ಹೇ ಭಗವಾನ್! ‘ಮೈಸೂರು ಅರಸರಿಗಿಂತಲೂ ಮುನ್ನ ಕೆಆರ್‌ಎಸ್‌ ಕನಸು ಕಂಡಿದ್ದು ಟಿಪ್ಪು!’

By Web Desk  |  First Published Nov 7, 2018, 5:15 PM IST

ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಸುದ್ದಿ ಮಾಡುತ್ತಿದೆ.ಈ ಮಧ್ಯೆ ಸಾಹಿತಿ ಭಗವಾನ್ ಸಹ ಟಿಪ್ಪು ಜಯಂತಿ ಕುರಿತು ಮಾತನಾಡಿದ್ದಲ್ಲದೇ ಕೆಆರ್ ಎಸ್ ಅಣೆಕಟ್ಟಿನ ವಿಚಾರವನ್ನು ಹೇಳಿದ್ದಾರೆ. ಹಾಗಾದರೆ ಭಗವಾನ್ ಏನು ಹೇಳಿದ್ದಾರೆ ಏನು ಎಂದು ನೋಡಿಕೊಂಡು ಬರೋಣ...


ಮಂಡ್ಯ[ನ.07]  ಆದಿಚುಂಚನಗಿರಿ ಮಠದಲ್ಲಿ ಪ್ರೊ.ಕೆ.ಎಸ್.ಭಗವಾನ್ ಪ್ರತ್ಯಕ್ಷರಾಗಿದ್ದಾರತೆ.  ವಿಚಾರವಾದಿ  ಭಗವಾನ್ ಟಿಪ್ಪು ಜಯಂತಿ ಬಗ್ಗೆಯೂ ಮಾತನಾಡಿದ್ದಾರೆ.ಟಿಪ್ಪು ಜಾತ್ಯತೀತ ರಾಜ, ತನ್ನ ಆಳ್ವಿಕೆಯಲ್ಲಿ ಎಲ್ಲಾ ಸಮುದಾಯವನ್ನು ಟಿಪ್ಪು ಸಮಾನವಾಗಿ ಕಂಡಿದ್ದಾನೆ

ಟಿಪ್ಪು ತನ್ನ ರಾಜ್ಯದ ವಿರುದ್ಧ ಇದ್ದವರನ್ನ ಮಟ್ಟ ಹಾಕಿದ. ಟಿಪ್ಪು ಯಾವ ಸಮುದಾಯಕ್ಕೂ ತೊಂದರೆ ಕೊಟ್ಟವನಲ್ಲ. ಟಿಪ್ಪು ಉಳುವವನಿಗೇ ಭೂಮಿ ಎಂಬ ಕಾನೂನು ಜಾರಿಗೆ ತಂದಿದ್ದರು. ಅವರ ಆಡಳಿತದ 15 ಮಂದಿ ಮಂತ್ರಿಗಳಲ್ಲಿ 12 ಮಂದಿ ಹಿಂದುಗಳಿದ್ದರು. ರಾಜಕೀಯಕ್ಕಾಗಿ ಟಿಪ್ಪು ಜಯಂತಿಯನ್ನು ಬಿಜೆಪಿ ಬಳಸಿಕೊಳ್ಳಲಾಗುತ್ತಿದೆ. ವೋಟಿಗಾಗಿ ಟಿಪ್ಪು ವಿರುದ್ಧ ಹೇಳಿಕೆ ನೀಡ್ತಿದ್ದಾರೆ. ಟಿಪ್ಪು ಮೈಸೂರು ರಾಜರಿಗಿಂತ ಮೊದಲೇ ಕೆ.ಆರ್.ಎಸ್. ಅಣೆಕಟ್ಟೆ ಕಟ್ಟಲು ಚಿಂತಿಸಿದ್ದ . ಆಂಗ್ಲೋ‌ ಮೈಸೂರು ಯುದ್ದದಲ್ಲಿ ಟಿಪ್ಪು ಸಾಯದಿದ್ದರೆ ಅಂದೆ ಅಣೆಕಟ್ಟೆ ನಿರ್ಮಾಣ ಆಗ್ತಿತ್ತು. ಅವತ್ತೇ ಅಣೆಕಟ್ಟೆ ನಿರ್ಮಾಣ ಆಗಿದ್ರೆ ಕರ್ನಾಟಕ- ತಮಿಳುನಾಡಿನ ನಡುವೆ ನೀರಿನ ಸಮಸ್ಯೆ ಯೇ ಇರುತ್ತಿರಲಿಲ್ಲ ಎಂದು ಭಗವಾನ್ ಹೇಳಿದರು.

Tap to resize

Latest Videos

ಅವತ್ತು ಟಿಪ್ಪು ಕೈ ಕೆಳಗೆ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಿತ್ತು. ನಿರ್ಮಿಲಾನಂದಸ್ವಾಮೀಜಿ ಅವ್ರು ವಿಚಾರವಂತರು, ಮಹಾನ್ ಮಾನವತಾವಾದಿ ಅವರೊಂದಿಗೆ ಮಾತನಾಡಿದ್ರೆ ವಿದ್ವಾಂಸರೊಂದಿಗೆ ಮಾತನಾಡಿದಷ್ಟೇ ಸಂತೋಷ ಆಗುತ್ತದೆ. ನಿರ್ಮಲಾನಂದಸ್ವಾಮೀಜಿ ಜೊತೆ ಉತ್ತಮ ಒಡನಾಟ ಇದೆ. ಅದಕ್ಕಾಗಿ ಬಂದಿದ್ದೇನೆ. ನಾನು ಬಾಲಗಂಗಾಧರ ನಾಥ ಸ್ವಾಮೀಜಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇನೆ ಎಂದು ಇದೆ ವೇಳೆ ಭಗವಾನ್ ಹೇಳಿದರು.

 

 

 

 

 

click me!