
ನ್ಯೂಜರ್ಸಿ(ಜೂ.10): ಕೆಲವೊಂದು ಬಾರಿ ನಾವು ಮೊಬೈಲ್'ನಲ್ಲಿ ಅದೆಷ್ಟು ಮುಳುಗಿರುತ್ತೇವೆಂದರೆ ಖುದದಾಗಿ ನಾವೇ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೇವೆ. ಇಂತಹುದೇ ಘಟನೆಯೊಂದು ಅಮೆರಿಕಾದ ಮಹಿಳೆಯೊಂದಿಗೆ ನಡೆದಿದೆ. ಆಕೆ ಮೊಬೈಲ್'ಗೆ ಬಂದ ಮೆಸೇಜ್'ಗಳನ್ನು ಓದುವುದರಲ್ಲಿ ಎಷ್ಟು ತಲ್ಲೀನಳಾಗಿದ್ದಳೆಂದರೆ ತನ್ನೆದುರಿಗಿರುವ ಬೇಸ್'ಮೆಂಟ್'ನ ಬಾಗಿಲು ತೆರೆದಿದೆ ಎಂಬುವುದೂ ಆಕೆಯ ಗಮನಕ್ಕೆ ಬರಲಿಲ್ಲ. ಪರಿಣಾಮ ಬೇಸ್ಮೆಂಟ್'ಗೆ ಜಾರಿ ಬಿದ್ದು ಗಾಯಾಳುವಾಗಿದ್ದಾಳೆ.
ಅಮೆರಿಕಾದ ನ್ಯೂಜರ್ಸಿಯಲ್ಲಿ ನಡೆದ ಈ ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಯಾವ ರೀತಿ ಲೋಕದ ಪರಿವೆಯಿಲ್ಲದೇ ಮೊಬೈಲ್'ಗೆ ಬಂದ ಸಂದೇಶಗಳನ್ನು ಓದುವುದರಲ್ಲಿ ತಲ್ಲೀನಳಾದ ಮಹಿಳೆ ಬೇಸ್ಮೆಂಟ್'ನಲ್ಲಿ ಬೀಳುತ್ತಾಳೆ ಎಂಬುವುದನ್ನು ಈ ವಿಡಿಯೋದಲ್ಲಿ ನೀವು ಗಮನಿಸಬಹುದು. ಪಕ್ಕದಲ್ಲೇ ಹಾದು ಹೋಗುತ್ತಿದ್ದ ಯುವತಿಯರು ಕೂಡಾ ಮಹಿಳೆ ಬೀಳುತ್ತಿರುವುದನ್ನು ಕಂಡು ಭಯಗೊಂಡಿದ್ದಾರೆ ಆದರೂ ಹತ್ತಿರ ತೆರಳಿ ಏನಾಗಿದೆ ಎಂಬುವುದನ್ನು ತಿಳಿಯುವ ಯತ್ನ ನಡೆಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಕಾರ್ಮಿಕನೊಬ್ಬ ಬೇಸ್ಮೆಂಟ್ ಒಳಗಿನಿಂದ ಹೊರ ಬಂದಿದ್ದಾನೆ.
ಇನ್ನು ಮಹಿಳೆ ಬಿದ್ದ ಬೇಸ್ಮೆಂಟ್ 6 ಅಡಿ ಆಳವಿತ್ತು. ಹಾಗೂ ಗ್ಯಾಸ್ ಲೈನ್ ಸರಿ ಮಾಡುವ ಸಲುವಾಗಿ ಇದರ ಬಾಗಿಲು ತೆರೆಯಲಾಗಿತ್ತು ಎಂಬ ವಿಚಾರ ತಿಳಿದು ಬಂದಿದೆ. ಇನ್ನು ತುರ್ತು ಸೇವಾ ಘಟಕಕ್ಕೆ ಕರೆ ಮಾಡಿ ಮಹಿಳೆಯನ್ನು ಹೊರಗೆಳೆದಿದ್ದಾರೆ. ಬಿದ್ದ ರಭಸಕ್ಕೆ ಮಹಿಳೆಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.