ಗಂಗಾ ನದಿಯಲ್ಲಿ ಜಲ ತೀರ್ಥ ಯಾತ್ರೆ

By Web DeskFirst Published Sep 3, 2018, 12:18 PM IST
Highlights

ಗಂಗಾ ನದಿಯಲ್ಲಿ ಜಲ ತೀರ್ಥಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿದ್ದಾರೆ. ಅಲಕಾನಂದ ಎಂಬ ಪಂಚತಾರಾ ಐಷಾರಾಮಿ ಪ್ರವಾಸಿ ಹಡಗು ಭಾನುವಾರದಂದು ವಾರಾಣಸಿಯಲ್ಲಿ ತನ್ನ ಮೊದಲ ಸಂಚಾರ ನಡೆಸಿದೆ.

ವಾರಾಣಸಿ: ಜಲ ಪ್ರವಾಸೋದ್ಯಮವನ್ನು  ಉತ್ತೇಜಿಸುವ ನಿಟ್ಟಿನಿಂದ ಗಂಗಾ ನದಿಯಲ್ಲಿ ಜಲ ತೀರ್ಥಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿದ್ದಾರೆ. ಅಲಕಾನಂದ ಎಂಬ ಪಂಚತಾರಾ ಐಷಾರಾಮಿ ಪ್ರವಾಸಿ ಹಡಗು ಭಾನುವಾರದಂದು ವಾರಾಣಸಿಯಲ್ಲಿ ತನ್ನ ಮೊದಲ ಸಂಚಾರ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಈ ಹಡಗು ಪ್ರಮುಖ ಆಕರ್ಷಣೆ ಎನಿಸಲಿದೆ.

ಅಲಕಾನಂದ ಹಡಗಿನಲ್ಲಿ ಕುಳಿತು ಪ್ರವಾಸಿಗರು ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ನಡೆಯುವ ‘ಗಂಗಾ ಆರತಿ’ ಮತ್ತು ಅಸ್ಸಿ ಘಾಟ್ ನಲ್ಲಿ ನಡೆಯುವ ಸುಭಾ ಎ ಬನಾರಸ್ ಅನ್ನು ವೀಕ್ಷಿಸಬಹುದಾಗಿದೆ. ಹಡಗಿನ ಮೂಲಕ ಗಂಗಾ ನದಿಯಲ್ಲಿ ಸಂಚಾರವನ್ನು ‘ಜಲ ತೀರ್ಥಯಾತ್ರೆ’ ಎಂದೇ ಬಣ್ಣಿಸಲಾಗಿದೆ. 

ಇದರಲ್ಲಿ125 ಮಂದಿ ಕೂರಲು ಅವಕಾಶವಿದೆ. ಇದರಲ್ಲಿ 60 ಹವಾನಿಯಂತ್ರಿತ ಆಸನ  ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಗಂಗಾ ಆರತಿ ಮತ್ತು ಘಾಟ್‌ಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. 750 ರು. ನೀಡಿ ಪ್ರವಾಸಿಗರು ಎರಡು ಗಂಟೆಗಳ ಕಾಲ ಹಡಗಿನಲ್ಲಿ ಪ್ರಯಾಣಿಸಬಹುದಾಗಿದೆ. ಎಲ್ಲಾ ಹವಾಮಾನದಲ್ಲೂ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಹಡಗಿನಲ್ಲಿ ಯಾತ್ರಿಕರಿಗೆ ವಾರಾಣಸಿ ಸ್ಥಳ ಮಹಾತ್ಮೆಯನ್ನು ವಿವರಿಸಲಾಗುತ್ತದೆ. ಆರಂಭದಲ್ಲಿ ಹಡಗು ಅಸ್ಸಿ ಘಾಟ್ ಮತ್ತು ಪಂಚಗಂಗಾ ಘಾಟ್ ನಡುವಿನ 12 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುತ್ತದೆ.

click me!