ಸಮಾಜವಾದಿ ಪಕ್ಷದಿಂದ ಅಖಿಲೇಶ್ ಯಾದವ್ ಉಚ್ಚಾಟನೆ

By Suvarna Web DeskFirst Published Dec 30, 2016, 1:33 PM IST
Highlights

ಸಮಾಜವಾದಿ ಪಕ್ಷದಿಂದ ಉ.ಪ್ರ.ಮುಖ್ಯಮಂತ್ರಿ ಅಖಿಲೇಶ್ ಯಾದವ್, ಹಾಗೂ ಅವರ ಸಹೋದರ ರಾಮ್ ಗೋಪಾಲ್ ಯಾದವ್ ರನ್ನು ಪಕ್ಷದ ವರಿಷ್ಟ ಮುಲಾಯಂ ಸಿಂಗ್ ಯಾದವ್ ಉಚ್ಚಾಟಿಸಿದ್ದಾರೆ.

ನವದೆಹಲಿ (ಡಿ. 30): ಸಮಾಜವಾದಿ ಪಕ್ಷದಿಂದ ಉ.ಪ್ರ.ಮುಖ್ಯಮಂತ್ರಿ ಅಖಿಲೇಶ್ ಯಾದವ್, ಹಾಗೂ ಅವರ ಸಹೋದರ ರಾಮ್ ಗೋಪಾಲ್ ಯಾದವ್ ರನ್ನು ಪಕ್ಷದ ವರಿಷ್ಟ ಮುಲಾಯಂ ಸಿಂಗ್ ಯಾದವ್ ಉಚ್ಚಾಟಿಸಿದ್ದಾರೆ.

ಪಕ್ಷವನ್ನು ಉಳಿಸಲು ಅವರಿಬ್ಬರನ್ನು ಉಚ್ಚಾಟಿಸುವುದು ಅಗತ್ಯವೆಂದು ಮುಲಾಯಂ ಸಿಂಗ್ ತಮ್ಮ ನಡೆಗೆ ಸ್ಪಷ್ಟನೆ ನೀಡಿದ್ದಾರೆ.  ರಾಮ್ ಗೋಪಾಲ್ ಯಾದವ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಶಾಮೀಲಾಗಿದ್ದರು ಜೊತೆಗೆ ಪಕ್ಷವನ್ನು ಇನ್ನಷ್ಟು ದುರ್ಬಲಗೊಳಿಸಿದ್ದಾರೆ. ಎಂದು ಮುಲಾಯಾಂ ಸಿಂಗ್ ಆರೋಪಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರನ್ನು ರಾಮ್ ಗೋಪಾಲ್ ಯಾದವ್ ದಾರಿ ತಪ್ಪಿಸಿದ್ದರು. ಆದರೆ ಅಖಿಲೇಶ್ ಗೆ ರಾಮ್ ಗೋಪಾಲ್ ತನ್ನ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಎನ್ನುವುದು ಅರ್ಥವೇ ಆಗಿಲ್ಲವೆಂದು ಮುಲಾಯಂ ಸಿಂಗ್ ಆರೋಪಿಸಿದ್ದಾರೆ.

click me!