ದೇಶಾದ್ಯಂತ ಕಂಡ ಮೋದಿ ಅಲೆ ಜಗನ್‌ರನ್ನು ತಟ್ಟಲೇ ಇಲ್ಲ ಹೇಗೆ?

Published : Jun 02, 2019, 12:10 PM IST
ದೇಶಾದ್ಯಂತ ಕಂಡ ಮೋದಿ ಅಲೆ ಜಗನ್‌ರನ್ನು ತಟ್ಟಲೇ ಇಲ್ಲ ಹೇಗೆ?

ಸಾರಾಂಶ

ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪ್ರಚಂಡ ಬಹುಮತದೊಂದಿಗೆ ಗೆದ್ದು ಜಗನ್ಮೋಹನ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾರೆ. ಹೈಟೆಕ್ ಸಿಎಂ ಎಂದೇ ಹೆಸರಾಗಿದ್ದ ಹಾಗೂ ಪ್ರಧಾನಿ ಹುದ್ದೆಯತ್ತ ಕಣ್ಣು ನೆಟ್ಟಿದ್ದ ಚಂದ್ರಬಾಬು ನಾಯ್ಡು ಅವರನ್ನು ಜಗನ್ ಸೋಲಿಸಿದ್ದಾರೆ. 

ಬೆಂಗಳೂರು (ಜೂ. 02): ಆಂಧ್ರಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪ್ರಚಂಡ ಬಹುಮತದೊಂದಿಗೆ ಗೆದ್ದು ಜಗನ್ಮೋಹನ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾರೆ. ಹೈಟೆಕ್ ಸಿಎಂ ಎಂದೇ ಹೆಸರಾಗಿದ್ದ ಹಾಗೂ ಪ್ರಧಾನಿ ಹುದ್ದೆಯತ್ತ ಕಣ್ಣು ನೆಟ್ಟಿದ್ದ ಚಂದ್ರಬಾಬು ನಾಯ್ಡು ಅವರನ್ನು ಜಗನ್ ಸೋಲಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ದೇಶಾದ್ಯಂತ ಕಂಡ ಮೋದಿ ಅಲೆ ಜಗನ್‌ರನ್ನು ತಟ್ಟಲೇ ಇಲ್ಲ. ಇದು ಹೇಗೆ? ಟೈಮ್ಸ್ ನೌಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ನವೀನ್ ಪಟ್ನಾಯಕ್ ಈ ಸಾಧನೆಗಳೇ 5 ನೇ ಬಾರಿ ಸಿಎಂ ಆಗಲು ನೆರವಾಯ್ತಾ?

ಚುನಾವಣೆಗೂ ಮೊದಲೇ 120+ ಸೀಟು ಪಡೆಯು ವುದಾಗಿ ಹೇಳಿದ್ದಿರಿ. ಆ ಆತ್ಮವಿಶ್ವಾಸ ಎಲ್ಲಿಂದ ಬಂದಿತ್ತು?

ಇದು ದೇವರ ಆಶೀರ್ವಾದ. 14 ತಿಂಗಳು 3600 ಕಿ.ಮೀ. ಪಾದಯಾತ್ರೆ ಕೈಗೊಂಡಾಗಲೇ ಈ ನಂಬರ್ ನನ್ನ ಕಣ್ಮುಂದೆ ಬಂದಿತ್ತು. 134  ಕ್ಷೇತ್ರಗಳಲ್ಲಿ 131 ದಿನ ಖುದ್ದಾಗಿ ಪ್ರಚಾರ ನಡೆಸಿದ್ದೆ. ಪ್ರತಿ ಸಮಾ ವೇಶಕ್ಕೂ ಲಕ್ಷಾಂತರ ಜನ ಸೇರುತ್ತಿದ್ದರು. ಆ ಪಾದಯಾತ್ರೆಯನ್ನು ಕಂಡವರು ಯಾರಾದರೂ ಸುನಾಮಿ ಸಂಭವಿಸಬಹುದು ಎಂದು ಊಹಿಸಬಹುದಿತ್ತು. ವಾಸ್ತವವಾಗಿ ಚಂದ್ರಬಾಬು ನಾಯ್ಡು ಅವರಿಗೂ ಇದು ಗೊತ್ತಿತ್ತು. ಆದ್ದರಿಂದಲೇ ಅವರು ರಾಷ್ಟ್ರ ರಾಜಕಾರಣದಲ್ಲಿ ತಮಗೊಂದು ಜಾಗ ಮಾಡಿಕೊಳ್ಳಲು ಓಡಾಡುತ್ತಿದ್ದರು.

ನೀವು ಈ ಚುನಾವಣೆಯಲ್ಲಿ 23 ರ ಮ್ಯಾಜಿಕ್ ಮಾಡಿದ್ದೀರಿ. ಏನದು ಹೇಳುತ್ತೀರಾ?

ದೇವರೇ ಒಂದು ಸ್ಕ್ರಿಪ್ಟ್ ಬರೆದಾಗ ಅದು ತುಂಬಾ ಸ್ಪಷ್ಟವಾಗಿರುತ್ತದೆ. 2014 ರಲ್ಲಿ ನಮ್ಮ ಪಕ್ಷ ದಲ್ಲಿ 67 ಶಾಸಕರಿದ್ದರು. ಅದರಲ್ಲಿ 23 ಶಾಸಕರನ್ನು ಅಸಂವಿಧಾನಿಕ ವಾಗಿ ನಾಯ್ಡು ತಮ್ಮ ಕಡೆಗೆ ಎಳೆದುಕೊಂಡರು.

ಲೋಕ ಸಭಾ ಚುನಾವಣೆಯಲ್ಲಿ ನಮ್ಮ 9 ಸಂಸದರ ಪೈಕಿ 3 ಸಂಸದರನ್ನು ಎಳೆದುಕೊಂಡರು. ಮೊನ್ನೆ 23 ನೇ ತಾರೀಕು ವಿಧಾನಸಭೆಯಲ್ಲಿ ಅವರ ಪಕ್ಷ ಗಳಿಸಿದ್ದು 23 ಮತ್ತು ಲೋಕಸಭೆಯಲ್ಲಿ ಅವರ ಪಕ್ಷ ಗಳಿಸಿದ್ದು ಕೇವಲ 3 ಸೀಟು. ಅದಕ್ಕಿಂತ ಒಂದು ಸೀಟು ಕೂಡ ಹೆಚ್ಚುಕಮ್ಮಿ ಇಲ್ಲ. ವಿಶೇಷ ಅಂದರೆ ಈ ತೀರ್ಪು ಬಂದಿದ್ದೂ ೨೩ನೇ ತಾರೀಕು. ನಾನು ನಿಮ್ಮ ಎಲ್ಲ ಕರ್ಮ ವನ್ನು ಲೆಕ್ಕಹಾಕುತ್ತಿದ್ದೇನೆ, ಪ್ರತಿ ಕ್ಷಣವೂ ಗಮನಿಸುತ್ತಿದ್ದೇನೆ ಎಂದು ದೇವರೇ ಸ್ಪಷ್ಟವಾಗಿ ಹೇಳುವಂತಿದೆ ಇದು.

NDA ಮೈತ್ರಿ ಮೇಲೆ ಇದೀಗ ಮತ್ತೊಂದು ಪಕ್ಷದ ಮುನಿಸು

ಆಂಧ್ರಪ್ರದೇಶದಲ್ಲಿ ಮಾತ್ರ ಮೋದಿ ಮ್ಯಾಜಿಕ್ ಕೆಲಸ ಮಾಡಿಲ್ಲ. ಮೋದಿ ಉಳಿದೆಲ್ಲಾ ರಾಜ್ಯಗಳ ಸ್ಟಾರ್ ಆಗಿ ದ್ದರೆ ನೀವು ಆಂಧ್ರದ ಸ್ಟಾರ್! ಎನ್‌ಡಿಎ ಜೊತೆ ಸೇರುವ ಉದ್ದೇಶವಿದೆಯಾ?

ಮೋದಿಜಿ ಆಂಧ್ರವೂ ಸೇರಿ ದೇಶಾದ್ಯಂತ ಮ್ಯಾಜಿಕ್ ಮಾಡ ಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಜನ ಅವರನ್ನು ನಂಬಿ ಮತ ಹಾಕಿದ್ದಾರೆ. ಅವರೊಬ್ಬ ಉತ್ತಮ ನಾಯಕ. ಆಂಧ್ರ ಪ್ರದೇಶದ ವಿಷಯಕ್ಕೆ ಬರುವುದಾದರೆ ವಿಶೇಷ ಸ್ಥಾನಮಾನ ನೀಡುವುದಾಗಿ ಕೇಂದ್ರ ಸರ್ಕಾರಗಳು ಹೇಳುತ್ತಲೇ ಬರುತ್ತಿವೆ.

ಮೊದಲಿಗೆ ರಾಜ್ಯದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ರಾಜ್ಯವನ್ನು ಒಡೆ ದರು. ನಂತರ ರಾಜ್ಯಕ್ಕೆ ಅನ್ಯಾಯ ಎಸಗಿದರು. 2014 ರಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲೂ ಈ ಅಂಶ ಇತ್ತು. ಆದರೆ ವಿಶೇಷ ಸ್ಥಾನಮಾನ ನೀಡ ಲಿಲ್ಲ. ಮೋದಿ ಜೊತೆಗೂ ಇದನ್ನು ಮಾತನಾಡಿದ್ದೇನೆ. 

ಚುನಾವಣೆಗೂ ಮುನ್ನ ಎನ್‌ಡಿಎ 250 ಸೀಟು ದಾಟದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೆ. ಏಕೆಂದರೆ ಆಗ ಮಾತ್ರ ಬಿಜೆಪಿಯವರು ಪ್ರಾದೇಶಿಕ ಪಕ್ಷಗಳ ಬೆಂಬಲ ಕೇಳುತ್ತಿದ್ದರು. ನಾವಾಗ ಚೌಕಾಸಿ ಮಾಡಬಹುದಿತ್ತು. ಅದಕ್ಕೀಗ ಅವಕಾಶವಿಲ್ಲ. ಆದರೂ ಪ್ರಧಾನಿಯ ವರನ್ನು ಭೇಟಿಯಾದ ಸಂದರ್ಭದಲ್ಲಿ ‘ನಿಮಗೆ ನಮ್ಮ ಅಗತ್ಯ ಇಲ್ಲ. ಆದರೆ ನೀವು ಹೃದಯ ವೈಶಾಲ್ಯ ತೋರಬೇಕು. ಆಂಧ್ರಪ್ರದೇಶಕ್ಕೆ ನಿಮ್ಮ ನೆರವಿನ ಅಗತ್ಯವಿದೆ’ ಎಂದು ಕೇಳಿಕೊಂಡಿದ್ದೇನೆ. ಅವರ ಪ್ರತಿಕ್ರಿಯೆ ಧನಾತ್ಮಕವಾಗಿಯೇ ಇತ್ತು.

ಈ ಚುನಾವಣೆ ಗಾಂಧಿ ಕುಟುಂಬ ಅಥವಾ ಕಾಂಗ್ರೆಸ್‌ಗೆ ನೀಡಿದ ಸಂದೇಶ ಏನು? ನಿಮ್ಮ ತಂದೆ ಕಾಂಗ್ರೆಸ್‌ನ ಆಧಾರಸ್ತಂಭವಾಗಿದ್ದರು. ಹೀಗಾಗಿ ನೀವು ಉತ್ತರಿಸಬೇಕು.

ನಾನು ಕಾಂಗ್ರೆಸ್ ಬಿಟ್ಟು 9 ವರ್ಷಗಳೇ ಕಳೆಯಿತು. ಯಾರೂ ನನ್ನನ್ನು ಹೊರಹಾಕಲಿಲ್ಲ, ನಾನೇ ಹೊರಬಂದೆ. ಒಂದಲ್ಲ ಎರಡು ಬಾರಿ ಜನರು ಕಾಂಗ್ರೆಸ್‌ನಲ್ಲಿ ನಮಗೆ ನಂಬಿಕೆ ಇಲ್ಲ ಎಂದಿದ್ದಾರೆ. ಹಾಗಾಗಿ ಅವರ ತಂತ್ರಗಳ ಬಗ್ಗೆ ಮತ್ತೊಮ್ಮೆ ಪುನರ್ ಮನನ ಮಾಡಿಕೊಳ್ಳುವುದು ಒಳ್ಳೆಯದು. ಕಾಂಗ್ರೆಸ್ ಪಕ್ಷ ಕುಟುಂಬವೊಂದು ಮುನ್ನಡೆಸುತ್ತಿರುವ ಪಕ್ಷ. ಅದರಲ್ಲಿ ಸಂದೇಹವೇ ಇಲ್ಲ. ಅವರು ಎಂದಿಗೂ ಅದರ ಹಿಡಿತ ಬಿಟ್ಟುಕೊಡುವುದಿಲ್ಲ. 

ನಿಮ್ಮದೂ ಒಂದು ರೀತಿಯಲ್ಲಿ ಕುಟುಂಬ ರಾಜಕಾರಣವೇ ಅಲ್ಲವೇ?

ಕುಟುಂಬ ರಾಜಕಾರಣ ಪ್ರತೀ ಪ್ರದೇಶಗಳಲ್ಲಿಯೂ ಭಿನ್ನವಾಗಿರುತ್ತದೆ. ನನ್ನನ್ನು ಜನರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ರಾಜಕಾರಣದಲ್ಲಿ ವಂಶಾಡಳಿತ ಮಾಮೂಲಿ. ತಂದೆ ಒಳ್ಳೆಯ ವ್ಯಕ್ತಿಯಾಗಿದ್ದರೆ, ಮಗನೂ ಸಮರ್ಥವಾಗಿ ನಿಭಾಯಿಸಬಲ್ಲ ಎಂದು ಜನ ಭಾವಿಸುತ್ತಾರೆ. ಆದರೆ ಕೆಲವರು ಜನರ ನಂಬಿಕೆ ಉಳಿಸುತ್ತಾರೆ, ಕೆಲವರು ಸೋಲುತ್ತಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್‌ ಪಿಕ್ಸೆಲ್‌ ಫೋನ್‌, ಬೆಲೆ ಎಷ್ಟು ಕಡಿಮೆ ಗೊತ್ತಾ?