
ತುಮಕೂರು(ಸೆ.20): ಮಹಿಳೆಯೊಬ್ಬರು ಹಣಕ್ಕಾಗಿ ಮೂವರನ್ನು ಮದುವೆಯಾಗಿ ವಂಚಿಸಿರುವ ಘಟನೆ ನಗರದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಮಹಿಳೆಯ ಎರಡನೇ ಪತಿ, ನಗರದ ಎಸ್'ಎಸ್ ಪುರಂ ನಿವಾಸಿ ಜಗದೀಶ್ ಎಂಬುವವರು ಈ ಆರೋಪ ಮಾಡಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಜಿಲ್ಲೆಯ ತಿಪಟೂರು ತಾಲೂಕಿನ ಈಚನೂರು ಗ್ರಾಮದ ಮಹಿಳೆ, ಹಣ ಇರುವವರನ್ನು ಮದುವೆಯಾಗಿ ಬಳಿಕ ಅವರನ್ನು ಯಾಮಾರಿಸಿ ಅವರಿಂದ ಹಣ, ಒಡವೆ ಕಿತ್ತುಕೊಂಡ ಬಳಿಕ ಅವರಿಗೇ ಕಿರುಕುಳ ನೀಡಿ ವಿಚ್ಛೇದನ ಪಡೆಯುವುದನ್ನೇ ವ್ಯವಹಾರ ಮಾಡಿಕೊಂಡಿದ್ದಾಳೆ. ಈ ರೀತಿ ಆಕೆ ಈಗಾಗಲೇ ಮೂರು ಮದುವೆಯಾಗಿ ವಂಚಿಸಿದ್ದಾಳೆ.
ಈಕೆ 2000ದಲ್ಲಿ ತಿಪಟೂರಿನ ಲಿಂಗದೇವರು ಎಂಬುವವರನ್ನು ಮದುವೆಯಾಗಿದ್ದಳು. ಬಳಿಕ ಅವರಿಂದ ಹಣ, ಆಸ್ತಿ ಕಿತ್ತುಕೊಂಡು ವಿಚ್ಛೇದನ ಪಡೆದಳು. ಬಳಿಕ ‘ನನಗೆ ಮದುವೆಯೇ ಆಗಿಲ್ಲ’ ಎಂದು ಹೇಳಿ 2016ರಲ್ಲಿ ನನ್ನನ್ನು ವಿವಾಹವಾದಳು. ಆಮೇಲೆ, ನನಗೂ ಹಣಕ್ಕಾಗಿ ಕಿರುಕುಳ ನೀಡಿ, ನನ್ನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಳು. ಸಾಲದ್ದಕ್ಕೆ ವಿಚ್ಛೇದನ ಕೋರಿ ನ್ಯಾಯಾಲದ ಮೊರೆ ಹೋಗಿದ್ದಾಳೆ. ಈಗ ಮತ್ತೊಂದು ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.