ನನ್ನ ಹೆಸರ ಹೇಳದೇ 2024ರ ಚುನಾವಣೆ ಗೆಲ್ಲಿ: ಹೊಸ ಸಂಸದರಿಗೆ ಮೋದಿ ಕರೆ

Published : Aug 10, 2019, 03:03 PM ISTUpdated : Aug 10, 2019, 03:36 PM IST
ನನ್ನ ಹೆಸರ ಹೇಳದೇ 2024ರ ಚುನಾವಣೆ ಗೆಲ್ಲಿ: ಹೊಸ ಸಂಸದರಿಗೆ ಮೋದಿ ಕರೆ

ಸಾರಾಂಶ

2024ರ ವೇಳೆ ನಡೆಯುವ ಚುನಾವಣೆಗೆ ನಿಮ್ಮ ಸಾಮರ್ಥ್ಯದಿಂದ ಗೆಲ್ಲುವಂತೆ ಕೆಲಸ ಮಾಡಿ. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಕರೆ ನೀಡಿದ್ದಾರೆ. 

ನವದೆಹಲಿ [ಆ.10] : 2024ರಲ್ಲಿ ಬರುವ ಲೋಕಸಭಾ ಚುನಾವಣೆಗೆ ನನ್ನ ಮೇಲೆ ಯಾವುದೇ ಕಾರಣಕ್ಕೂ ಅವಲಂಬಿತರಾಗಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನೂತನ ಸಂಸದರಿಗೆ ಕರೆ ನೀಡಿದ್ದಾರೆ. 

ಸೂಕ್ತ ರೀತಿಯಲ್ಲಿ ಕೆಲಸ ಮಾಡುವ ಮೂಲಕ ನಿಮ್ಮ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದರ ಸಮಾವೇಶದಲ್ಲಿ ಕರೆ ನೀಡಿದರು. ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಲು ಸೂಚನೆ ನೀಡಿದರು. 

ಇನ್ನೂ ನಾಲ್ಕುವರೆ ವರ್ಷಗಳ ಕಾಲ ಅಧಿಕಾರ ನಿರ್ವಹಿಸಬೇಕಾಗುತ್ತದೆ. ನಿಮ್ಮ ಕೆಲಸ ನಿಮ್ಮನ್ನು ಕ್ಷೇತ್ರದ ಜನತೆ ಮತ್ತೊಮ್ಮೆ ಚುನಾಯಿತರನ್ನಾಗಿ ಮಾಡುವಂತೆ ಇರಬೇಕೆಂದು ಕಿವಿ ಮಾತು ಹೇಳಿದರು

ಮೋದಿ ಕಾಶ್ಮೀರ ಭಾಷಣ: ಕಾಶ್ಮೀರಿಗರ ಪಾಲಿಗೆ ವಿಷಪ್ರಾಶನ?

ಇದೇ ವೇಳೆ ಮಾತನಾಡಿದ ಈಶಾನ್ಯ ದೆಹಲಿ ಸಂಸದರಾಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್,  ತಮ್ಮ ರಾಜಕೀಯ ಜೀವನದ ಅನುಭವವ ಹೊಸ ದಾಗಿದ್ದು,  ತಾವು ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಮ್ಯಾಚ್ ಆಡುವ ಮುನ್ನ  ರೀತಿ ಆತಂಕಕ್ಕೆ ಒಳಗಾಗಿದ್ದೆ. ಅದೇ ರೀತಿ ಈಗಲೂ ಇತ್ತು.   ಆದರೆ ಮೋದಿಜಿ ಅವರು ಸಂಸದರೊಂದಿಗೆ ನಡೆದುಕೊಂಡ ರೀತಿ ಆತಂಕ ದೂರ ಮಾಡಿತು. ತಾವೇ ಕೈಯಾರ ಸ್ವತಃ ಆಹಾರ ಬಡಿಸಿ, ಸ್ಫೂರ್ತಿ ತುಂಬಿದರು ಎಂದಿದ್ದಾರೆ. 

ಅಲ್ಲದೇ ತಮ್ಮ ಕ್ಷೇತ್ರದಲ್ಲಿ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಕಾರಾತ್ಮಕವಾದ ವಿಚಾರಧಾರೆಗಳನ್ನು ಹಂಚಿಕೊಂಡು ಉತ್ಸಾಹ ತುಂಬಿದ್ದಾಗಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು