74ರಲ್ಲಿ ಮಗು ಹೆತ್ತ ವೃದ್ಧೆ: ಪತಿ, ಪತ್ನಿ ಇಬ್ಬರೂ ಐಸಿಯುನಲ್ಲಿ!

Published : Sep 16, 2019, 10:10 AM ISTUpdated : Sep 16, 2019, 11:16 AM IST
74ರಲ್ಲಿ ಮಗು ಹೆತ್ತ ವೃದ್ಧೆ: ಪತಿ, ಪತ್ನಿ ಇಬ್ಬರೂ ಐಸಿಯುನಲ್ಲಿ!

ಸಾರಾಂಶ

74ರಲ್ಲಿ ಮಗು ಹೆತ್ತ ಮಹಿಳೆ, ಪತಿ ಐಸಿಯುನಲ್ಲಿ!| 78ರ ಪತಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು| ಹೆರಿಗೆಯಾದಾಗಿನಿಂದ ವೃದ್ಧೆಗೆ ಐಸಿಯುನಲ್ಲಿ

ಹೈದರಾಬಾದ್‌[ಸೆ.16]: 74ನೇ ವಯಸ್ಸಿನಲ್ಲಿ ಅವಳಿ ಹೆಣ್ಣುಮಕ್ಕಳನ್ನು ಹೆರುವ ಮೂಲಕ 10 ದಿನಗಳ ಹಿಂದೆ ವಿಶ್ವದ ಗಮನ ಸೆಳೆದಿದ್ದ ಆಂಧ್ರಪ್ರದೇಶದ ಮಹಿಳೆ ಎರ್ರಮಟ್ಟಿಮಂಗಯಮ್ಮ ಹಾಗೂ ಅವರ ಪತಿ ರಾಜಾರಾವ್‌ (78) ಅವರಿಗೆ ಸಂಭ್ರಮದ ಜತೆಗೆ ಸಮಸ್ಯೆಯೂ ಎದುರಾಗಿದೆ. ವಿವಾಹವಾದ 57 ವರ್ಷಗಳ ಬಳಿಕ ಕೃತಕ ಗರ್ಭಧಾರಣೆ ವಿಧಾನದ ಮೂಲಕ ಮಗು ಪಡೆದ ಸಂಭ್ರಮದಲ್ಲಿದ್ದ ಈ ದಂಪತಿ ಸದ್ಯ ಆಸ್ಪತ್ರೆಯ ತುರ್ತು ನಿಗಾ ಘಟಕ ಸೇರಿದ್ದಾರೆ.

ಸೆ.5ರಂದು ಮಂಗಯಮ್ಮ ಅವರಿಗೆ ಹೆರಿಗೆಯಾಗಿತ್ತು. ದೇವರು, ವೈದ್ಯರ ದಯೆಯಿಂದ ಇಬ್ಬರು ಹೆಣ್ಣುಮಕ್ಕಳಿಗೆ ತಂದೆಯಾಗಿದ್ದೇನೆ. ಇಂದು ಜಗತ್ತಿನಲ್ಲೇ ಅತ್ಯಂತ ಸಂತೋಷಪಡುತ್ತಿರುವ ದಂಪತಿ ನಾವು ಎಂದು ಆ ದಿನ ಮಂಗಯಮ್ಮ ಪತಿ ರಾವ್‌ ಅವರು ಸಂತಸಪಟ್ಟಿದ್ದರು. ಆದರೆ ಅದಾದ ಮರುದಿನವೇ ಅವರು ಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದಿದ್ದಾರೆ. ಅಂದಿನಿಂದಲೂ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಅವರ ಅರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ.

74ರ ಇಳಿವಯಸ್ಸಿಗೆ ಅಮ್ಮ: ಅಜ್ಜಿಯ ಮಡಿಲಲ್ಲಿ ಅವಳಿ ಮಕ್ಕಳ ನೋಡಮ್ಮ!

ಮತ್ತೊಂದೆಡೆ ಮಂಗಯಮ್ಮ ಅವರು ಹೆರಿಗೆಯಾದ ದಿನದಿಂದಲೂ ಐಸಿಯುನಲ್ಲಿದ್ದಾರೆ. ಮಂಗಯಮ್ಮ ಕೂಡಾ ತೀರಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆಯಾದರೂ, ಅದನ್ನು ವೈದ್ಯರು ನಿರಾಕರಿಸಿದ್ದಾರೆ. ನಿತ್ಯವೂ ಅವರನ್ನು ನೋಡಲು ನೂರಾರು ಜನ ಬರುತ್ತಿದ್ದ ಕಾರಣ, ಅವರಿಗೆ ಯಾವುದೇ ಸೋಂಕು ತಗುಲದೇ ಇರಲಿ ಎನ್ನುವ ಕಾರಣಕ್ಕೆ ಅವರನ್ನು ಐಸಿಯು ಘಟಕದಲ್ಲಿ ಇಡಲಾಗಿತ್ತೇ ವಿನಃ, ಅವರಿಗೆ ಅಲ್ಲಿ ಯಾವುದೇ ವಿಷೇಷ ಚಿಕಿತ್ಸೆ ನೀಡಲಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ದಂಪತಿಯನ್ನು ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ವಿಶ್ವದ ಅತ್ಯಂತ ಹಿರಿಯ ತಂದೆ-ತಾಯಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಈ ಜೋಡಿಗೆ ಈಗ ತಮ್ಮ ಮಕ್ಕಳನ್ನು ನೋಡುವ ಅವಕಾಶವೂ ಸಿಗುತ್ತಿಲ್ಲ. 1.8 ಕೆ.ಜಿ. ತೂಕವಿರುವ ಮಕ್ಕಳು ಆರೋಗ್ಯದಿಂದ ಇವೆ. ಅವಕ್ಕೆ ಇನ್ನೂ ಹೆಸರಿಟ್ಟಿಲ್ಲ. ವೃದ್ಧ ದಂಪತಿಯ ಬಂಧುಗಳ ಆ ಆರೈಕೆಯಲ್ಲಿ ಆ ನವಜಾತ ಶಿಶುಗಳು ಇವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ