ಜ್ಯೋತಿಷಿಗಳ ಮಾತಿಗೆ ಮರುಳಾಗಿ ಮೋಸ ಹೋದ ಮಹಿಳೆ

Published : Sep 03, 2018, 01:16 PM ISTUpdated : Sep 09, 2018, 09:11 PM IST
ಜ್ಯೋತಿಷಿಗಳ ಮಾತಿಗೆ ಮರುಳಾಗಿ ಮೋಸ ಹೋದ ಮಹಿಳೆ

ಸಾರಾಂಶ

ಸಮಸ್ಯೆ ಹೇಳಿಕೊಂಡು ಜ್ಯೋತಿಷಿಗಳ ಬಳಿ ಹೋದ ಮಹಿಳೆ ಅವರಿಂದಲೇ ವಂಚನೆಗೆ ಒಳಗಾದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ 5 ಲಕ್ಷ ಹಣ ಪಡೆದು ಮೋಸ ಮಾಡಿದ್ದಾರೆ.  

ಬೆಂಗಳೂರು :  ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಜ್ಯೋತಿಷಿ ಸಹೋದರರಿಬ್ಬರು ಮಹಿಳೆಯೋರ್ವರಿಗೆ ವಂಚನೆ ಮಾಡಿದ ಪ್ರಕರಣವೊಂದು ಇದೀಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.  

ಗಣೇಶ್ ಮತ್ತು ರಾಜನ್ ಎಂಬ ಇಬ್ಬರು ಜ್ಯೋತಿಷಿಗಳು ಮಹಿಳೆಗೆ 5 ಲಕ್ಷ ರು ವಂಚಿಸಿದ್ದಾರೆ.  ಶಾಸ್ತ್ರ ಕೇಳಲು ಹೋದಾಗ ಸರ್ಕಾರಿ  ನೌಕರಿ ಕೊಡುಸುತ್ತೇನೆ ಎಂದು ನಂಬಿಸಿ 5 ‌ಲಕ್ಷ ಪಡೆದಿದ್ದರು. ತಮಗೆ ಸಚಿವರು ಗೊತ್ತಿದ್ದು 5 ಲಕ್ಷ ಹಣ ನೀಡಿದರೆ ಟೈಪಿಂಗ್ ಕೆಲಸ ಕೊಡಿಸುವುದಾಗಿ ಹೇಳಿದ್ದರು. 

ಅದನ್ನು ನಂಬಿ ಜ್ಯೋತಿಷಿಗಳಿಗೆ ಮಹಿಳೆ ಹಣ ನೀಡಿದ್ದರು. ಆದರೆ ಇದೀಗ ಹಣವೂ ಇಲ್ಲ. ಕೆಲಸವೂ ಇಲ್ಲದಂತಾಗಿದೆ. ಈ ಬಗ್ಗೆ ಅವರ ಮನೆಗೆ ಹೋಗಿ ವಾಪಸ್ ಕೇಳಿದಾಗ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು  ಈ ಸಂಬಂಧ ಮಹಿಳೆ ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಶ್ ಸೋಲಿಸ್ತಾರಾ ರಣವೀರ್.. ಬ್ಲಾಕ್ ಬಸ್ಟರ್ 'KGF 2' ಬೀಟ್ ಮಾಡಲಿದ್ಯಾ ರಣವೀರ್ "ಧುರಂಧರ್..?
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ