ರೊಟ್ಟಿ ಸುಟ್ಟು ಹೋಗಿದ್ದಕ್ಕೆ ತಲಾಖ್ ಕೊಟ್ಟ ಭೂಪ!

Published : Jul 10, 2018, 10:53 AM IST
ರೊಟ್ಟಿ ಸುಟ್ಟು ಹೋಗಿದ್ದಕ್ಕೆ ತಲಾಖ್ ಕೊಟ್ಟ ಭೂಪ!

ಸಾರಾಂಶ

ಅಬ್ಬಬ್ಬಾ ಜನ ತಲಾಖ್ ಕೊಡೋಕೆ ಕೊಡೋ ಕಾರಣ  ನೋಡಿದ್ರೆ ಯಾರಿಗಾದರೂ ಸಿಟ್ಟು ಬರದೇ ಇರದು. ಯಾಕೆ ಗೊತ್ತಾ? ಇಲ್ನೋಡಿ,  

ಉತ್ತರಪ್ರದೇಶ ಮಹೋಬಾ ಜಿಲ್ಲೆಯ ಭೂಪನೊಬ್ಬ, ಪತ್ನಿ ಮಾಡಿದ ರೊಟ್ಟಿ ಸುಟ್ಟುಹೋಗಿದೆ ಎಂದು ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ.

ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಈತನಿಗೆ ಪತ್ನಿ ಮೇಲೆ ಪದೇ ಪದೇ ಭಾರೀ ಸಿಟ್ಟು ಬರುತ್ತಿತ್ತಂತೆ. 3 ದಿನಗಳ ಹಿಂದೆ ಪತ್ನಿ ಮಾಡಿದ್ದ ರೊಟ್ಟಿ ಸುಟ್ಟು ಕಪ್ಪಾಗಿದೆ ಎಂದು ಬೇಸತ್ತು ಆ ಕ್ಷಣದಲ್ಲೇ ತ್ರಿವಳಿ ತಲಾಖ್ ನೀಡಿದ್ದಾನೆ. ಪತ್ನಿ ಈ ಬಗ್ಗೆ ದೂರು ನೀಡಿದ ಬಳಿಕ ವಿಷಯ ಬಹಿರಂಗವಾಗಿದೆ.

ತ್ರಿವಳಿ ತಲಾಖ್ ಅಸಿಂಧು ಎಂಬ ಕಳೆದ ವರ್ಷದ ಕೋರ್ಟ್ ತೀರ್ಪು ಈ ಮಹಾನುಭಾವನಿಗೆ ಗೊತ್ತಿಲ್ಲವೆಂದು ಕಾಣುತ್ತೆ. ಕೇಂದ್ರದಲ್ಲಿ ಎನ್ ಡಿೆ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಮಹಿಳೆಯರ ಹಿತ ಕಾಪಾಡಲು ಅನೇಕ ಕ್ರಮ ತೆಗೆದುಕೊಂಡಿದ್ದು ಅದರಲ್ಲಿ ತಲಾಖ್ ರದ್ದು ಮಾಡಿರುವುದು ಒಂದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Davanagere South by election results 2026: ಇಂದು ಮತ ಎಣಿಕೆ ಹಿನ್ನೆಲೆ 'ಶುಷ್ಕ ದಿವಸ' ಘೋಷಣೆ, ಯಾವಕ್ಕೆಲ್ಲ ನಿರ್ಬಂಧ?
ದಕ್ಷಿಣಕ್ಕೆ ಸಮರ್ಥ ಆಯ್ಕೆಯೋ?, ಶ್ರೀನಿವಾಸ ಕಲ್ಯಾಣವೋ?! SDPI ಅಭ್ಯರ್ಥಿ ಅಫ್ಸರ್‌ ಸ್ಪರ್ಧೆಯಿಂದ 'ಕೊಡ್ಲಿ ಪೆಟ್ಟು' ಯಾರಿಗೆ?