
ತುಮಕೂರು (ಡಿ.14): ಮದುವೆ ವಿಷ್ಯ ಬಚ್ಚಿಟ್ಟು ಮತ್ತೊಬ್ಬಳ ಜೊತೆ 4 ವರ್ಷ ಲವ್ವಿಡವ್ವಿ ಅಂತ ಸುತ್ತಾಡಿ ಮತ್ತೊಂದು ಮದ್ವೆಯಾದ. ಯಾವಾಗ ಗಂಡನ ಮದ್ವೆ ರಹಸ್ಯ ಗೊತ್ತಾಯ್ತೋ ಎರಡನೆ ಹೆಂಡತಿ ಪ್ರಶ್ನೆ ಮಾಡೋಕೆ ಶುರು ಮಾಡಿದ್ದಳು. ಇದರಿಂದ ಕೋಪಗೊಂಡ ಗಂಡ, ಮೊದಲನೆ ಹೆಂಡತಿ ಜೊತೆ ಸೇರಿಕೊಂಡು ಕಿರುಕುಳ ಕೊಡೋಕೆ ಶುರುಮಾಡಿದ್ದಾನೆ. ಕಾಯಿಸಿದ ಕಬ್ಬಿಣದ ರಾಡ್ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ್ದಾನೆ. ಇಂತದ್ದೊಂದು ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿಯಲ್ಲಿ ನಡೆದಿದೆ.
ದೇವರಹಳ್ಳಿಯ ನಿವಾಸಿ ರಂಗನಾಥಸ್ವಾಮಿ ಕಿರುಕುಳದಿಂದ ಬೇಸತ್ತ ನೊಂದ ಹೆಂಡತಿ ಮಂಜುಳಾ ಸದ್ಯ ಬೀದಿಗೆ ಬಿದ್ದಿದ್ದಾಳೆ. ಖಾಸಗಿ ಬಸ್ ಡ್ರೈವರ್ ಆಗಿದ್ದ ರಂಗನಾಥಸ್ವಾಮಿ, ಎಂಎ ಪದವಿಧರೆ ಜೊತೆ ಪ್ರೀತಿಯ ನಾಟಕವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಯಾವಾಗ ಆ ಯುವತಿ ಗರ್ಭಿಯಾದಳೋ ಆಗ ರಂಗನಾಥಸ್ವಾಮಿ ಕೈಕೊಡೋಕೆ ಮುಂದಾಗಿದ್ದಾನೆ. ಈ ವೇಳೆ ಮಂಜುಳಾ ಪೊಲೀಸರ ಮೊರೆ ಹೋಗ್ತೀನಿ ಅಂದಿದ್ದಾಳೆ. ಇದರಿಂದ ಹೆದರಿದ ರಂಗನಾಥಸ್ವಾಮಿ, ಆಕೆಯನ್ನು ಮದ್ವೆಯಾಗಿದ್ದ. ಆದರೆ ಮದುವೆಯಾದ ಮರುದಿನ ಗಂಡನ ಮೊದಲ ಮದುವೆ ಬಗ್ಗೆ ಮಂಜುಳಾಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯೊಂದಿಗೆ ಸೇರಿಕೊಂಡು ರಂಗನಾಥ ಮಂಜುಳಾಗೆ ಚಿತ್ರಹಿಂಸೆ ಕೊಡಲು ಆರಂಭಿಸಿದ್ದಾನೆ. ಕಳೆದ 8 ತಿಂಗಳಿನಿಂದ ನಿರಂತರವಾಗಿ ಹಿಂಸೆ ನೀಡಿದ್ದು ಮರ್ಮಾಂಗಕ್ಕೂ ಹಲ್ಲೆ ನಡೆಸಲಾಗಿದೆ. ಇತ್ತ ಗಂಡನೂ ಕೈಬಿಟ್ಟಿದ್ದಾನೆ. ಅತ್ತ ತವರು ಮನೆಯವರೂ ಸೇರಿಸುತ್ತಿಲ್ಲ. ಹೀಗಾಗಿ ನೊಂದ ಮಂಜುಳಾ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.