೊಂಡು ನೈಜ ರೈತಪರ ಕಾಳಜಿ ತೊರಬೇಕಿದೆ.
ವರದಿ: ಶಶಿ ಕೋರ್ವಾರ್,ಯಾದಗಿರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.