ಬಿಜೆಪಿ ಸೋಲಿಗೆ ಅವರು ಹೇಳಿದ ಸುಳ್ಳುಗಳೇ ಕಾರಣ

Published : Nov 07, 2018, 04:44 PM IST
ಬಿಜೆಪಿ ಸೋಲಿಗೆ ಅವರು ಹೇಳಿದ ಸುಳ್ಳುಗಳೇ ಕಾರಣ

ಸಾರಾಂಶ

ಬಿಜೆಪಿ ತಾವು ನೀಡಿದ ಒಂದು ಭರವಸೆಯನ್ನೂ ಇದುವರೆಗೂ ಈಡೇರಿಸಿಲ್ಲ. ಬಿಜೆಪಿಯವರ ಮಾತುಗಳನ್ನು ನಂಬಿ ಜನರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್ ರೇಟ್ ನೂರು ರುಪಾಯಿ ಆದ್ರೂ ಮೋದಿಗೆ ಓಟ್ ಹಾಕ್ತೀವಿ ಅನ್ನೋರು ಅವರ ಹಿಂಬಾಲಕರೇ ಹೊರತು ಸಾಮಾನ್ಯ ಜನಗಳಲ್ಲ. 

ಧಾರವಾಡ[ನ.07]: ಬಿಜೆಪಿಯವರ ಸೋಲಿಗೆ ಅವರು ಹೇಳಿರುವ ಸುಳ್ಳುಗಳೇ ಕಾರಣ. ದೇಶದ ಜನರ ಮತ್ತು ನಮ್ಮ ರೈತರ ಪರಿಸ್ಥಿತಿಯನ್ನು ಬಿಜೆಪಿಯವರು ಅದೋಗತಿಗೆ ತಳ್ಳಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ತಾವು ನೀಡಿದ ಒಂದು ಭರವಸೆಯನ್ನೂ ಇದುವರೆಗೂ ಈಡೇರಿಸಿಲ್ಲ. ಬಿಜೆಪಿಯವರ ಮಾತುಗಳನ್ನು ನಂಬಿ ಜನರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್ ರೇಟ್ ನೂರು ರುಪಾಯಿ ಆದ್ರೂ ಮೋದಿಗೆ ಓಟ್ ಹಾಕ್ತೀವಿ ಅನ್ನೋರು ಅವರ ಹಿಂಬಾಲಕರೇ ಹೊರತು ಸಾಮಾನ್ಯ ಜನಗಳಲ್ಲ. ಬಿಜೆಪಿಯವರ ಸುಳ್ಳಿಗೆ ಕರ್ನಾಟಕ ಇಂದು ನಾಂದಿ ಹಾಡಿದೆ ಎಂದು ಉಪಚುನಾವಣೆ ಫಲಿತಾಂಶವನ್ನು ಮಾಜಿ ಸಚಿವರು ವಿಶ್ಲೇಷಣೆ ಮಾಡಿದ್ದಾರೆ.  

ಮೋದಿಯವರಿಗೂ ಗೊತ್ತಾಗಿದೆ ಜನಾರ್ದನ ರೆಡ್ಡಿಯಂತವರನ್ನು ಇಟ್ಟಕೊಂಡರೆ ಏನು ಆಗತ್ತೆ ಅಂತ. ಹೀಗೆ ಮುಂದುವರೆದರೆ ದೇಶದ ಗತಿ ಏನು ಎಂಬುದನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳಬೇಕು. ಉಪಚುನಾವಣೆ ಫಲಿತಾಂಶ ದೇಶದೆಲ್ಲಡೇ 100% ಮುಂದುವರೆಯುತ್ತದೆ. ಮುಂದೆ ದೇಶದಾದ್ಯಂತ ಪುನರಾವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವೆಂಬರ್ 03ರಂದು ನಡೆದ ಪಂಚಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು 4 ಕ್ಷೇತ್ರಗಳಲ್ಲಿ ಜಯದ ನಗೆ ಬೀರಿದರೆ, ಶಿವಮೊಗ್ಗದಲ್ಲಿ ಬಿಜೆಪಿ ಪ್ರಯಾಸದ ಗೆಲುವು ಕಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ