
ಬೆಂಗಳೂರು(ಸೆ.20): ಅಂತೂ ಇಂತೂ ಬಿಎಂಟಿಸಿ ನಿಗಮ ಎಚ್ಚೆತ್ತುಕೊಂಡಿದೆ. ಪದೇ ಪದೇ ಬಿಎಂಟಿಸಿ ಬಸ್ಗಳಿಂದ ಆಗುತ್ತಿರುವ ಅವಘಡ, ಮುಖಭಂಗವನ್ನು ತಪ್ಪಿಸಿಕೊಳ್ಳಲು ಬಿಎಂಟಿಸಿ ನಿಗಮ ಮುಂದಾಗಿದೆ.
ಕಳೆದ ತಿಂಗಳು ನಗರದ ಪೀಣ್ಯ ಬಳಿ ವೇಗವಾಗಿ ಹೋಗುತ್ತಿದ ಬಸ್'ನ ಚಕ್ರ ಕಳಚಿ ಬಿದ್ದು ಕೂದಲಂತರದಲ್ಲಿ ಭಾರಿ ಅನಾಹುತ ತಪ್ಪಿತ್ತು. ಅಷ್ಟೇ ಅಲ್ಲದೆ ಸ್ವತಃ ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ 2 ಬಸ್ಗಳು ಮಾರ್ಗ ಮಧ್ಯೆಯೇ ಕೈಕೊಟ್ಟು ಭಾರಿ ಸುದ್ದಿಯಾಗಿತ್ತು. ಇದಾದ ಬಳಿಕ ನಿನ್ನೆ ಸಹ ವೇಗವಾಗಿ ಚಲಿಸುತ್ತಿದ ಬಿಎಂಟಿಸಿ ಬಸ್'ನ ಚಕ್ರ ಕಳಚಿದೆ. ಅಷ್ಟೇ ಅಲ್ಲದೆ ಹಳೆಯ ಬಸ್'ಗಳಿಂದ ಬಿಎಂಟಿಸಿ ಡ್ರೈವರ್ ಹಾಗೂ ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಇದಕ್ಕೆಲ್ಲ ಕಾರಣ ಏನು? ಎಂಬುದರ ಬಗ್ಗೆ ಸುವರ್ಣನ್ಯೂಸ್ ವಿಸ್ತೃತ ಸುದ್ದಿ ಪ್ರಸಾರ ಮಾಡಿತ್ತು.
ಇದರಿಂದ ಎಚ್ಚೆತ್ತುಕೊಂಡಿರುವ ಬಿಎಂಟಿಸಿ ನಿಗಮ, 8 ವರ್ಷ ಪೂರೈಸಿರುವ ಬಿಎಂಟಿಸಿ ಬಸ್'ಗಳನ್ನ ರಸ್ತೆಗೆ ಇಳಿಸದಿರಲು ಮುಂದಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಬಸ್'ಗಳು ಎಂಟು ವರ್ಷ ಪೂರೈಸಿದ್ದು , ಅವುಗಳನ್ನ ಹಂತ ಹಂತವಾಗಿ ಗುಜುರಿಗೆ ಹಾಕಲು ಬಿಎಂಟಿಸಿ ಮುಂದಾಗಿದೆ.
ಇದರ ಬಗ್ಗೆ ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ಸುವರ್ಣನ್ಯೂಸ್'ಗೆ ಅಧಿಕೃತ ಮಾಹಿತಿ ನೀಡಿದ್ದು, ಇದು ಸುವರ್ಣನ್ಯೂಸ್ ವರದಿಯ ಫಲಶೃತಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.