ಆಫ್ರಿಕಾದ ಗಣಿಯಲ್ಲಿ ವಿಶ್ವದ 5ನೇ ಅತೀ ದೊಡ್ಡ ವಜ್ರದ ಹರಳು ಪತ್ತೆ

By Suvarna Web DeskFirst Published Jan 16, 2018, 7:42 AM IST
Highlights

ಆಫ್ರಿಕಾದ ಲೆಸೊಥೊ ದೇಶದಲ್ಲಿ ವಿಶ್ವದ 5ನೇ ಅತಿದೊಡ್ಡ ವಜ್ರದ ಹರಳನ್ನು ಪತ್ತೆ ಮಾಡಲಾಗಿದೆ. ಲೆಟ್ಸೆಂಗ್ ಗಣಿಯಲ್ಲಿ ಜೆಮ್ ಡೈಮಂಡ್ಸ್ ಕಂಪನಿ 910 ಕ್ಯಾರಟ್‌ನ ವಜ್ರದ ಹರಳನ್ನು ಪತ್ತೆ ಮಾಡಿದೆ.

ಮಾಸೆರು (ಲೆಸೊಥೊ): ಆಫ್ರಿಕಾದ ಲೆಸೊಥೊ ದೇಶದಲ್ಲಿ ವಿಶ್ವದ 5ನೇ ಅತಿದೊಡ್ಡ ವಜ್ರದ ಹರಳನ್ನು ಪತ್ತೆ ಮಾಡಲಾಗಿದೆ. ಲೆಟ್ಸೆಂಗ್ ಗಣಿಯಲ್ಲಿ ಜೆಮ್ ಡೈಮಂಡ್ಸ್ ಕಂಪನಿ 910 ಕ್ಯಾರಟ್‌ನ ವಜ್ರದ ಹರಳನ್ನು ಪತ್ತೆ ಮಾಡಿದೆ.

ಈ ಹರಳಿನ ಮೌಲ್ಯ 250 ಕೋಟಿ ರು. ಎಂದು ಅಂದಾಜಿಸಲಾಗಿದೆ. 2006ರಲ್ಲಿ ಜೆಮ್ ಡೈಮಂಡ್ಸ್ ಲೆಟ್ಸೆಂಗ್ ಗಣಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ 603 ಕ್ಯಾರಟ್‌ನ ವಜ್ರದ ಹರಳು ಸೇರಿದಂತೆ ವಿಶ್ವದ ಅತ್ಯಂತ ಬೆಲೆಬಾಳುವ ವಜ್ರಗಳನ್ನು ಹೊರತೆಗೆದಿದೆ.

ದಕ್ಷಿಣ ಆಫ್ರಿಕಾದಲ್ಲಿ ದೊರೆತ ಕಲಿನನ್ ಡೈಮಂಡ್ ವಿಶ್ವದ ಅತಿದೊಡ್ಡ ವಜ್ರ ಎನಿಸಿಕೊಂಡಿದೆ.

click me!