
ಇತ್ತೀಚಿಗೆ ಗಡ್ಡ ಬಿಡುವುದು ಯುವಕರಿಗೆ ಫ್ಯಾಷನ್ ಆಗಿದೆ. ಮೊದಲೆಲ್ಲ ನೀಟಾಗಿ ಶೇವ್ ಮಾಡುತ್ತಿದ್ದವರು ಈಗ ಗಡ್ಡಪ್ಪನಾಗುತ್ತಿದ್ದಾರೆ. ತಿಥಿ ಚಿತ್ರದ 'ಗಡ್ಡಪ್ಪ'ನವರು ಗಡ್ಡ ಬಿಟ್ಟದ್ದಕ್ಕೆ ಪ್ರಖ್ಯಾತಿ ಹೊಂದಿರುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಅಮೆರಿಕಾದಲ್ಲಿ ಒಂದು ವಿಚಿತ್ರ ನಡೆದಿದೆ.
ಯುವಕರಂತೆ ಮಹಿಳೆಯೊಬ್ಬರು ಗಡ್ಡ ಬಿಟ್ಟು ಪ್ರಖ್ಯಾತರಾಗಿದ್ದಾರೆ. ಅಮೆರಿಕಾದ ಒರಾಗಾನ್ ಪ್ರದೇಶದ 39 ವರ್ಷದ ರೋಸ್ ಗಾಯಲ್ ಮುಖದ ತುಂಬ ಗಡ್ಡ ಬಿಟ್ಟು ಗಡ್ಡಮ್ಮರಾಗಿದ್ದಾರೆ. ವೈದ್ಯಕೀಯದ ಪ್ರಕಾರ ಮಹಿಳೆಯರಿಗೆ ಗಡ್ಡ ಬರುವುದಿಲ್ಲ. ರೋಸ್ ಗಾಯಲ್ ತಮ್ಮ 13ನೇ ವರ್ಷದಲ್ಲಿ ಮುಖದಲ್ಲಿ ಸ್ವಲ್ಪ ಕೂದಲಿದ್ದ ಕಾರಣ ಶೇವ್ ಮಾಡಲು ಆರಂಭಿಸಿದ್ದಾರೆ. ಸುಮಾರು ವರ್ಷಗಳ ನಂತರ ಶೇವ್ ಮಾಡುವುದನ್ನು ನಿಲ್ಲಿಸಿದಾಗ ಮುಖದ ತುಂಬ ಗಡ್ಡ ಆವರಿಸಿ ಗಡ್ಡಮ್ಮನಾದರು.
Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.