ದಸರಾ ಸಂಭ್ರಮಕ್ಕೆ ಭರ್ಜರಿ ತಾಲೀಮು

Published : Oct 08, 2016, 09:24 AM ISTUpdated : Apr 11, 2018, 12:55 PM IST
ದಸರಾ ಸಂಭ್ರಮಕ್ಕೆ ಭರ್ಜರಿ ತಾಲೀಮು

ಸಾರಾಂಶ

ಕಂಸಾಳೆ ಕರ್ನಾಟಕ ಕಲೆಯಲ್ಲಿ ಬಹುಬೇಗ ಗಮನ ಸೆಳೆಯುವ ಕುಣಿತ. ಯುವ ದಸರಾದಲ್ಲಿ ಕಂಸಾಳೆ ಜೊತೆಗೆ ನಾಡು ನುಡಿ ಬೆಳೆಸುವ ಹಲವು ನೃತ್ಯಗಳು ನಡೆದವು.

ಮೈಸೂರು(ಅ.8): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಮನೆಮಾಡಿದೆ. ಜಂಬೂಸವಾರಿಗೆ ಕೇವಲ ಮೂರು ದಿನ ಬಾಕಿಯಿದ್ದು, ಅರಮನೆ ಆವರಣದಲ್ಲಿ ಜಂಬೂಸವಾರಿ ಪೂರ್ವ ಸಿದ್ದತೆ ಜೋರಾಗಿಯೇ ನಡೀತಿದೆ. ಅರ್ಜುನ ಹಾಗೂ ಅಶ್ವರೋಹಿ ಪಡೆ ತಾಲೀಮ್ ನಲ್ಲಿ ಭಾಗಿಯಾಗಿದೆ.

ಮತ್ತೊಂದೆಡೆ ದಸರಾ ಪ್ರಯುಕ್ತ ಅನೇಕ ಕಾರ್ಯಕ್ರಮಗಳಿಗೆ ಇವತ್ತು ಕೂಡ ಚಾಲನೆ ನೀಡಲಾಯಿತು. ಚಾಮುಂಡಿ ಬೆಟ್ಟದ ಹತ್ತುವ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳು, ಪುರುಷರು, ಮಹಿಳೆಯರು ಮತ್ತು ಹಿರಿಯ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.

ರಂಗುಗೊಳಿಸಿದ ಯುವ ದಸರಾ

ಯುವ ದಸರಾದಲ್ಲಿ ಕಾಲೇಜು ವಿದ್ಯಾರ್ಥಿಗಳು ತಮ್ಮ ನೃತ್ಯದಿಂದ ಪ್ರದರ್ಶಿಸಿ ಇಡೀ ವೇದಿಕೆಯನ್ನು ಬೆರಗುಗೊಳಿಸುವುದ ಜೊತೆಗೆ ಇತಿಹಾಸವನ್ನು ನೆನಪಿಸಿದರು. ಕಂಸಾಳೆ ಕರ್ನಾಟಕ ಕಲೆಯಲ್ಲಿ ಬಹುಬೇಗ ಗಮನ ಸೆಳೆಯುವ ಕುಣಿತ. ಯುವ ದಸರಾದಲ್ಲಿ ಕಂಸಾಳೆ ಜೊತೆಗೆ ನಾಡು ನುಡಿ ಬೆಳೆಸುವ ಹಲವು ನೃತ್ಯಗಳು ನಡೆದವು. ಕನ್ನಡನಾಡು ಅಂದರೆ ಜನಪದಗಳ ಕಲೆಗಳ ನೆಲೆಬೀಡು. ಯುವ ದಸರಾದಲ್ಲಿ ಹತ್ತಾರು ಕಲಾವಿದರು ಜನಪದ ಹಾಡಿಗೆ ನೃತ್ಯ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?
ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?