ತೆರೆಯುವ ಮೊದಲೇ ಮುಚ್ಚಲಿವೆ ಡಾನ್ಸ್ ಬಾರ್: ಸುಪ್ರೀಂಗೆ ಬಿಜೆಪಿ ಸಡ್ಡು!

By Web DeskFirst Published Jan 19, 2019, 9:40 AM IST
Highlights

ಡ್ಯಾನ್ಸ್‌ ಬಾರ್‌: ಸುಪ್ರೀಂ ಆದೇಶದ ವಿರುದ್ಧ ಸುಗ್ರೀವಾಜ್ಞೆ ಜಾರಿ ಚಿಂತನೆ| ಡಾನ್ಸ್‌ಬಾರ್‌ಗಳ ನಿಷೇಧ ಸಮರ್ಥಿಸಿಕೊಂಡ ಬಿಜೆಪಿ ಸರ್ಕಾರ

ಮುಂಬೈ[ಜ.19]: ರಾಜ್ಯದಲ್ಲಿ ಮತ್ತೆ ಡ್ಯಾನ್ಸ್‌ಬಾರ್‌ಗಳ ಆರಂಭಕ್ಕೆ ಸುಪ್ರೀಂಕೋರ್ಟ್‌ ಹೊರಡಿಸಿದ ಆದೇಶದಿಂದ ಪಾರಾಗುವ ನಿಟ್ಟಿನಲ್ಲಿ, ಸುಗ್ರೀವಾಜ್ಞೆ ಹೊರಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಡ್ಯಾನ್ಸ್‌ ಬಾರ್‌ ವಿಷಯದಲ್ಲಿ ಮತ್ತೊಮ್ಮೆ ಸುಪ್ರೀಂಗೆ ಸಡ್ಡು ಹೊಡೆಯುವ ಯತ್ನಕ್ಕೆ ಮುಂದಾಗಿದೆ.

ಡ್ಯಾನ್ಸ್‌ ಬಾರ್‌ ನಿಷೇಧಿಸುವ ಮಹಾ ಸರ್ಕಾರದ ನಿರ್ಧಾರವನ್ನು ಈ ಹಿಂದೆ ಬಾಂಬೆ ಹೈಕೋರ್ಟ್‌ ವಜಾಗೊಳಿಸಿತ್ತು. ಈ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಕೂಡಾ ಎತ್ತಿಹಿಡಿದಿತ್ತು. ಹೀಗಾಗಿ ಕಠಿಣ ನಿಯಂತ್ರಣ ಕ್ರಮ ಜಾರಿಗೊಳಿಸುವ ಮೂಲಕ ಮಹಾರಾಷ್ಟ್ರ ಸರ್ಕಾರ, ಹೊಸ ಡ್ಯಾನ್ಸ್‌ಬಾರ್‌ ಆರಂಭವಾಗದಂತೆ ನೋಡಿಕೊಂಡಿತ್ತು. ಆದರೆ ಗುರುವಾರ ಸುಪ್ರೀಂಕೋರ್ಟ್‌ ಹೊರಡಿಸಿದ ಆದೇಶದಿಂದಾಗಿ ಮತ್ತೆ ಡ್ಯಾನ್ಸ್‌ ಬಾರ್‌ಗಳು ಪುನಾರಂಭಕ್ಕೆ ವೇದಿಕೆ ಸೃಷ್ಟಿಯಾಗಿತ್ತು.

ಡಾನ್ಸ್ ಬಾರ್‌ಗಳು ಮತ್ತೆ ಓಪನ್: ಸುಪ್ರೀಂ ಸಮ್ಮತಿ!

ಈ ಹಿನ್ನೆಲೆಯಲ್ಲಿ ಡ್ಯಾನ್ಸ್‌ಬಾರ್‌ಗಳ ಮೇಲೆ ನಿಷೇಧ ಹೇರುವ ನಿಟ್ಟಿನಲ್ಲಿ ತಕ್ಷಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಣಕಾಸು ಖಾತೆ ಸಚಿವ ಸುಧೀರ್‌ ಮುಂಗಂಟಿವಾರ್‌ ತಿಳಿಸಿದ್ದಾರೆ. ಸುಪ್ರೀಂಕೋರ್ಟ್‌ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ಇದೇ ವೇಳೆ ರಾಜ್ಯದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತು ಜನರ ಹಿತದೃಷ್ಟಿಯ ನಿಟ್ಟಿನಲ್ಲಿ, ಡ್ಯಾನ್ಸ್‌ ಬಾರ್‌ಗಳು ತೆರೆಯದಂತೆ ನೋಡಿಕೊಳ್ಳಲು ಸುಗ್ರೀವಾಜ್ಞೆ ಹೊರಡಿಸಲೂ ನಾವು ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಮ್ಮೆ ಸುಪ್ರೀಂಕೋರ್ಟ್‌ ಆದೇಶದ ಪ್ರತಿ ನಮ್ಮ ಕೈಸೇರಿದ ಬಳಿಕ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಇದಕ್ಕಾಗಿ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಬೆಂಗಳೂರಲ್ಲಿ ಆರಂಭವಾಗುತ್ತಾ ಡ್ಯಾನ್ಸ್ ಬಾರ್

ಡ್ಯಾನ್ಸ್‌ಬಾರ್‌ಗಳ ಮೇಲೆ ನಿಯಂತ್ರಣ ಹೇರಬಹುದೇ ಹೊರತೂ, ಅವುಗಳನ್ನು ಪೂರ್ಣವಾಗಿ ನಿಷೇಧಿಸುವುದು ತಪ್ಪು. ಜೊತೆಗೆ ಡ್ಯಾನ್ಸ್‌ ಬಾರ್‌ಗಳಲ್ಲಿ ಸಿಸಿಟೀವಿ ಹಾಕಬೇಕು, ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ 1 ಕಿ.ಮೀ ದೂರದಲ್ಲಿ ಮಾತ್ರವೇ ಇಂಥ ಕೇಂದ್ರಗಳು ಇರಬೇಕು. ಡ್ಯಾನ್ಸ್‌ಬಾರ್‌ಗಳಲ್ಲಿ ನೃತ್ಯ ಮಾಡುವವರಿಗೆ ಟಿಫ್ಸ್‌ ನೀಡುವಂತಿಲ್ಲ ಎಂಬ ಮಹಾ ಸರ್ಕಾರದ ನಿಯಮಗಳನ್ನು ಸುಪ್ರೀಂಕೋರ್ಟ್‌ ಗುರುವಾರದ ತನ್ನ ಆದೇಶದಲ್ಲಿ ವಜಾಗೊಳಿಸಿತ್ತು. ಅಲ್ಲದೆ ಹೊಸ ಡ್ಯಾನ್ಸ್‌ಬಾರ್‌ ಲೈಸೆನ್ಸ್‌ ವಿತರಿಸಲೂ ಆದೇಶಿಸಿತ್ತು.

click me!