
ಮಂಡ್ಯ(ಎ.28): ನಿನ್ನೆ ರಾತ್ರಿಯಿಂದಲೇ ಎಲ್ಲೆಡೆ ತೆರೆಕಾಣ್ತಿರೋ ತೆಲುಗಿನ ಅದ್ದೂರಿ ಬಹುಕೋಟಿ ವೆಚ್ಚದ ಬಾಹುಬಲಿ -2 ಚಿತ್ರಕ್ಕೆ ಸಕ್ಕರೆ ನಾಡು ಮಂಡ್ಯದಲ್ಲಿ ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಮಂಡ್ಯದ ಜನರು ನೀರಸ ಪ್ರತಿಕ್ರಿಯೆ ತೋರಿದ್ದಾರೆ.
ಟೀಸರ್ ಮೂಲಕವೇ ಬಹಳ ಸುದ್ದಿಯಾಗಿ ಬಳಿಕ ಕನ್ನಡಿಗರ ವಿರುದ್ಧ ಕಟ್ಟಪ್ಪ ಪಾತ್ರದಲ್ಲಿ ಕಾಣಿಸಿಕೊಂಡ ಸತ್ಯರಾಜ್ ನೀಡಿದ ವಿವಾದಾತ್ಮಕ ಹೇಳಿಕೆ ಮೂಲಕ ಬಾರೀ ಚರ್ಚೆಗೆ ಗ್ರಾಸವಾಗಿದ್ದ ಈ ಚಿತ್ರಕ್ಕೆ ಮಂಡ್ಯದಲ್ಲಿ ಪ್ರೇಕ್ಷಕರ ಬರ ಎದುರಾಗಿದೆ. ಇಂದು ಬೆಳಿಗ್ಗೆ 10 ಗಂಟೆ ಮಂಡ್ಯದ ಮೂರು ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣ್ತಿರೋ ಈ ಚಿತ್ರಕ್ಕೆ ಭಾರೀ ಜನರು ಆಗಮಿಸಲಿದ್ದಾರೆಂದು ಭಾವಿಸಿ ಚಿತ್ರಮಂದಿರಗಳು 5 ಗಂಟೆಗೆ ಟಿಕೇಟ್ ನೀಡಲು ಮುಂದಾಗಿದ್ದವು. ಆದರೆ ಮಂಡ್ಯದಲ್ಲಿ ಜನ್ರು 6 ಗಂಟೆಯಾದರೂ ಬೆರಳೆಣಿಕೆಯ ಪ್ರೇಕ್ಷಕರು ಹೊರತು ಪಡಿಸಿದರೆ ಟಿಕೇಟ್ ಪಡೆಯಲು ಪ್ರೇಕ್ಷಕರೇ ಬರಲಿಲ್ಲ.
ಬೆಳಿಗ್ಗೆ 10 ಗಂಟೆಗೆ ಮೊದಲ ಪ್ರದರ್ಶನವಿದ್ದು ಮಂಡ್ಯ ನಂದಾ,ಮಹಾವೀರ, ಮತ್ತು ಸಿದ್ದಾರ್ಥ ಚಿತ್ರಮಂದಿರದಲ್ಲಿ ಬಾಹುಬಲಿ -2 ಚಿತ್ರ ಪ್ರದರ್ಶನ ಕಾಣ್ತಿದ್ದು ಮಂಡ್ಯ ಜನರು ಯಾವ ರೀತಿ ಪ್ರತಿಕ್ರಿಯೆ ತೋರುತ್ತಾರೆ ಎಂಬುದನ್ನು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.