
ನಾಟಿಂಗ್‌ಹ್ಯಾಮ್[ಜೂ.20]: ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತದ ದಾಖಲೆ ಬರೆದಿದೆ. ಮಂಗಳವಾರ ಇಲ್ಲಿ ಆಸ್ಟ್ರೇಲಿಯಾ ವಿರುದಟಛಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಬರೋಬ್ಬರಿ 481 ರನ್ ಕಲೆಹಾಕುವ ಮೂಲಕ, ತನ್ನ ದಾಖಲೆಯನ್ನು ತಾನೇ ಮುರಿಯಿತು.
ಈ ಮೊದಲು ಪಾಕಿಸ್ತಾನ ವಿರುದ್ಧ 2016ರಲ್ಲಿ ಇಂಗ್ಲೆಂಡ್ ಗಳಿಸಿದ್ದ 444 ರನ್, ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತದ ದಾಖಲೆಯಾಗಿತ್ತು. ಆ ದಾಖಲೆ ಇದೀಗ ಉತ್ತಮಗೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಇಂಗ್ಲೆಂಡ್‌ಗೆ ಜಾನಿ ಬೇರ್‌ಸ್ಟೋವ್ (139), ಅಲೆಕ್ಸ್ ಹೇಲ್ಸ್ (142) ಶತಕಗಳು ಆಸರೆಯಾದವು. ಜೇಸನ್ ರಾಯ್ (82) ಸ್ಫೋಟಕ ಆಟ ಸಹ ತಂಡ ಬೃಹತ್ ಮೊತ್ತ ಗಳಿಸಲು ನೆರವಾಯಿತು. ನಾಯಕ ಇಯಾನ್ ಮೊರ್ಗನ್ ಕೇವಲ 30 ಎಸೆತಗಳಲ್ಲಿ 67 ರನ್ ಸಿಡಿಸಿದರು. ಆಸ್ಟ್ರೇಲಿಯಾ ತಂಡ 8 ಬೌಲರ್‌ಗಳನ್ನು ದಾಳಿಗಿಳಿಸಿದರೂ, ಇಂಗ್ಲೆಂಡ್ ಅಬ್ಬರವನ್ನು ತಡೆಯಲು ಸಾಧ್ಯವಾಗಲಿಲ್ಲ.
46 ಓವರ್ ವೇಳೆಗೆ 450 ರನ್ ಗಳಿಸಿದ್ದ ತಂಡ, ಕೊನೆ 4 ಓವರ್‌ನಲ್ಲಿ 50 ರನ್ ಗಳಿಸಿ ಏಕದಿನ ಇತಿಹಾಸದಲ್ಲೇ ಮೊದಲ 500 ರನ್ ತಲುಪಲಿದೆ ಎನ್ನುವ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ತಂಡ ಕೊನೆ 4 ಓವರ್‌ಗಳಲ್ಲಿ ಗಳಿಸಿದ್ದು 31 ರನ್ ಮಾತ್ರ. ಇತ್ತೀಚೆಗಷ್ಟೇ ನ್ಯೂಜಿಲೆಂಡ್ ಮಹಿಳಾ ತಂಡ 490 ರನ್
ಗಳಿಸಿ, ವಿಶ್ವ ದಾಖಲೆ ಬರೆದಿತ್ತು. ಆ ದಾಖಲೆಯನ್ನೂ ಇಂಗ್ಲೆಂಡ್ ಮುರಿಯಲು ಸಾಧ್ಯವಾಗಲಿಲ್ಲ.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 37 ಓವರ್ ಗಳಲ್ಲಿ 239 ರನ್ ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡು 242 ರನ್ ಗಳ ಭಾರಿ ಸೋಲು ಅನುಭವಿಸಿತು. 142 ರನ್ ಗಳಿಸಿದ್ದ ಅಲೆಕ್ಸ್ ಹೇಲ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಹಳೆಯ ದಾಖಲೆಗಳ ವಿವರ
481/6 ಇಂಗ್ಲೆಂಡ್ - ಆಸ್ಟ್ರೇಲಿಯಾ, 2018
444/3 ಇಂಗ್ಲೆಂಡ್ - ಪಾಕಿಸ್ತಾನ 2016
443/9 ಶ್ರೀಲಂಕಾ - ಹಾಲೆಂಡ್ 2006
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.