ಬಿಜೆಪಿ ಜನಾರ್ದನ ರೆಡ್ಡಿ ಮೇಲೆ ಅವಲಂಬಿತವಾಗಿಲ್ಲ:ಬಿಜೆಪಿ ಶಾಸಕ ಕಿಡಿ

By Web Desk  |  First Published Nov 7, 2018, 5:05 PM IST

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ ಮತ್ತೊಂದು ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಪ್ರತಿಕ್ರಿಯಿಸಿದ್ದು ಹೀಗೆ.


ಚಿಕ್ಕಮಗಳೂರು, (ನ.07): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯ ಮತ್ತೊಂದು ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಶಾಸಕ ಬಿಜೆಪಿ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಬಿಜೆಪಿ ಜನಾರ್ದನ ರೆಡ್ಡಿಯವರ ಮೇಲೆ ಅವಲಂಬಿತವಾಗಿ ರಾಜಕೀಯ ಮಾಡುತ್ತಿಲ್ಲ. ಅವರ ಮೇಲೆ ಮೊಕದ್ದಮೆ ದಾಖಲಾದ ನಂತರ ಪಾರ್ಟಿ ಅವರಿಗೆ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ. ಕಳೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲೂ ಅವರ ಪಾತ್ರವಿರಲಿಲ್ಲ.

Tap to resize

Latest Videos

ನಾಪತ್ತೆಯಾದ ಈ ವ್ಯಕ್ತಿ ಸಿಕ್ಕರೆ ರೆಡ್ಡಿ ಸಾಮ್ರಾಜ್ಯ ಪತನ?

ಜನಾರ್ದನ ರೆಡ್ಡಿಯವರಿಗೆ ಏನೋ ಮಾಡಿರುವುದರಿಂದ ಬಿಜೆಪಿಯನ್ನು ಮಣಿಸುತ್ತೇವೆ ಅಂತ ಕಾಂಗ್ರೆಸ್-ಜೆಡಿಎಸ್ ನವರು ಹೊಂಚು ಹಾಕಿದ್ದಾರೆ. ಆದರೆ ಬಿಜೆಪಿ ಜನಾರ್ದನ ರೆಡ್ಡಿಯವರ ಮೇಲೆ ಅಲಂಬಿತವಾಗಿರೋ ಪಾರ್ಟಿಯಲ್ಲ ಅಂತ ಅವರಿಗೆ ಅರ್ಥವಾಗುತ್ತದೆ ಎಂದು ಸಿ.ಟಿ ರವಿ ಕುಟುಕಿದರು.

ಬಂಧನ ಭೀತಿ: ರೆಡ್ಡಿ ಮುಂದಿರುವ 2 ಆಯ್ಕೆಗಳು

ಬಿಜೆಪಿಯನ್ನ ಮಣಿಸುವ ಕಾರಣಕ್ಕೆ ಜನಾರ್ದನ ರೆಡ್ಡಿಯವರನ್ನ ಟಾರ್ಗೆಟ್ ಮಾಡಿದ್ದರೆ.ಅದನ್ನು ರೆಡ್ಡಿ ಎದುರಿಸುತ್ತಾರೆ ಎಂದರು.

click me!