ನೂಡಲ್ಸ್ ಪ್ಯಾಕ್ ನಲ್ಲಿ ಮಾದಕ ವಸ್ತು

Published : Aug 03, 2018, 09:50 AM IST
ನೂಡಲ್ಸ್ ಪ್ಯಾಕ್ ನಲ್ಲಿ ಮಾದಕ ವಸ್ತು

ಸಾರಾಂಶ

ನೂಡಲ್ಸ್ ಪ್ಯಾಕ್ ನಲ್ಲಿ ಭಾರೀ ಪ್ರಮಾಣದಲ್ಲಿ ಮಾಕ ವಸ್ತು ಪತ್ತೆಯಾಗಿದೆ. ಪ್ಯಾಕೇಟ್ ಗಳಲ್ಲಿ ಕೊಟ್ಯಂತರ ರು. ಮೌಲ್ಯದ ಕೊಕೇನ್, ಕೆಟಮಿನ್ ಸಾಗಣೆ ಮಾಡುತ್ತಿದ್ದ ಮಹಿಳೆಯನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳದ   ಅಧಿಕಾರಿಗಳು ಬಂಧಿಸಿದ್ದಾರೆ. 

ಬೆಂಗಳೂರು: ನೂಡಲ್ಸ್ ಪ್ಯಾಕೆಟ್‌ನಲ್ಲಿ ಕೊಕೇನ್, ಕೆಟಮಿನ್ ಸಾಗಣೆ ಮಾಡುತ್ತಿದ್ದ ಮಹಿಳೆಯನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿ 1.20 ಕೋಟಿ ರು. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ನಗರದ ಸ್ಪಾವೊಂದರ ಉದ್ಯೋಗಿ ಪಶ್ಚಿಮ ಬಂಗಾಳ ಮೂಲದ ಗ್ರೇಸ್ ರಾಯ್ (35) ಬಂಧಿತ ಆರೋಪಿ. 

ಆ.1ರಂದು ಗ್ರೇಸ್ ರಾಯ್ ಮುಂಬೈನಿಂದ ಸೆಮಿ ಸ್ಲೀಪರ್ ಬಸ್‌ನಲ್ಲಿ ಬರುತ್ತಿದ್ದು, ಈಕೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದಾಳೆ ಎಂಬ ಬಗ್ಗೆ ಕೇಂದ್ರ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು. ಮಡಿವಾಳಕ್ಕೆ ಬಂದು ಬಸ್‌ನಿಂದ ಕೆಳಗಿಳಿದ ಗ್ರೇಸ್ ರಾಯ್‌ಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಆಕೆಯ ಹ್ಯಾಂಡ್ ಬ್ಯಾಗ್ ತಪಾಸಣೆ ನಡೆಸಿದಾಗ ಮೂರು ನೂಡಲ್ಸ್ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಪ್ಯಾಕೆಟ್ ಹರಿದು ನೋಡಿದಾಗ ನೂಡಲ್ಸ್‌ನ ಮಸಾಲೆ ಪ್ಯಾಕೆಟ್‌ನಂತೆ ಇದ್ದ ಸಣ್ಣ ಸ್ಯಾಚೆಗಳಲ್ಲಿ ಡ್ರಗ್ಸ್ ಪುಡಿ ಕಂಡುಬಂದಿದೆ. ಲ್ಯಾಬ್‌ನಲ್ಲಿ ಪರೀಕ್ಷಿಸಿದಾಗ ಮಾದಕ ವಸ್ತು ಎಂದು ಖಚಿತವಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. 

ಮಹಿಳೆಯಿಂದ 1.20 ಕೋಟಿ ಮೌಲ್ಯದ 200 ಗ್ರಾಂ ಕೊಕೇನ್ ಮತ್ತು 50 ಸಾವಿರ ಮೌಲ್ಯದ 100 ಗ್ರಾಂ ಕೆಟಮಿನ್ ಜಪ್ತಿ ಮಾಡಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ  ಪಡೆದಿ ರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಮರಾಜನಗರ: ಕೂಲಿ ಕೆಲಸ ಮುಗಿಸಿ ವಾಪಾಸ್ ಹೋಗುವ ವೇಳೆ ಕಾಡಾನೆ ದಾಳಿ; ವ್ಯಕ್ತಿ ದುರ್ಮರಣ
ಮಲ್ಲಿಕಾರ್ಜುನ ಖರ್ಗೆಗೆ 'ಭಾರತ ರತ್ನ' ನೀಡುವಂತೆ ಕಾಂಗ್ರೆಸ್ ಮುಖಂಡ ಆಗ್ರಹ