
ಬೀಜಿಂಗ್
ಜಗತ್ತಿನ ಅತಿ ಎತ್ತರದ ಸೇತುವೆ ಚೀನಾದಲ್ಲಿ ಲೋಕಾರ್ಪಣೆಗೊಂಡಿದೆ. ಚೀನಾದ ನೈಋತ್ಯ ಭಾಗದ ಎರಡು ಪ್ರಾಂತ್ಯಗಳನ್ನು ಜೋಡಿಸುವ ಈ ಮಹಾ ಸೇತುವೆ, ಪ್ರಸ್ತುತ ಬೇಕಾಗುತ್ತಿದ್ದ ಸಮಯದ ಶೇ. 75ರಷ್ಟು ಸಮಯವನ್ನು ಉಳಿಸುತ್ತದೆ.
ಯುನ್ನಾನ್ ಮತ್ತು ಗುಯ್'ಝೌ ಪ್ರಾಂತ್ಯಗಳ ನಡುವೆ ಸಂಪರ್ಕ ಕಲ್ಪಿಸುವ ನದಿಯೊಂದರ ಮೇಲೆ ಬೀಪಾಂಜಿಯಾಂಗ್ ಸೇತುವೆ ಸುಮಾರು 565 ಮೀಟರ್ (1,854 ಅಡಿ) ಎತ್ತರದಲ್ಲಿ ನಿರ್ಮಾಣವಾಗಿದೆ. ಯುನ್ನಾನ್'ನ ಕ್ಸುವಾನ್'ವೇಯ್‌ನಿಂದ ಗುಯ್'ಝೌನ ಶುಶೆಂಗ್‌ಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣದಿಂದ ಈ ಹಿಂದೆ ಸುತ್ತು ಬರಬೇಕಾಗಿದ್ದ ಸಮಯದಲ್ಲಿ ನಾಲ್ಕು ಗಂಟೆಗೂ ಅಧಿಕ ಸಮಯವನ್ನು ಉಳಿಸಬಹುದಾಗಿದೆ.
1,341 ಮೀಟರ್ ಉದ್ದದ ಈ ಸೇತುವೆಗೆ ₹ 977 ಕೋಟಿ ವೆಚ್ಚವಾಗಿದೆ. ಜಗತ್ತಿನ ಹತ್ತು ಅತಿ ಎತ್ತರದ ಸೇತುವೆಗಳಲ್ಲಿ ಎಂಟು ಸೇತುವೆಗಳು ಚೀನಾದಲ್ಲೇ ಇವೆ.
ಬೀಪಾಂಜಿಯಾಂಗ್ ಸೇತುವೆಯ ಪ್ರಮುಖ ಅಂಶಗಳು
ಎಲ್ಲಿ ನಿರ್ಮಾಣ: ನೈಋತ್ಯ ಚೀನಾದ ಗಯ್‌ಝೌ ಮತ್ತು ಯುನ್ನಾನ್ ಪ್ರಾಂತ್ಯದ ಗಡಿಯಲ್ಲಿ
ಎಷ್ಟು ಎತ್ತರ?: 565 ಮೀಟರ್
ಎಷ್ಟು ಉದ್ದ?: 1,340 ಮೀಟರ್
ಎಷ್ಟು ವೆಚ್ಚ?: ₹ 977 ಕೋಟಿ
ಯಾವ ಹೆದ್ದಾರಿ ಸಂಪರ್ಕಿಸುತ್ತದೆ?
ದಕ್ಷಿಣ ಚೀನಾದ ಗಯ್‌ಝೌ ರಾಷ್ಟ್ರೀಯ ಹೆದ್ದಾರಿ
ಎಷ್ಟು ವರ್ಷ ಬೇಕಾಯಿತು: ಸೇತುವೆ ನಿರ್ಮಾಣಕ್ಕೆ 3 ವರ್ಷ ತಗುಲಿತು
ಯಾವ ನದಿ ಮೇಲೆ ನಿರ್ಮಾಣಗೊಂಡಿದೆ?: ಬೀಪಾನ್ ನದಿ
ಜಗತ್ತಿನ ಟಾಪ್ ೧೦ ಅತಿ ಎತ್ತರದ ಸೇತುವೆಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.