
ಬೀಜಿಂಗ್: ಮತ್ತೊಂದು ತಾಂತ್ರಿಕ ಅದ್ಭುತ ಸೃಷ್ಟಿಸಿರುವ ಚೀನಾ, ವಿಶ್ವದಲ್ಲೇ ಅತಿ ಉದ್ದನೆಯದಾದ ಸಮುದ್ರ ಸೇತುವೆಯೊಂದನ್ನು ನಿರ್ಮಾಣ ಮಾಡಿದೆ. ಬರೋಬ್ಬರಿ 55 ಕಿ.ಮೀ. ಉದ್ದವಿರುವ ಈ ಸೇತುವೆ ಅ.24ರ ಬುಧವಾರ ಲೋಕಾರ್ಪಣೆಯಾಗಲಿದೆ.
ಪಲ್‌ರ್ ನದಿಯ ಅಳಿವೆ ಪ್ರದೇಶದಲ್ಲಿ ಈ ಸೇತುವೆ ನಿರ್ಮಾಣವಾಗಿದೆ. 2009ರಲ್ಲಿ ಕಾಮಗಾರಿ ಆರಂಭವಾಗಿದ್ದು, ಸಹಸ್ರಾರು ಕೋಟಿ ರು.ಗಳನ್ನು ವ್ಯಯಿಸಲಾಗಿದೆ. ಈ ಸಮುದ್ರ ಸೇತುವೆ ಹಾಂಕಾಂಗ್- ಝುಹೈ- ಮಕಾವು ನಗರಗಳನ್ನು ಬೆಸೆಯಲಿದೆ. ಇದರಿಂದಾಗಿ ಹಾಂಕಾಂಗ್ ಹಾಗೂ ಝುಹೈ ನಡುವಣ ಪ್ರಯಾಣ ಅವಧಿ ಕೇವಲ 30 ನಿಮಿಷಕ್ಕೆ ತಗ್ಗಲಿದೆ.
ಹಾಂಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಸೇತುವೆ ನೇರ ಸಂಪರ್ಕ ಒದಗಿಸಲಿದೆ. ಇದರಿಂದಾಗಿ ಲಂಟೌ ದ್ವೀಪದಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಹಾಂಕಾಂಗ್‌ನ ರಾಜಕಾರಣಿಗಳು ಆಕ್ಷೇಪ ಎತ್ತಿದ್ದಾರೆ. ಆದರೆ ಗಡಿಯಾಚೆಗಿನ 5000 ವಾಹನಗಳಿಗೆ ಮಾತ್ರವೇ ಅನುಮತಿ ನೀಡಲಾಗುತ್ತದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.