ಬಿಜೆಪಿಯಲ್ಲಿ ಭಿನ್ನಮತ, ಸಮಾವೇಶದ ಭಾಷಣದ ಸಿಡಿ ಜೊತೆ ದೆಹಲಿಯತ್ತ ಯಡಿಯೂರಪ್ಪ

Published : Apr 28, 2017, 05:46 AM ISTUpdated : Apr 11, 2018, 12:46 PM IST
ಬಿಜೆಪಿಯಲ್ಲಿ ಭಿನ್ನಮತ, ಸಮಾವೇಶದ ಭಾಷಣದ ಸಿಡಿ ಜೊತೆ ದೆಹಲಿಯತ್ತ ಯಡಿಯೂರಪ್ಪ

ಸಾರಾಂಶ

ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಇಂದು ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಬೆಂಗಳೂರು(ಎ.28): ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಇಂದು ದೆಹಲಿಗೆ ತೆರಳುವ ಸಾಧ್ಯತೆ ಇದೆ.

ನೆನ್ನೆ ನಡೆದ ಸಭೆಯಲ್ಲಾದ ಕೋಲಾಹಲದ ಬಳಿಕ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಹೆಚ್ಚಿದೆ. ಈ ವೇಳೆ ಅತೃಪ್ತ ನಾಯಕರ ನೇತೃತ್ವ ವಹಿಸಿಕೊಂಡಿರುವ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಯಡಿಯೂರಪ್ಪ ಒತ್ತಾಯಿಸಲಿದ್ದಾರೆ ಅಂತ ಮೂಲಗಳು ತಿಳಿಸಿವೆ.

ವಿಧಾನ ಪರಿಷತ್​ ಸ್ಥಾನದಿಂದ ಈಶ್ವರಪ್ಪರನ್ನು ಕೆಳಗಿಳಿಸಿ ಬೇರೊಬ್ಬರನ್ನು ಮಾಡುವಂತೆ ವರಿಷ್ಠರ ಮುಂದೆ ಯಡಿಯೂರಪ್ಪ ಪಟ್ಟು ಹಿಡಿಲಿದ್ದಾರೆ ಅಂತ ಹೇಳಲಾಗುತ್ತಿದೆ. ನಿನ್ನೆಯ ಸಮಾವೇಶದಲ್ಲಿ ಈಶ್ವರಪ್ಪ, ಯಡಿಯೂರಪ್ಪ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸಿದ್ದರು. ಅಲ್ಲದೇ ನಿನ್ನೆ ನಡೆದ ಸಮಾವೇಶದ ಭಾಷಣದ ಸಿಡಿಯನ್ನು ದೆಹಲಿಗೆ ಕೊಂಡೊಯ್ಯಲಿದ್ದಾರೆ ಎನ್ನಲಾಗಿದೆ.

ಹೀಗೆ ಆಗಿದ್ದೇ ಆದಲ್ಲ, ಈ ವಿಚಾರವಾಗಿ ಕೂಡಲೇ ರಾಜ್ಯ ಉಸ್ತುವಾರಿ ಮುರಳೀಧರರಾವ್ ಮಧ್ಯಪ್ರವೇಶಿಸಬಹುದು

-ಇಬ್ಬರೂ ನಾಯಕರ ಜೊತೆ ರ್ಚಚಿಸಿ ಭಿನ್ನಮತ ಶಮನಕ್ಕೆ ಯತ್ನ ಮಾಡಬಹುದು

-ವಿಧಾನಪರಿಷತ್ ವಿಪಕ್ಷ ನಾಯಕ ಸ್ಥಾನದಿಂದ ಈಶ್ವರಪ್ಪಗೆ ಕೊಕ್ ನೀಡಬಹುದು, ಕೇಂದ್ರ ಘಟಕದಿಂದ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಳ.

-ನೋಟಿಸ್ ನೀಡದಿದ್ದಲ್ಲಿ, ಸಭೆಯಲ್ಲಿ ಪಾಲ್ಗೊಂಡವರನ್ನು ಅಮಾನತುಗೊಳಿಸುವ ಸಾಧ್ಯತೆಗಳಿವೆ

-ರಾಯಣ್ಣ ಬ್ರಿಗೇಡ್'​ಗೆ ಬ್ರೇಕ್ ಹಾಕಿ, ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

-ಬಿಎಸ್​ವೈ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲು ಸೂಚನೆ ಕೊಡಬಹುದು

-ಇಲ್ಲವೇ ಅಂತಿಮವಾಗಿ ಪಕ್ಷದ ಎಲ್ಲಾ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸುವ ಸಾಧ್ಯತೆಗಳಿವೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!