
ನವದೆಹಲಿ (ಡಿ.14): ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಔರಂಗಜೇಬನ ಫೋಟೊವನ್ನು ಹಾಕಿದ್ದಾರೆ ಎನ್ನುವ ಫೊಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯ ಅಕ್ಬರ್ ರೋಡ್’ನಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ತೆಗೆದಿರುವ ಫೋಟೊ ಇದಾಗಿದೆ.
ಚಿತ್ರದಲ್ಲಿ ಮನಮೋಹನ್ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಇದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಹಿಂಭಾಗದಲ್ಲಿ ಕಾಣುವ ಜೌರಂಗಜೇಬನ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಆದರೆ ನಿಜಕ್ಕೂ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಔರಂಗಜೇಬನ ಫೋಟೋ ಇತ್ತೇ ಎಂದು ಪರಿಶೀಲಿಸಿದಾಗ ಇದರ ಅಸಲಿಯತ್ತು ಬಯಲಾಗಿದೆ. ಈ ಫೋಟೋ ಡಿಸೆಂಬರ್ 4ನೇ ತಾರೀಖು ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಸಲ್ಲಿಸುವ ವೇಳೆ ತೆಗೆದ ಫೋಟೋ. ಅಸಲಿಗೆ ಕಾಂಗ್ರೆಸ್ ನಾಯಕರ ಹಿಂಭಾಗದಲ್ಲಿರುವುದು ಔರಂಗಜೇಬನ ಫೋಟೋವಲ್ಲ ಬದಲಿಗೆ ಮಹಾತ್ಮಾ ಗಾಂಧಿಯ ಭಾವಚಿತ್ರ. ಮಹಾತ್ಮಾ ಗಾಂಧಿಯ ಭಾವಚಿತ್ರಕ್ಕೆ ಬದಲಾಗಿ, ಔರಂಗಜೇಬನ ಫೋಟೋವನ್ನು ಫೊಟೋಶಾಪ್ ಮೂಲಕ ಎಡಿಟ್ ಮಾಡಿ ಆ ಜಾಗಕ್ಕೆ ಔರಂಗಜೇಬನ ಫೋಟೋವನ್ನು ಹಾಕಲಾಗಿದೆ.
ಕಾಂಗ್ರೆಸ್’ನ ಅಧಿಕೃತ ವಬ್’ಸೈಟ್ ಅಸಲಿ ಪೋಟೋವನ್ನು ಬಿಡುಗಡೆ ಮಾಡುವ ಮೂಲಕ ಈ ಗೊಂದಲವನ್ನು ಸ್ಪಷ್ಟಪಡಿಸಿದೆ. ಹಾಗಾಗಿ ದೆಹಲಿಯ ಅಕ್ಬರ್ ರೋಡ್’ಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಜೌರಂಗಜೇಬನ ಫೋಟೋವನ್ನು ಇಡಲಾಗಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.