ಬದುಕು ಅತ್ಯಂತ ದುಬಾರಿಯಾಗಿರುವ ವಿಶ್ವದ ನಗರಗಳ್ಯಾವು..?

By Suvarna Web DeskFirst Published Mar 19, 2018, 9:31 AM IST
Highlights

ಇಂದಿನ ದಿನದಲ್ಲಿ  ದಿನದಿಂದ ದಿನಕ್ಕೆ ಜೀವನ ಮಟ್ಟ ಏರಿಕೆಯಾಗುತ್ತಿದ್ದು, ವಸ್ತುಗಳ ದರವೂ ಗಗನಕ್ಕೇರುತ್ತಿದೆ.  

ನವದೆಹಲಿ : ಇಂದಿನ ದಿನದಲ್ಲಿ  ದಿನದಿಂದ ದಿನಕ್ಕೆ ಜೀವನ ಮಟ್ಟ ಏರಿಕೆಯಾಗುತ್ತಿದ್ದು, ವಸ್ತುಗಳ ದರವೂ ಗಗನಕ್ಕೇರುತ್ತಿದೆ.  ನಗರಗಳಲ್ಲಿನ ಜೀವನ ಮಟ್ಟವೂ ಏರಿಕೆಯಾದಂತೆ ಇಲ್ಲಿನ ಬದುಕು ಕೂಡ ಸಾಕಷ್ಟು ದುಬಾರಿಯಾಗುತ್ತಿದೆ.  ಅದರಂತೆ 2018ರಲ್ಲಿ ವಿಶ್ವದ  ಅತ್ಯಂತ ದುಬಾರಿ ನಗರಗಳ್ಯಾವು ಎನ್ನುವುದನ್ನು ಪಟ್ಟಿ ಮಾಡಿದಾಗ  ಪಟ್ಟಿಯಲ್ಲಿ ಸೇರಿದ ನಗರಗಳು ಇಂತಿವೆ.

ವಿಶ್ವದಲ್ಲೆ ಸಿಂಗಾಪುರ ಹೆಚ್ಚು ದುಬಾರಿ ನಗರ ಎಂದು  ಕರೆಸಿಕೊಂಡಿದೆ. ಎಕಾನಾಮಿಕ್ಸ್ ಇಂಟಲಿಜೆನ್ಸ್ ಯುನಿಟ್ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಹೊರಬಿದ್ದಿದೆ.

ಇನ್ನು ಸಿಂಗಾಪುರವನ್ನು ಹೊರತುಪಡಿಸಿದರೆ ಆಸ್ಟ್ರೇಲಿಯಾದ ಸಿಡ್ನಿಯು ಅತ್ಯಂತ ದುಬಾರಿ ನಗರ ಎಂದು ಕರೆಸಿಕೊಂಡಿದೆ.

 ಇಸ್ರೇಲ್ ಟೆಲ್ ಅವೀವ್ ಕೂಡ  ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಡೆನ್ಮಾರ್ಕ್’ ಕೋಪನ್ ಹೇಗನ್ ನಂತರದ ಸ್ಥಾನವನ್ನು ಪಡೆದುಕೊಂಡು ದುಬಾರಿ ಎನಿಸಿಕೊಂಡಿದೆ.

ದಕ್ಷಿಣ ಕೊರಿಯಾದ ಸಿಯೋಲ್  ನಂತರದ ಸ್ಥಾನದಲ್ಲಿದ್ದರೆ, ಸ್ವಿಜರ್ ಲ್ಯಾಂಡ್’ನ ಜಿನೇವಾ ಕೂಡ ದುಬಾರಿ ಎನಿಸಿಕೊಂಡಿದೆ. ನಾರ್ವೆಯ ಒಸ್ಲೋ, ಹಾಂಗ್’ಕಾಂಗ್, ಸ್ವಿಜರ್ ಲ್ಯಾಂಡ್’ನ ಜ್ಯೂರಿಚ್, ಪ್ಯಾರಿಸ್, ಸಿಂಗಾಫುರ ನಗರಗಳು ಅತ್ಯಂತ ದುಬಾರಿ 10 ನಗರಗಳು ಎನಿಸಿಕೊಂಡಿವೆ.

click me!