ಅಧಿಕೃತ ಆಹ್ವಾನ, ದಸರಾಕ್ಕೆ ಚಾಲನೆ ನೀಡಲಿದ್ದಾರೆ ಎಸ್‌.ಎಲ್. ಭೈರಪ್ಪ

By Web DeskFirst Published Aug 14, 2019, 6:32 PM IST
Highlights

ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ, ಲೇಖಕ, ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್‌.ಎಲ್. ಭೈರಪ್ಪ ಅವರಿಗೆ ಆಹ್ವಾನ ನೀಡಲು ಸರ್ಕಾರ ತೀರ್ಮಾನ ಮಾಡಿದೆ.

ಬೆಂಗಳೂರು(ಆ.14 ) ನಾಡಹಬ್ಬ ದಸರಾಕ್ಕೆ ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ  ಚಾಲನೆ ನೀಡಲಿದ್ದಾರೆ.  ದಸರಾ ಉತ್ಸವದ ಕುರಿತಾಗಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆ  ಭೈರಪ್ಪ ಉದ್ಘಾಟನೆ ನೆರವೇರಿಸುವ ನಿರ್ಧಾರ ತೆಗೆದುಕೊಂಡಿತು.

"

ಕರ್ನಾಟಕದ ಬಹುಭಾಗ ಪ್ರವಾಹ ಪರಿಸ್ಥಿತಿಗೆ ತುತ್ತಾಗಿರುವ ಹಿನ್ನಲೆಯಲ್ಲಿ ಈ ಬಾರಿ ಸರಳ ಮಾದರಿಯ ದಸರಾ ಆಚರಣೆ  ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.  ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಶಾಸಕ ತನ್ವೀರ್ ಸೇಠ್, ರಾಮ್ ದಾಸ್, ಎನ್.ಮಹೇಶ್, ಯತೀಂದ್ರ, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ನಾಗರಾಜ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ.ಸಿ.ಕಳಸದ್ ಹಾಗೂ ಮೈಸೂರು ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಂಬಾರಿ ಹೊತ್ತಿದ್ದ ಅರ್ಜುನನಿಗೆ ಸಂಕಷ್ಟ: ಮಾವುತ ಬಾಯ್ಬಿಟ್ಟ ಕರಾಳ ಸತ್ಯ!

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಆಗಸ್ಟ್ 20, 1931 ರದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರದಲ್ಲೂ ಸಾಧಕರಾಗಿ ಬೆಳೆದು ನಿಂತರು.

ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ.ಎ.ನಲ್ಲಿ ಸುವರ್ಣ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ "ಸತ್ಯ ಮತ್ತು ಸೌಂದರ್ಯ", ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು.

ಮೂಲ ಸಮಸ್ಯೆ ಹಿಡಿದು ಬರೆದದ್ದಕ್ಕೆ ನನ್ನ ಸಾಹಿತ್ಯ ಗಟ್ಟಿ: ಭೈರಪ್ಪ

ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು ಕನ್ನಡದ ಪ್ರಖ್ಯಾತ ಕಾದಂಬರಿಕಾರಾಗಿ ರೂಪುಗೊಂಡರು.

ಕನ್ನಡದ ಮಟ್ಟಿಗೆ ಭೈರಪ್ ಹಾಟ್ ಫೆವರೇಟ್, ಸೂಪರ್ ಹಿಟ್ ಕಾದಂಬರಿಕಾರ. ಅವರು ರಚಿಸಿದ 24  ಕಾದಂಬರಿಗಳು ಒಂದಕ್ಕಿಂತ ಒಂದು ಭಿನ್ನ. ಮಂದ್ರ, ಪರ್ವ, ಆವರಣ, ನೆಲೆ, ಸಾಕ್ಷಿ, ಅಂಚು, ತಂತು, ಕವಲು ಹೀಗೆ ಎಲ್ಲ ಕಾದಂಬರಿಗಳು ಯುವಜನರನ್ನು ಕನ್ನಡದ ಓದಿಗೆ ಹಚ್ಚಿದೆ. 

ಎಲ್ಲವೂ ಅಂದುಕೊಂಡಂತೆ ಆದರೆ  ಮೈಸೂರಿನಲ್ಲಿಯೆ ವಿದ್ಯಾಭ್ಯಾಸ ಮಾಡಿದ ಸಾಧಕರೊಬ್ಬರು ಈ ಬಾರಿ ದಸರಾ ಉದ್ಘಾಟನೆ  ಮಾಡಲಿದ್ದಾರೆ. ಕಳೆದ ಸಾರಿಯ ದಸರಾವನ್ನು ಇನ್ಫೋಸಿಸ್ ಪ್ರತಿಷ್ಠಾನದ ನೇತೃತ್ವ ವಹಿಸಿರುವ ಸುಧಾ ಮೂರ್ತಿ ಉದ್ಘಾಟನೆ ಮಾಡಿದ್ದರು.

 

click me!