ಬಿಜೆಪಿ ಸಂಸದನನ್ನು ಹನಿಟ್ರಾಪ್'ನಲ್ಲಿ ಸಿಲುಕಿಸಿದ ಆರೋಪಿ ಬಂಧನ

Published : May 02, 2017, 12:55 PM ISTUpdated : Apr 11, 2018, 01:02 PM IST
ಬಿಜೆಪಿ ಸಂಸದನನ್ನು ಹನಿಟ್ರಾಪ್'ನಲ್ಲಿ ಸಿಲುಕಿಸಿದ ಆರೋಪಿ ಬಂಧನ

ಸಾರಾಂಶ

ಗುಜರಾತ್ ಬಿಜೆಪಿ ಸಂಸದ ಕೆ.ಸಿ ಪಟೇಲ್ ರವರನ್ನು ಹನಿ ಟ್ರಾಪ್ ಬಲೆಯಲ್ಲಿ ಸಿಕ್ಕಿ ಹಾಕಿಸಿದ ಮಹಿಳೆಯೊಬ್ಬಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ನವದೆಹಲಿ (ಮೇ.01): ಗುಜರಾತ್ ಬಿಜೆಪಿ ಸಂಸದ ಕೆ.ಸಿ ಪಟೇಲ್ ರವರನ್ನು ಹನಿ ಟ್ರಾಪ್ ಬಲೆಯಲ್ಲಿ ಸಿಕ್ಕಿ ಹಾಕಿಸಿದ ಮಹಿಳೆಯೊಬ್ಬಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಹನಿಟ್ರಾಪ್ ನ ಪ್ರಮುಖ ಮಹಿಳಾ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.  ನಾವು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದೇವೆ.ಸಿಸಿಟಿವಿ ಫೂಟೇಜ್ ಗಳನ್ನು ಬಳಸಿಕೊಂಡು ಸಂಸದರಿಗೆ ಬ್ಲಾಕ್ ಮೇಲ್  ಮಾಡಿ ಸುಲಿಗೆ ಮಾಡುತ್ತಿದ್ದಳು ಎನ್ನಲಾಗಿದೆ. ಈ ಹಿಂದೆ ಸಂಸದರ ವಿರುದ್ಧ ತಿಲಕ್ ನಗರ ಪೋಲೀಸ್ ಸ್ಟೇಷನ್ ನಲ್ಲಿ ಅತ್ಯಾಚಾರದ ದೂರು ನೀಡಿದ್ದಳು. ಆದರೆ ಇಂದು ನ್ಯಾಯಾಲಯದ ಮುಂದೆ ಹಾಜರಾದಾಗ ಆಕೆಯ ವರಸೆಯೇ ಬದಲಾಗಿತ್ತು. ಈ ಕೃತ್ಯದಲ್ಲಿ ಆಕೆಯ ಜೊತೆ ಭಾಗಿಯಾದ ಇನ್ನಿತರ ಸಹಚರರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಈ ಸಂಬಂಧ ಇನ್ನಷ್ಟು ಪುರಾವೆಗಳನ್ನು ಸಂಗ್ರಹಿಸಲಿದ್ದೇವೆ ಎಂದು ವಿಶೇಷ ಪೊಲೀಸ್ ಆಯುಕ್ತ ಮುಕೇಶ್ ಕುಮಾರ್ ಮೀನಾ ಹೇಳಿದ್ದಾರೆ.

ಏನಿದು ಘಟನೆ?

ಗುಜರಾತ್'​ನ ವಲ್ಸದ್'​​ನಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿ ಸಂಸದ ಕೆ ಸಿ ಪಟೇಲ್ ರನ್ನು ಗಾಜಿಯಾಬಾದ್​​ನ ಪರಿಚಿತ ಮಹಿಳೆಯೊಬ್ಬರು ಮನೆಗೆ ಕರೆಯಿಸಿಕೊಂಡು ಚೆನ್ನಾಗಿ ಕುಡಿಸಿ ತಾನು ಅಶ್ಲೀಲ ಭಂಗಿಯಲ್ಲಿರುವುದನ್ನು ವಿಡಿಯೋ ಮಾಡಿದ್ದಾಳೆ. ಆ ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಹೇಳಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. 5 ಕೋಟಿ ರೂ ಕೇಳುತ್ತಿದ್ದಾಳೆ ಎಂದು ಬಿಜೆಪಿ ಸಂಸದ ಕೆ.ಸಿ.ಪಟೇಲ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್‌ನ ಕಟ್ಟಾಳು ಶಾಮನೂರು ಶಿವಶಂಕರಪ್ಪ: ದಾವಣಗೆರೆಯ ಅಜೇಯ ರಾಜಕೀಯ ದಂತಕಥೆ
ರುಪಾಯಿ ಮೌಲ್ಯ ಕುಸಿತದ ಎಫೆಕ್ಟ್‌: ಹೊಸ ವರ್ಷಕ್ಕೆ ದೇಶವಾಸಿಗಳಿಗೆ ಸಿಗಲಿದೆ ಶಾಕ್!