ಸುಳ್ಳು ಸುದ್ದಿಗೆ ಲಗಾಮು ಹಾಕಲು ಪತ್ರಕರ್ತರಿಗೆ ಗೂಗಲ್ ಟ್ರೇನಿಂಗ್ !

First Published Jun 20, 2018, 11:29 AM IST
Highlights

ಮಾಹಿತಿ ತಂತ್ರಜ್ಞಾನ ವಲಯದ ದೈತ್ಯ ಕಂಪನಿಯಾದ ಗೂಗಲ್ ಈಗ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವ ಸುಳ್ಳು ಸುದ್ದಿಗಳಿಗೆ ಲಗಾಮು ಹಾಕಲು ಮುಂದಾಗಿದೆ. ಈ ಸಂಬಂಧ ಪತ್ರಕರ್ತರಿಗೆ ತರಬೇತಿ ನೀಡಲು ಅದು ನಿರ್ಧರಿಸಿದೆ.

ನವದೆಹಲಿ (ಜೂ. 20): ಮಾಹಿತಿ ತಂತ್ರಜ್ಞಾನ ವಲಯದ ದೈತ್ಯ ಕಂಪನಿಯಾದ ಗೂಗಲ್ ಈಗ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವ ಸುಳ್ಳು  ಸುದ್ದಿಗಳಿಗೆ ಲಗಾಮು ಹಾಕಲು ಮುಂದಾಗಿದೆ. ಈ ಸಂಬಂಧ ಪತ್ರಕರ್ತರಿಗೆ ತರಬೇತಿ ನೀಡಲು ಅದು ನಿರ್ಧರಿಸಿದೆ.

‘ಮುಂದಿನ 1 ವರ್ಷದಲ್ಲಿ 8 ಸಾವಿರ ಇಂಗ್ಲಿಷ್ ಹಾಗೂ ಕನ್ನಡ  ಸೇರಿದಂತೆ 6 ಭಾರತೀಯ ಭಾಷೆಗಳ ಪತ್ರಕರ್ತರಿಗೆ ಸುಳ್ಳು ಸುದ್ದಿಗಳ ಬಗ್ಗೆ ಮುಂದಿನ 1 ವರ್ಷದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಗೂಗಲ್ ತಿಳಿಸಿದೆ.

‘ಇದರ ಮೊದಲ ಹಂತವಾಗಿ ದೇಶದ ವಿವಿಧ ಭಾಗಗಳಲ್ಲಿನ  200 ಪತ್ರಕರ್ತರನ್ನು ಆಯ್ಕೆ ಮಾಡಲಾಗುತ್ತದೆ. ಕನ್ನಡ, ತಮಿಳು, ತೆಲುಗು, ಬಂಗಾಳಿ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ದಿನಗಳ ತರಬೇತಿ ನೀಡಲಾಗುತ್ತದೆ’ ಎಂದು ಅದು ಹೇಳಿದೆ. ತರಬೇತಿ ಪಡೆದ ಈ 200 ಪತ್ರಕರ್ತರು ಮುಂದಿನ ದಿನಗಳಲ್ಲಿ ಇತರ ಪತ್ರಕರ್ತರಿಗೆ ತರಬೇತಿ ನೀಡಲಿದ್ದಾರೆ.

ಸುಳ್ಳು ಸುದ್ದಿಗಳನ್ನು ಕಂಡುಹಿಡಿಯುವುದು ಹೇಗೆ, ಅವನ್ನು ಪರಾಮರ್ಶಿಸುವುದು ಹೇಗೆ ಎಂಬ ಬಗ್ಗೆ ಇವರು ತರಬೇತಿ ನೀಡಲಿದ್ದಾರೆ.  

click me!