
ನವದೆಹಲಿ (ಜೂ. 20): ಖಾಸಗಿ ದೂರಸಂಪರ್ಕ ಕಂಪನಿ ಏರ್‌ಟೆಲ್‌ನ ಗ್ರಾಹಕ ಸೇವಾ ಕೇಂದ್ರದ ಮುಸ್ಲಿಂ ಸಿಬ್ಬಂದಿಯೊಬ್ಬರ ಜತೆ ಸಮಸ್ಯೆ ಹೇಳಿಕೊಳ್ಳಲು ಮಹಿಳೆಯೊಬ್ಬರು ನಿರಾಕರಿಸಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಏರ್‌ಟೆಲ್ ಕಂಪನಿ ಮುಸ್ಲಿಮೇತರ ಪ್ರತಿನಿಧಿಯನು ಸಮಸ್ಯೆ ಆಲಿಸಲು ನಿಯೋಜಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಆಗಿದ್ದೇನು?:
ಲಖನೌ ಮೂಲದ ಪೂಜಾ ಸಿಂಗ್ ಏರ್‌ಟೆಲ್ ಡಿಟಿಎಚ್ ಗ್ರಾಹಕಿ. ಕಳಪೆ ಸೇವೆ ಸಂಬಂಧ ಅವರು ಟ್ವೀಟರ್ ಮೂಲಕ ದೂರು ನೀಡಿದ್ದರು. ಏರ್‌ಟೆಲ್‌ನ ಶೋಯೆಬ್ ಅದನ್ನು ಪರಿಹರಿಸಲು ಯತ್ನಿಸಿದ್ದರು. ಆದರೆ ಇದನ್ನು ಒಪ್ಪದ ಪೂಜಾ, ತಾವು ಮುಸ್ಲಿಮರಾಗಿರುವುದರಿಂದ ತಮ್ಮ ಕಾರ್ಯನಿರ್ವಹಣೆ ನೈತಿಕತೆ ಬಗ್ಗೆ ನನಗೆ ನಂಬಿಕೆ ಇಲ್ಲ. ಹೀಗಾಗಿ ಹಿಂದು ಪ್ರತಿನಿಧಿ ನಿಯೋಜಿಸಿ ಎಂದು ಕೋರಿದ್ದರು. ಆ ಬಳಿಕ ಗಗನ್‌ಜೋತ್ ಎಂಬ ಪ್ರತಿನಿಧಿ ಪೂಜಾರನ್ನು ಸಂಪರ್ಕಿಸಿ ಸಹಾಯ ಮಾಡಿದ್ದರು. ಇದು ಆಕ್ರೋಶದ ಮೂಲ.
ಆದರೆ ಏರ್‌ಟೆಲ್ ಹೇಳುವುದೇ ಬೇರೆ. ಜಾತಿ,ಧರ್ಮದ ಆಧಾರದ ಮೇಲೆ ಗ್ರಾಹಕರನ್ನು ಪ್ರತ್ಯೇಕಿಸಿ ನೋಡುವುದಿಲ್ಲ. ದೂರು ಇತ್ಯರ್ಥವಾಗದಿದ್ದ ಸಂದರ್ಭದಲ್ಲಿ ಗ್ರಾಹಕರು ಮತ್ತೊಮ್ಮೆ ಸಂಪರ್ಕಿಸಿದಾಗ, ಯಾರು ಲಭ್ಯವಿರುತ್ತಾರೋ ಅವರು ಪ್ರತಿಕ್ರಿಯಿಸುತ್ತಾರೆ. ಇದನ್ನು ತಪ್ಪಾಗಿ ವ್ಯಾಖ್ಯಾನಿಸಬಾರದು ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.