ಸಚಿವ ಮನುಗೂಳಿ ಕಾರು ತಡೆದ ಮಹಿಳೆ : ಮುಂದೇನಾಯ್ತು..?

Published : Dec 09, 2018, 10:28 AM IST
ಸಚಿವ ಮನುಗೂಳಿ ಕಾರು ತಡೆದ ಮಹಿಳೆ : ಮುಂದೇನಾಯ್ತು..?

ಸಾರಾಂಶ

ತೋಟಗಾರಿಕಾ ಸಚಿವ ಎಂಸಿ ಮನುಗೂಳಿ ಅವರ ಕಾರನ್ನು ಮಹಿಳೆಯೋರ್ವರು ತಡೆದು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ  ನಡೆದಿದೆ. 

ಸಿಂದಗಿ:  ತೋಟಗಾರಿಕೆ ಸಚಿವ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರ ಕಾರನ್ನು ಮಹಿಳೆಯೊಬ್ಬರು ತಡೆದು ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಶನಿವಾರ ನಡೆದಿದೆ. ಪಟ್ಟಣಕ್ಕೆ ಆಗಮಿಸಿದ್ದ ಸಚಿವ ಮನಗೂಳಿ ಅವರನ್ನು  ಜರಿನಾ ತಾಂಬೆ ಎಂಬ ಮಹಿಳೆ  ತರಾಟೆಗೆ ತೆಗೆದುಕೊಂಡರು.

‘ನಾವು ಮತ ಹಾಕುವ ನಮ್ಮನ್ನು ಮಾತನಾಡಿಸುತ್ತೀರಾ. ನಮಗೆ ಕೈಯನ್ನೂ ಮುಗಿಯುತ್ತೀರಿ. ಈಗ ನಾವೇ ನಿಮಗೆ ಕೈ ಮುಗಿಯುವಂತಾಗಿದೆ. ಎಲೆಕ್ಷನ್ ಮುಗಿದ ನಂತರ ನಮ್ಮನ್ನು ಯಾರೂ ಕೇಳುವವರೆ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನಮ್ಮ ಕೆಲಸ ಮಾಡಿಕೊಡಿ ಎಂದು ನಿಮ್ಮನ್ನು ಕೇಳಿದರೆ, ಬಿಜೆಪಿಯ ಭೂಸನೂರ ಬಳಿ ಹೋಗು ಎಂದು ಹೇಳುತ್ತಾರೆ. 

ನಾವು ನಿಮಗೆ ಮತ ಹಾಕಿ ಗೆಲ್ಲಿಸಿದ್ದೇವೆ. ಅವರನ್ನು ಯಾಕೆ ಕೇಳಬೇಕು’ ಎಂದು ಕಿಡಿಕಾರಿದಳು. ಮಹಿಳೆಯನ್ನು ಸಚಿವರ ಬೆಂಬಲಿಗರು ಸಮಾಧಾನಪಡಿಸಿದರು. ನಂತರ ಸಚಿವರು ಕಾರನ್ನೇರಿ ಮುಂದೆ ಸಾಗಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

887 ಕೋಟಿಯ ಮುಂಬೈ ಮರೀನಾ ಪ್ರಾಜೆಕ್ಟ್‌ಗೆ ಗ್ರೀನ್‌ಸಿಗ್ನಲ್‌ ನೀಡಿದ ಕೇಂದ್ರ ಸರ್ಕಾರ!
Gold Price: ಬಂಗಾರದ ಓಟಕ್ಕೆ ಬ್ರೇಕ್: ದಿಢೀರ್ ಕುಸಿದ ಚಿನ್ನದ ಬೆಲೆ, ಹೂಡಿಕೆದಾರರಲ್ಲಿ ಸಂಚಲನ