
ಮೈಸೂರು: ನಗರದ ಆಯುರ್ವೇದ ವೃತ್ತದ ಬಳಿ ಎನ್. ಆರ್.ಸಂಚಾರ ಪೊಲೀಸರು ನಡೆಸಿದ ತಪಾಸಣೆ ವೇಳೆ 63, 500 ದಂಡ ಪಾವತಿ ಸಬೇಕಾದ ಸ್ಕೂಟರ್ ಸವಾರ ಸಿಕ್ಕಿಬಿದ್ದಿದ್ದಾರೆ. ಆ ಸ್ಕೂಟರ್ ಮೂಲ ಬೆಲೆ ಗಿಂತ ದಂಡದ ಮೊತ್ತವೇ ಹೆಚ್ಚು! ಸಂಚಾರ ಉಲ್ಲಂಘನೆ ಮಾಡುವವರ ವಿರುದ್ಧ ವಿಶೇಷ ವಾಹನ ಗಳ ತಪಾಸಣೆ ನಡೆಯುತ್ತಿತ್ತು.
ಈ ಸಮಯದಲ್ಲಿ ಹೊಂಡಾ ಆಕ್ಟಿವಾ ಸ್ಕೂಟರ್ (ನಂಬರ್ ಕೆಎ-09 ಎಚ್‌ಡಿ 4732 ) ವಾಹನವನ್ನು ತಪಾಸಣೆ ಮಾಡಿದಾಗ ಆ ವಾಹನ ದ ಮೇಲೆ 635 ಎಫ್‌ಟಿವಿಆರ್ ಸಂಚಾರ ಉಲ್ಲಂಘನೆಯ ಪ್ರಕರಣ ದಾಖಲಾಗಿರುವುದು ಕಂಡುಬಂದಿದೆ. ಈ ವಾಹ ನವು ನಗರದ ನಿವಾಸಿ ಕೆ.ಮಧುಪ್ರಸಾದ್ ಎಂಬವರಿಗೆ ಸೇರಿದೆ.
ವಾಹನವು ಪ್ರಸ್ತುತವಾಗಿ ಎನ್.ಸಂಚಾರ ಪೊಲೀಸ್ ಠಾಣೆಯ ವಶದಲ್ಲಿದೆ. ಇನ್ಸ್‌ಪೆಕ್ಟರ್ ಎನ್.ಜಯ ಕುಮಾರ್ ನೇತೃತ್ವದಲ್ಲಿ ಎಎಸ್‌ಐ ಎಂ.ದೀಪಕ್, ಸಿವಿಲ್ ಹೆಡ್ ಕಾನ್‌ಸ್ಟೆಬಲ್ ಎನ್.ನಾರಾಯಣಸ್ವಾಮಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಈ ಸ್ಕೂಟರ್ ಕಂಡುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.