ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಸೇಡಿನ ರಾಜಕಾರಣ

Published : Feb 28, 2017, 04:01 PM ISTUpdated : Apr 11, 2018, 12:41 PM IST
ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಸೇಡಿನ ರಾಜಕಾರಣ

ಸಾರಾಂಶ

ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡದಿದ್ದರೂ ಮಾಡಿದ್ದಾರೆಂದು ಕಾಂಗ್ರೆಸ್’ನವರು ದೂರು ಕೊಟ್ಟಿದ್ದರಾದರೂ ನ್ಯಾಯಾಲಯ ಯಡಿಯೂರಪ್ಪ ಪರ ತೀರ್ಪು ಕೊಟ್ಟಿದೆ, ಎಂದು ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ (ಫೆ.28): ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪ್ರಕರಣಗಳಿಗೆ ಅಂದು ಜನ್ಮ ಕೊಟ್ಟವರು , ಈಗ ಪುನಃ ಮರುಜನ್ಮ ನೀಡುತ್ತಿರುವವರು ಕಾಂಗ್ರೆಸ್’ನವರೇ ಆಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಮಾಧ್ಯಮಗಳು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಡೈರಿ ಹಗರಣದ ಮೂಲಕ ಬೆತ್ತಲೆ ಮಾಡಿದ್ದು ಯಡಿಯೂರಪ್ಪನವರ ವಿರುದ್ಧ ಸೇಡಿನ ರಾಜಕಾರಣ ಮುಂದುವರೆಸಿದರೇ ಪುನಃ ಬೆತ್ತಲಾಗುತ್ತಾರೆಂದು ಶಿವಮೊಗ್ಗದಲ್ಲಿ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡದಿದ್ದರೂ ಮಾಡಿದ್ದಾರೆಂದು ಕಾಂಗ್ರೆಸ್’ನವರು ದೂರು ಕೊಟ್ಟಿದ್ದರಾದರೂ ನ್ಯಾಯಾಲಯ ಯಡಿಯೂರಪ್ಪ ಪರ ತೀರ್ಪು ಕೊಟ್ಟಿದೆ, ಎಂದು ಈಶ್ವರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ , ರಾಹುಲ್ ಗಾಂಧಿಗೆ ಕಾಂಗ್ರೆಸ್’ನ ಅನೇಕ ಮಂತ್ರಿಗಳು ಕಪ್ಪ ಕೊಟ್ಟಿರುವುದು ಡೈರಿಯಿಂದ ಸಾಬೀತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಡೆಸಿರುವುದು ದೇಶಕ್ಕೆ ಗೊತ್ತಾಗಿದ್ದು ಸಿಎಂ ಸಿದ್ದರಾಮಯ್ಯ ಡೈರಿ ಹಗರಣದಲ್ಲಿ ತಪ್ಪೊಪ್ಪಿಕೊಂಡು ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆ ಎದುರಿಸುವುದು ಒಳ್ಳೆಯದೆಂದು ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್