51 ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ವಿಮಾನದ ಅವಶೇಷ ಪತ್ತೆ!

By Web DeskFirst Published Aug 20, 2019, 9:04 AM IST
Highlights

51 ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ವಿಮಾನದ ಅವಶೇಷ ಪತ್ತೆ| ಭಾರತೀಯ ವಾಯುಪಡೆಯ ಎನ್‌-12 ಸರಕು ವಿಮಾನ|  ಹಿಮಾಚಲದ ಕುಲ್ಲು ಜಿಲ್ಲೆಯ ರೋಹ್ಟಾಂಗ್‌ ಪಾಸ್‌ ಬಳಿ ನಾಪತ್ತೆಯಾಗಿದ್ದ ವಿಮಾನ

ಚಂಡೀಗಢ[ಆ.20]: ಬರೋಬ್ಬರಿ 51 ವರ್ಷಗಳ ಹಿಂದೆ ಹಿಮಾಚಲಪ್ರದೇಶದ ಹಿಮ ಪರ್ವತದಲ್ಲಿ ಸುಳಿವೇ ಸಿಗದೇ ಕಣ್ಮರೆಯಾಗಿದ್ದ ಭಾರತೀಯ ವಾಯುಪಡೆಯ ಎನ್‌-12 ಸರಕು ವಿಮಾನದ ಭಗ್ನಾವಶೇಷ ಕೊನೆಗೂ ಪತ್ತೆಯಾಗಿದೆ.

1968 ಫೆ.7 ರಂದು ಹಿಮಾಚಲದ ಕುಲ್ಲು ಜಿಲ್ಲೆಯ ರೋಹ್ಟಾಂಗ್‌ ಪಾಸ್‌ ಬಳಿ ವಿಮಾನ ನಾಪತ್ತೆಯಾಗಿತ್ತು. ಅಪಘಾತದ ವೇಳೆ ವಿಮಾನದಲ್ಲಿ 102 ಮಂದಿ ಇದ್ದರು. ಇದರ ಅವಶೇಷ ಪತ್ತೆಗೆ ಹಲವು ವರ್ಷಗಳಿಂದ ಯತ್ನ ನಡೆದಿದ್ದರೂ ಅದು ಫಲ ಕೊಟ್ಟಿರಲಿಲ್ಲ.

ಈ ನಡುವೆ ವಿಮಾನದಲ್ಲಿದ್ದ ಸೈನಿಕರ ಅವಶೇಷ ಪತ್ತೆಗೆ ಸೇನೆಯ ವೆಸ್ಟರ್ನ್‌ ಕಮಾಂಡ್‌ ಇದೇ ಜು.26 ರಂದು ಕಾರ್ಯಾಚರಣೆಗಿಳಿದಿತ್ತು. 13 ದಿನಗಳ ಕಾರ್ಯಾಚರಣೆ ಬಳಿ ಎಂಜಿನ್‌, ಎಲೆಕ್ಟ್ರಿಕ್‌ ಸಕ್ರ್ಯೂಟ್‌, ಇಂಧನ ಟ್ಯಾಂಕ್‌ ಘಟಕ ಸಹಿತ ವಿಮಾನದ ಹಲವು ಭಗ್ನಾವಶೇಷಗಳು ಹಾಗೂ ಪ್ರಯಾಣಿಕರಿಗೆ ಸೇರಿದ ವಸ್ತುಗಳು ಪತ್ತೆಯಾಗಿದೆ.

ವಿಮಾನ ನಾಪತ್ತೆಯಾದ ಬಳಿಕ, ವಿಮಾನವನ್ನು ಹೈ ಜಾಕ್‌ ಮಾಡಲಾಗಿದೆ, ಶತ್ರು ರಾಷ್ಟ್ರಗಳ ವಶದಲ್ಲಿದೆ ಎನ್ನುವ ವದಂತಿಗಳು ಹಬ್ಬಿದ್ದವು.

click me!