ಅನಂತ್ ಇಲ್ಲ, ಗೌಡ್ರು ಮೊಯ್ಲಿ, ಖರ್ಗೆ ಹೋಗ್ಲಿಲ್ಲ: ಸಂಕಷ್ಟದಲ್ಲಿ ದೆಹಲಿ-ಬೆಂಗ್ಳೂರು ಕನೆಕ್ಷನ್!

By Web DeskFirst Published May 29, 2019, 1:58 PM IST
Highlights

ದಿವಂಗತ ಅನಂತ್ ಕುಮಾರ್ ದೆಹಲಿಯಲ್ಲಿ ಭಾರೀ ವರ್ಚಸ್ಸಿದ್ದ ರಾಜಕಾರಣಿ | ಅವರ ನಿಧನದ ನಂತರ ಕರ್ನಾಟಕದ ಕೊಂಡಿಯೊಂದು ಕಳಚಿ ಬಿತ್ತು | ಖರ್ಗೆ, ದೇವೇಗೌಡ, ಮೊಯ್ಲಿ ಸೋಲಿನಿಂದ ಸಂಕಷ್ಟ ಎದುರಾಗಿದೆ. 

ನವದೆಹಲಿ (ಮೇ. 29): ದಿಲ್ಲಿಯಲ್ಲಿ ಬಿಜೆಪಿ ಮತ್ತು ಸರ್ಕಾರದ ಮೇಲೆ ಹಿಡಿತವಿರಿಸಿಕೊಂಡು ಲಾಬಿ ಮಾಡುವ ಪ್ರಭಾವ ಹೊಂದಿದ್ದ ಅನಂತಕುಮಾರ್‌ ತೀರಿಕೊಂಡಿದ್ದೇ ರಾಜ್ಯದ ಹಿತಾಸಕ್ತಿಗೆ ದೊಡ್ಡ ನಷ್ಟವಾಗಿತ್ತು.

ಮೋದಿ ಸಂಪುಟದಲ್ಲಿ ಮಂತ್ರಿಯಾಗೋರ್ಯಾರು?

ಈಗ ಚುನಾವಣೆಯಲ್ಲಿ ಖರ್ಗೆ, ದೇವೇಗೌಡ ಮತ್ತು ವೀರಪ್ಪ ಮೊಯ್ಲಿ ಸೋತಿರುವುದು ದಿಲ್ಲಿಯ ಕನೆಕ್ಷನ್ನನ್ನೇ ಕಟ್‌ ಮಾಡಲಿದೆ. ದಿಲ್ಲಿಯಲ್ಲಿ ಮಂತ್ರಿಗಳ ಎದುರು ಸ್ವಲ್ಪ ಪರಿಚಿತರಾಗಿರುವ ಸದಾನಂದಗೌಡ, ಪ್ರಹ್ಲಾದ್‌ ಜೋಷಿ, ಸುರೇಶ್‌ ಅಂಗಡಿ, ಉದಾಸಿ ಮೇಲೆ ರಾಜ್ಯದ ದೃಷ್ಟಿಯಿಂದ ದೊಡ್ಡ ಜವಾಬ್ದಾರಿಯಂತೂ ಇದ್ದೇ ಇದೆ.

ಸೋತಿರುವ ಖರ್ಗೆ, ವೀರಪ್ಪ ಮೊಯ್ಲಿ, ಕೆ ಎಚ್‌ ಮುನಿಯಪ್ಪ ಮುಂದಿನ 3 ತಿಂಗಳಲ್ಲಿ ಮನೆ ಖಾಲಿ ಮಾಡಬೇಕು. ಆದರೆ ಮಾಜಿ ಪ್ರಧಾನಿ ಆಗಿರುವುದರಿಂದ ದೇವೇಗೌಡರೇನೂ ಮನೆ ಖಾಲಿ ಮಾಡಬೇಕಿಲ್ಲ. ಆದರೆ ಇನ್ನುಮೇಲೆ ಗೌಡರ ದಿಲ್ಲಿ ಯಾತ್ರೆಗಳು ಕಡಿಮೆ ಆಗಬಹುದು.

ಅಂದ ಹಾಗೆ 20 ವರ್ಷದಿಂದ ದೇವೇಗೌಡರು ಕೊಟ್ಟಿದ್ದ ಒನ್‌ ರೂಮ್ ಅತಿಥಿ ಕೋಣೆಯಲ್ಲಿ ಇರುತ್ತಿದ್ದ ಡ್ಯಾನಿಶ್‌ ಅಲಿ ಆ ಕಡೆ ಗೌಡರು ಸೋತಾಗಲೇ ಈ ಕಡೆ ಸಂಸದರಾಗಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಕ್ಲಿಕ್ ಮಾಡಿ 


 

click me!