ಸೇನೆಯಲ್ಲಿ ಮಹಿಳೆಯರಿಗೆ ಭರ್ಜರಿ ಅವಕಾಶ!: ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ

By Web DeskFirst Published Jan 19, 2019, 10:48 AM IST
Highlights

ಕೇಂದ್ರ ಸರ್ಕಾರದಿಂದ ಐತಿಹಾಸಿಕ ನಿರ್ಧಾರ| ಇನ್ಮುಂದೆ ಸೇನೆಯಲ್ಲಿ ಮಹಿಳೆಯರಿಗೆ ಭರ್ಜರಿ ಅವಕಾಶ| ಯಾವ ವಿಭಾಗದಲ್ಲಿ? ಯಾವ ಹುದ್ದೆ? ಇಲ್ಲಿದೆ ಮಾಹಿತಿ

ನವದೆಹಲಿ[ಜ.19]: ಭಾರತೀಯ ಸೇನೆಯ ಪೊಲೀಸ್‌ ವಿಭಾಗಕ್ಕೆ ಮಹಿಳೆಯರನ್ನೂ ನೇಮಕ ಮಾಡುವ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಅಲ್ಲದೆ ಹಂತಹಂತವಾಗಿ ನೇಮಕಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ಬಲದಲ್ಲಿ ಶೇ.20ರಷ್ಟುಮಹಿಳೆಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ರಕ್ಷಣಾ ಇಲಾಖೆ ಪ್ರಕಟಣೆ ಹೊರಡಿಸಿದೆ.

ಸಶಸ್ತ್ರ ಪಡೆಯಲ್ಲಿ ಮಹಿಳೆಯರ ಭಾಗಿದಾರಿಕೆಯನ್ನು ಹೆಚ್ಚಿಸುವ ಸಲುವಾಗಿ ಮೊಟ್ಟಮೊದಲ ಬಾರಿಗೆ ಸೇನೆಯ ಪೊಲೀಸ್‌ ವಿಭಾಗದಲ್ಲಿ (ಆಫೀಸರ್‌ ಹುದ್ದೆಗಿಂತ ಕೆಳಗಿನ ಹುದ್ದೆ) ಮಹಿಳೆಯರ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಮಹಿಳೆಯರಿಗೆ ರಕ್ಷಣಾ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲಿ ಅವಕಾಶ ಕಲ್ಪಿಸಲು ತಕ್ಷಣಕ್ಕೆ ಸಾಧ್ಯವಾಗದಿದ್ದರೂ, ಮುಂಬರುವ ದಿನಗಳಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಹೇಳಿದ್ದರು.

ಏನೆಲ್ಲಾ ಕೆಲಸಗಳು ಇರಲಿವೆ?

- ಗಡಿಯಲ್ಲಿ ಅತ್ಯಾಚಾರ, ಕಿರುಕುಳ, ಅಪಹರಣ ಪ್ರಕರಣಗಳು ನಡೆದಾಗ ತನಿಖೆ ಹೊಣೆ

- ಸೇನಾ ಕಾರ್ಯಾಚರಣೆ ಸಮಯದಲ್ಲಿ ಪೊಲೀಸರಿಂದ ಸಹಕಾರ ಅಗತ್ಯವಾದಾಗ ನೆರವು

- ಗಡಿ ನಿವಾಸಿಗಳನ್ನು ಸ್ಥಳಾಂತರಿಸುವ ವೇಳೆ ಸಿವಿಲ್‌ ಪೊಲೀಸರ ಜತೆ ಕೈಜೋಡಿಸುವುದು.

- ಮಹಿಳಾ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ನೆರವಿಗೆ ನಿಲ್ಲುವುದು.

- ಸೇನೆಯ ಕರ್ತವ್ಯ ಪಾಲನೆಯ ಸಂದರ್ಭದಲ್ಲಿ ಕಾರ್ಯನಿರ್ವಹಣೆ.

- ಸೇನಾ ನೆಲೆಗಳಲ್ಲಿ ಅಗತ್ಯ ಕಾರ್ಯನಿರ್ವಹಣೆ.

click me!